ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಲೆಯ ಮೇಲೆ ರುಚಿಕಟ್ಟು ಚಹಾ…

ರಾಹುಲ್ ಬೆಳಗಲಿ

ಇವು ಎರಡು ವರ್ಷ ಹಿಂದಿನ ಚಿತ್ರಗಳು. ಚಿಕ್ಕಬಳ್ಳಾಪುರಕ್ಕೆ ಸರ್ಕಸ್ ಕಂಪೆನಿಯೊಂದು ಬಂದಿತ್ತು. ಸರ್ಕಸ್ ಕಲಾವಿದರ ಬಾಳು ಹೇಗಿರುತ್ತದೆ ಎಂಬ ಕುತೂಹಲ ಮೊದಲಿನಿಂದಲೂ ಇತ್ತು. ಅವರನ್ನು ಸಂದರ್ಶಿಸುವ ಮತ್ತು ಅವರೊಂದಿಗೆ ಇಡೀ ದಿನ ಕಳೆಯುವ ಅವಕಾಶ ದೊರೆಯಿತು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದುವಾಗ ಹುಬ್ಬಳ್ಳಿಗೆ ಬಂದಿದ್ದ ಸರ್ಕಸ್ ಕಲಾವಿದರ ಸಂದರ್ಶನ ಮಾಡಿದ್ದೆ. ಲೇಖನವು ಚಿತ್ರ ಸಮೇತ ಸಂಯುಕ್ತ ಕರ್ನಾಟಕದ ಮಹಾನಗರಿ ಪುರವಣಿಯಲ್ಲಿ ಪ್ರಕಟಗೊಂಡಿತ್ತು.

ಸರ್ಕಸ್ ಕಲಾವಿದರ ಬದುಕು ಇತರ ಎಲ್ಲ ಜನರಿಗಿಂತಲೂ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಇಡೀ ಜಗತ್ತು ಸುತ್ತಾಡಿದರೂ ಅವರ ಬದುಕು ಕಸರತ್ತು ಪ್ರದರ್ಶಿಸುವ ಆ ವೃತ್ತಾಕಾರದ ಅಂಗಣಕ್ಕೆ ಸೀಮಿತ. ಆದರೆ ಒಬ್ಬೊಬ್ಬರು ಅಪ್ರತಿಮ ಪ್ರತಿಭಾವಂತರು ಮತ್ತು ಜೀವನೋತ್ಸಾಹ ಹೊಂದಿದವರು. ಪುನಃ ಆ ಕಲಾವಿದರನ್ನು ಭೇಟಿಯಾಗಬೇಕು ಎಂಬ ಉಮೇದಿನಲ್ಲಿ ಇದ್ದೇನೆ.

ಕಸರತ್ತು ಪ್ರದರ್ಶನ ಸ್ಥಳದ ಬಳಿಯೇ ಕೂತಿದ್ದ ನನ್ನನ್ನು ಕರೆದ ಕಲಾವಿದರು ತಲೆಯನ್ನೇ ಒಲೆ ಮಾಡಿಕೊಂಡು ಚಹಾ ಸಿದ್ಧಪಡಿಸಿಬಿಟ್ಟರು. ಆ ಕ್ಷಣಗಳು ಎಂದಿಗೂ ಮರೆಯಲಾಗದು.

 

‍ಲೇಖಕರು admin

20 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading