– ಎ.ರೇವತಿ
ಲೋಕ ನನ್ನನ್ನ ಓರೆಯಾಗೆ ನೋಡುತ್ತೆ . ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಅನ್ನುತ್ತೆ. ದೇವರೇ ನನಗೆ ಈ ಭಾವನೆಗಳನ್ನು ಕೊಟ್ಟಿರೋದು. ಆದರೆ ಈ ಭಾವನೆಗಳನ್ನು ಗೌರವಿಸದಿರೋ ಜಗತ್ತಲ್ಲಿ ನಾನು ಬದುಕಬೇಕು. ನನ್ನಂತಹವರು ಭಿಕ್ಷೆ ಬೇಡೋದನ್ನ, ಮದುವೆ ಮಾಡ್ಕೋಳೋದನ್ನ ತಪ್ಪು ಎಂದು ಜಗತ್ತು ಪರಿಗಣಿಸುತ್ತೆ. ನಾನು ಕೊಲೆ ಮಾಡಿಲ್ಲ , ಮೋಸ ಮಾಡಿಲ್ಲ ಅಥವಾ ಕಳ್ಳತನ ಮಾಡಿಲ್ಲ ಆದರೂ ಅಪರಾಧಿ ತರಹ ಜಗತ್ತು ನನ್ನನ್ನು ಕಾಣುತ್ತೆ.
ಯಾರಾದ್ರು ನನ್ನ ಹೊಡೆದರೆ,ಬಿದರೆ,ಜಿಗುಟಿದರೆ ನನಗೂ ನೋವಾಗುತ್ತೆ, ನನಗೆ ಹಸಿವಾಗುತ್ತೆ, ಊಟ ಮಾಡಬೇಕು, ಮಾನ ಕಾಪಾಡೋಕೆ ಬಟ್ಟೆ ತೊಡಬೇಕು , ನನ್ನನ್ನ ಪ್ರೀತಿಸೋರ ಜೊತೇಲಿ ನಾನು ಇರಬೇಕು. ಅವರ ಮಮತೆ ನನಗೆ ಬೇಕು.ಸಂತೋಷ ಅನುಭವಿಸಬೇಕು. ಘನತೆಯಿಂದ ಬದುಕಬೇಕು ಅನ್ನೋದು ನನಗಿಷ್ಟ .
ಆದರೆ ನನ್ನಂತಹವರಿಗೆ ಪ್ರೀತಿ ತೋರಿಸೋರು ಯಾರು? ಗೌರವ ಕೊಡೋರು ಯಾರು? ನಮ್ಮ ಮಾನ ಮುಚ್ಚಿ ಕೊಳ್ಳೋಕೆ ಬಟ್ಟೆ ನೀಡೋರು ಯಾರು? ಹಸಿವಾದಾಗ ಊಟ ನೀಡೋರು ಯಾರು? ಇದೆಲ್ಲ ನನಗೆ ಬೇಕು ಅಂದರೆ ನಾನು ಏನು ಮಾಡಬೇಕು? ಬೀದಿ ಬೀದಿ ಸುತ್ಕೊಂಡು ಭಿಕ್ಷೆ ಎತ್ಕೊಂಡು , ಸೆಕ್ಸ್ ವರ್ಕ್ ಮಾಡ್ಕೊಂಡಿರ್ತ್ತೀನಿ ಅಂತ ನಾನು ಕಲ್ಪಿಸಿಕೊಂಡೆ ಇರ್ಲಿಲ್ಲ. ನನ್ನ ಬದುಕು ಹೀಗೆ ಆಗೋದಕ್ಕೆ ಯಾರು ಹೊಣೆ? ಇದನ್ನ ನಾನಾಗಿ ನಾನು ಆಯ್ಕೆ ಮಾಡ್ಕೊಂದಿದ್ದಲ್ಲ.




ANAMIDIYUVA NIVEDANE MATTE MATTE UMAR NENAPU BARUTTARE ” EE JAGAKE NANEKE BANDIHENO TILIYADADU,ELLINDA BANDENO.POPUDAVADEGO,ICCHHE KELUVARILLA GUTTU BICHCHUVARILLA,MARUBOOMIYALI BORIDUVA GALI NAANU” SARKARA ANTU IVARIGE ENU MADALLA. SUTTALINA NAVU NEEVE IVARIGE PREETI TORISBEKU,ADU ANUKAMPAVAGADE,IRABEKU,KONEPAKSHA PREETI TORISALU SADYAVAGDE IDRE,AVARIGE HIMSE NEEDADE AVARA PADIGE AVARANNU BADUKALU BIDABEKU,ADU EE VYVASTEYALLI KASTA SADYAVENO D.RAVIVARMA HOSPET