'ತಿನ್ನೋ ಅನ್ನನ ಯಾರಾನಾ ರೈಸ್ ಅನ್ತಾರಾ..?'

ಗೋಮಾರದಹಳ್ಳಿ ಮಂಜುನಾಥ್ ಸಿರಾ



ಇದು ಸುಮಾರು ಹದಿನೈದು ವರ್ಷದ ಹಿಂದಿನ ಪ್ರಸಂಗ.

ಶಿರಾ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆ ಇತ್ತು. ನಾನು ಹೋಗಿದ್ದೆ. ದೂರದ ಹಳ್ಳಿಯ ನಮ್ಮ ಅಪ್ಪನ ಅತ್ತೆ ರಂಗಜ್ಜಿ ಕೂಡ ಬಂದಿತ್ತು.
ಊಟಕ್ಕೆ ರಂಗಜ್ಜಿ ಪಕ್ಕ ಕೂತೆ. ಹಪ್ಪಳ, ಉಪ್ಪಿನಕಾಯಿಯಲ್ಲದೆ ಬೇರೆ ಬೇರೆ ಐಟಂ ಇದ್ದು ಊಟ ಪುಷ್ಕಳವಾಗಿತ್ತು. ರಂಗಜ್ಜಿಯೂ ಕೊನೆಗೆ ಅನ್ನಕ್ಕೆ ಮಜ್ಜಿಗೆ ಬಿಡಿಸಿಕೊಂಡು ಸಂತೃಪ್ತವಾಗಿ ಊಟ ಮಾಡಿ ಕೈ ತೊಳೆಯಲು ಏಳಬೇಕಿತ್ತು. ಅವನ್ಯಾರೋ ಕೊನೆಯಲ್ಲಿ ಊಟದ ಸಾಲಿಗೆ ‘ರೈಸ್ ಬೇಕಾ…ಯಾರಿಗಾದರೂ ರೈಸ್ ಬೇಕಾ?’ ಅಂತ ಕೂಗಿಕೊಂಡು ಬಂದ. ಆಗ ರಂಗಜ್ಜಿ ಮನದಲ್ಲೇ ‘ರೈಸ್..?! ಅದೆಂತದೋ..? ಅದರ ರುಚಿ ಕೂಡ ನೋಡೋಣ’ ಎಂದ್ಕೊಂಡು ‘ಲೇ ಪಾಪ, ಇಲ್ಲಿ ಸ್ವಲ್ಪ ಹಾಕು ಬಾರೋ ..’ಅಂತು. ಅವನು ಬಂದವನೇ ರಂಗಜ್ಜಿ ಊಟದ ಎಲೆಗೆ ಅನ್ನ ಇಟ್ಟ.
ಆಗ ರಂಗಜ್ಜಿ ಬಹಳ ಬೇಸರದಿಂದ ‘ಅಯ್ಯೋ ಮನಪಾಪಿ, ತಿನ್ನೋ ಅನ್ನನ ಯಾರಾನಾ ರೈಸ್ ಅನ್ತಾರಾ..?
ನಿನಗೆ ಮುಂದೆ ತಿನ್ನಲಿಕ್ಕೆ ಅನ್ನ ಸಿಕ್ಕೀತಾ…’ ಎಂದು ಅವನಿಗೆ ಬೈದು ಕೈ ತೊಳಯಲು ಹೋಯಿತು..!

‍ಲೇಖಕರು G

May 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    Though written in a jovial way, the hidden intents are many. A very short & sweet comment on present thought process.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: