ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯವರ “ಜುಗಾರಿ ಕ್ರಾಸ್” effect!

“ಈ ಜಿಟಿಜಿಟಿ ಮಳೆ… ತೇಜಸ್ವಿಯವರ “ಜುಗಾರಿ ಕ್ರಾಸ್” effect ಇರಬಹುದಾ?

– ಶಿವು.ಕೆ

ನಿನ್ನೆ ಆಜಾದ್ ಮನೆಯ ಗೃಹಪ್ರವೇಶ ಮುಗಿಸಿ ಮನೆಗೆ ಬಂದಾಗ ಐದುವರೆ. ಅದ್ಯಾಕೋ ಏನೂ ಕೆಲಸ ಮಾಡಲು ಮನಸ್ಸಾಗುತ್ತಿಲ್ಲ. ಸುಮ್ಮನೇ ಹಾಸಿಗೆ ಮೇಲೆ ಬಿದ್ದುಕೊಂಡೆ.ಪಕ್ಕದಲ್ಲಿಯೇ ತೇಜಸ್ವಿಯವರ ದಿನಕ್ಕೆರಡು ಪುಟಗಳನ್ನು ಓದಿಸಿಕೊಳ್ಳುತ್ತಿದ್ದ “ಜುಗಾರಿ ಕ್ರಾಸ್” ಕೂಡ ಮಲಗಿತ್ತು. ಇವತ್ತು ಓದಿ ಮುಗಿಸಲೇಬೇಕು ಎಂದುಕೊಂಡು ಸರಿಯಾಗಿ ಆರುಗಂಟೆಗೆ ಶುರುಮಾಡಿದೆ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದುಗಂಟೆ. ನಡುವೆ ಒಮ್ಮೆಯೂ ಹಾಸಿಗೆ ಬಿಟ್ಟೇಳದೆ ಹಾಗೆ ಒಂದೇ ಗುಕ್ಕಿಗೆ ಓದಿ ಮುಗಿಸಿದ್ದೆ. ಅಜಾದ್ ಮನೆಯ ಗೃಹಪ್ರವೇಶದ ಪುಲ್ ಮೀಲ್ಸ್ effectನಿಂದಾಗಿ ರಾತ್ರಿ ಊಟ ಬೇಡವಾಗಿತ್ತು. ಈಗ ಎದ್ದು ಯಾವ ರಾಜ್ಯವನ್ನು ಆಳಬೇಕು ರಾತ್ರಿ ಹನ್ನೊಂದುಗಂಟೆಯಲ್ಲಿ?

ಹಾಗೆ ಮಲಗಿದೆ! ರಾತ್ರಿಯೆಲ್ಲಾ ಕತ್ತಲಿನಲ್ಲಿ ಬೆಳಕಿನ ರೇಖೆಯಂತೆ ಕಾಣುವ ರೈಲು ಹಳಿಗಳು, ಸುರಂಗ, ನಾನು ರೈಲಿಂದ ಹಾರುವುದು, ಕತ್ತಲಲ್ಲಿ ಅಡ್ಡ ಸುರಂಗದೊಳಗೆ ಹೋಗುವುದು, ದಾರಿ ತಪ್ಪಬಾರದೆಂದು ಫೋಟೊ ಕ್ಲಿಕ್ಕಿಸುವುದು, ಯಾವುದೋ ಅಪರೂಪದ ಯಾರಿಗೂ ಇದುವರೆಗೂ ಕಂಡುಹಿಡಿಯಲಾಗ ಒಂದನ್ನು ನಾನು ಕ್ಲಿಕ್ಕಿಸಿರುವುದು ಬೇರೆ ಯಾರಿಗೂ ಗೊತ್ತಾಗಬಾರದೆಂದು ಆ ಮೆಮೋರಿ ಕಾರ್ಡನ್ನು ಸುರಂಗದಲ್ಲಿಯೇ ಒಂದುಕಡೆ ಕಾಣದಂತೆ ಜೋಪಾನ ಮಾಡಿ ಸುರಂಗದಿಂದ ಹೊರಬಂದು ನೋಡಿದರೆ ಜಡಿಮಳೆಯಲ್ಲಿ ಯಾರೋ ಹಿಂಬಾಲಿಸುತ್ತಿದ್ದಾರೆ!

ಹೆದರಿ ಜೋರಾಗಿ ಓಡುತ್ತಿದ್ದೇನೆ! ಓಡುವ ರೈಲಿಂದ ಹಾರಿದಾಗ ಕಾಲು ಮುರಿದುಕೊಂಡಿದ್ದರೂ ಅದ್ಯಾಗೆ ಅವರ ಕೈಗೆ ಸಿಗದಂತೆ ಜೋರಾಗಿ ಓಡುತ್ತಿದ್ದೆನೋ…! ಇನ್ನೇನು ಕೆಂಪು ಮಪ್ಲರಿನವರು ನನ್ನ ಬೆನ್ನಿಗೆ ಜೂರಿ ಹಾಕಬೇಕು…ಹ್ಯಾಗೋ ಸಾಯುತ್ತೇನೆ..ಸಾಯುವ ಮೊದಲು ಅವರದೊಂದು “ಕ್ಯಾಂಡಿಡ್” ಫೋಟೊ ಕ್ಲಿಕ್ಕಿಸಿಬಿಡೋಣವೆಂದು ಕ್ಯಾಮೆರವನ್ನು ಹಿಂಬದಿಗೆ ತಿರುಗಿಸಿ ನಾನು ಕ್ಲಿಕ್ ಮಾಡುವುದಕ್ಕೂ ಅತ್ತ ಅವರ ಚೂರಿ ನನ್ನ ಬೆನ್ನಿಗೆ ನುಗ್ಗುವುದಕ್ಕು ಒಂದೇ ಆಗುವಷ್ಟರಲ್ಲಿ” ಪಳ್ ಅಂತ ಸಿಡಿಲು ಹೊಡೆದಂತೆ ನನ್ನ ಪಕ್ಕದಲ್ಲಿಯೇ ಮಲಗಿದ್ದ ಮೊಬೈಲು ಆಲರಂ ಗಂಟೆ ಕಿರುಚಿತ್ತು.

ಎದ್ದು ನೋಡುತ್ತೇನೆ…ಆಗಲೇ ಮುಂಜಾನೆ ನಾಲ್ಕುವರೆ! ಅಯ್ಯೋ ಕನಸಾ! ಕೊನೆಗೂ ಕ್ಲಿಕ್ಕಿಸಿದ್ದ ಕೆಂಪು ಮಪ್ಲರಿನವರ ಫೋಟೊಗಳನ್ನು ನೋಡಲಾಗಿಲಿಲ್ಲವಲ್ಲ ಎಂದುಕೊಂಡು ಎದ್ದು ಸಿದ್ದನಾಗಿ ಪೇಪರ್ ಕೆಲಸಕ್ಕೆ ಹೊರಡಲು ಸಿದ್ದನಾದರೆ ಹೊರಗೆ ಅದೇ ಜಿಟಿಜಿಟಿ ಮಳೆ….ಜುಗಾರಿ ಕ್ರಾಸಿನಲ್ಲಿ ರಾತ್ರಿ ಹಿಡಿದ ಜಿಟಿಜಿಟಿ ಮಳೆ ಇನ್ನೂ ಬಿಟ್ಟಿಲ್ಲವಲ್ಲ…..ಹಾಗಾದರೆ ಇದು ಕನಸಾ ಅಥವ ನಿಜವಾ?…ಅಥವ ತೇಜಸ್ವಿಯವರ ಜುಗಾರಿ ಕ್ರಾಸ್ effect..ಇರಬಹುದಾ….

‍ಲೇಖಕರು G

1 November, 2012

3 Comments

  1. shivu k

    Thanks avadhi….

    Shivu K

  2. M.S.Krishna Murhy

    ಚೆನ್ನಾಗಿದೆ ಶಿವು. ಅಭಿನಂದನೆಗಳು

  3. gururaja papanna block

    it is really nice article,thank you shivu. but ‘jugari cross’ is not so simple as a dream,you need to go deep in to the novel.every other reading gives you a different feeling, i expect another article from you after reading it twice or thrice. keep on writing shivu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading