![]()
ತೇಜಸ್ವಿ ಬಂದೂಕಿಗಿಂತ ಹೆಚ್ಚಾಗಿ ಕೆಮರಾ ಹಿಡಿದು ಮೂಡಿಗೆರೆಯ ಕಾಡಲ್ಲಿ ಅಲೆದವರು. ಹಕ್ಕಿಯ ಒಂದು ಅತಿ ಸುಂದರ ಗಳಿಗೆಗಾಗಿ ನಿರಂತರ ಕಾದವರು. ಹಾಗೆ ಕಾದೂ, ಓಹ್ ಸರಿಯಾಗಿ ಸೆರೆ ಹಿಡಿಯಲಾಗಲಿಲ್ಲ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಹಕ್ಕಿಯ ಹಿಂದೆ ಅದರ ಅದ್ಭುತ ಛಾಯೆಯನ್ನು ಗೆದ್ದೇ ಗಲ್ಲುವ ಉಮೇದಿಯಲ್ಲಿ ನಡೆದವರು. ಈಗಲೂ ಹಕ್ಕಿಯ ಹಿಂದೆ ಸಾಗಿಯೇ ಇದ್ದಾರೇನೋ ಎಂದು ಅನಿಸುವಷ್ಟರ ಮಟ್ಟಿಗೆ ಅದರ ಗುಂಗು ಉಳಿಸಿಹೋದವರು.
![]()
ಅಪರೂಪದ ಛಾಯಾಗ್ರಾಹಕರಾಗಿದ್ದ ತೇಜಸ್ವಿಯವರು ಸೆರೆ ಹಿಡಿದಿಟ್ಟು ಹೋದ ಅಪೂರ್ವ ಗಳಿಗೆಗಳು ಒಂದೆರಡಲ್ಲ. ಅಂಥ ತೇಜಸ್ವಿಯವರು ತಮ್ಮ ಆಪ್ತ ವಲಯದಲ್ಲಿ ತೋರುತ್ತಿದ್ದ ಲಹರಿ ಕೂಡ ಅಷ್ಟೇ ಆಪ್ತವಾದುದು, ಅತಿ ಮಧುರವಾದುದು. ಅದು ಎಂದೆಂದೂ ಜೊತೆಗಿರಲಿ ಎಂಬ ಹಂಬಲದಿಂದ ಸೆರೆಯಾಗಿಸಿದವರಲ್ಲಿ ಛಾಯಾಗ್ರಾಹಕ ನೇತ್ರರಾಜು ಕೂಡ ಒಬ್ಬರು. ಅವರು ಸೆರೆ ಹಿಡಿದ ತೇಜಸ್ವಿ ಗಳಿಗೆಗಳು ಇಲ್ಲಿವೆ.
ಈ ಛಾಯಾ ಗಳಿಗೆಗಳನ್ನು
ಬಳಸಿಕೊಳ್ಳಲು
ಪ್ರೀತಿಯಿಂದ ಒಪ್ಪಿದ
ನೇತ್ರರಾಜು ಅವರಿಗೆ
ಕೃತಜ್ಞತೆಗಳು.





Hey thanks a lot avadhi……thanks to Mr.netraraju too…:)
Sunil.
nethraraju nice photo
dear nethra raju
ninna sarakannu hora thegeyo ninna shakthi aanekarige gothilla .ninna daridhra parathatha galannu bittu valle chitra thorisu.