ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾವಿದ ತಲ್ಲೂರು ಅವರಿಗೆ ಪುಸ್ತಕ ಬಾಗಿನ

ಕಲಾವಿದ ತಲ್ಲೂರು ಎಲ್. ಎನ್. ಅವರನ್ನು ಕನ್ನಡಿಗರಿಗೆ ಪರಿಚಯಿಸುವ

ಪುಸ್ತಕ ಸಜ್ಜಾಗುತ್ತಿದೆ.

ಇದೇ ಫೆಬ್ರವರಿ 23ರಂದು ಉಡುಪಿ-ಮಂಗಳೂರು ಪರಿಸರದ ಕಲಾವಿದರ ಪುಟ್ಟ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪುಸ್ತಕವನ್ನು ನಾಡಿನ ಹಿರಿಯ ಕಲಾವಿದ ಕೆ. ಟಿ. ಶಿವಪ್ರಸಾದ್ , ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನ ಸಮಕಾಲೀನ ಕಲೆಗಳ ವಿಭಾಗದ ನಿರ್ದೇಶಕರಾಗಿ ನಿವೃತ್ತರಾಗಿರುವ ಹಿರಿಯ ಕಲಾವಿದ ದಿಲೀಪ್ ರಾನಡೆ ಹಾಗೂ  ನಾಡೋಜ ಕೆ. ಪಿ. ರಾವ್  ಬಿಡುಗಡೆಗೊಳಿಸಲಿದ್ದಾರೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು

 

 

ರಾಜಾರಾಂ ತಲ್ಲೂರು ಸಂಪಾದಿಸಿರುವ ಈ ಪುಸ್ತಕದಲ್ಲಿ ಅಮೆರಿಕದ ಸಮಕಾಲೀನ ಕಲಾವಿಮರ್ಶಕರಾದ ಡಾ| ಹೊಲಿಷಾಫರ್, ಆರ್ಟ್ ಇನ್ ಅಮೆರಿಕದ ಸಂಪಾದಕಿ ಫಾಯ್ ಹರ್ಷ್, ಗ್ಯಾಲರಿಸ್ಟ್-ಕಲಾವಿದ ಪೀಟರ್ ನ್ಯಾಗಿಅವರ ಲೇಖನಗಳ ಕನ್ನಡ ಅನುವಾದ ಮತ್ತು ಕಲಾವಿದನ ಅಣ್ಣ ರಾಜಾರಾಂ ತಲ್ಲೂರು ಅವರ ಲೇಖನ ಹಾಗೂ “ಆರ್ಥಿಕತೆ”ಯನ್ನು ವಿಷಯವಾಗಿರಿಸಿಕೊಂಡು ತಲ್ಲೂರು ಎಲ್. ಎನ್. ಕಳೆದೆರಡು ದಶಕಗಳಲ್ಲಿ ರಚಿಸಿದ ಕಲಾಕ್ರತಿಗಳ ವಿವರಗಳು ಇವೆ.
ಸಂಪೂರ್ಣ ಬಹುವರ್ಣಗಳ, 128ಪುಟಗಳ ಹಾರ್ಡ್ ಬೌಂಡ್ ಪುಸ್ತಕ ಇದು.

‍ಲೇಖಕರು Avadhi GK

22 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading