ಹಾಡ್ಲಹಳ್ಳಿ ನಾಗರಾಜ್
ಬೆಂಕಿಯ ಸುಳಿ ಸುಟ್ಟರೂ ಸುಡದ ನೀರಿನ ಸುಳಿಗಿಂತಲೂ ತಣ್ಣಗೆ ಬೇಯಿಸುವಂತದ್ದು. ಮನುಷ್ಯನ ಮನಸ್ಸು ಮತ್ತು ದೇಹ ಹೊರನೋಟಕ್ಕೆ ತಿಳಿದರೂ ತಿಳಿಯುವಂತದ್ದಲ್ಲ. ಅದರ ಆಳಕ್ಕೆ ಇಳಿದು ನೋಡಬೇಕು ಅಥವಾ ಸ್ವತಃ ಅನುಭವಿಸಿದಾಗಲೆ ಅದರ ಒಳಗುಟ್ಟುಗಳು, ತಲ್ಲಣಗಳು ತಿಳಿಯುತ್ತವೆ.
ಹಾಡ್ಲಹಳ್ಳಿ ನಾಗರಾಜ್ ರವರು ಈಗಾಗಲೇ ಕನ್ನಡ ಸಾಹಿತ್ಯಲೋಕ ಗಮನಿಸಬೇಕಾದ ಗಂಭಿರ ಕಾದಂಬರಿಗಳನ್ನು, ಕಥೆಗಳನ್ನು ಕೊಟ್ಟಿದ್ದಾರೆ ಮತ್ತು ಸೃಜನಶಿಲ ಸಾಹಿತ್ಯ ಲೋಕವನ್ನು ಈ ಮೂಲಕ ವಿಸ್ತರಿಸಿದ್ದಾರೆ. ಈ ನಾಡಿನ ಬಹುಮುಖ್ಯ ಕಥೆಗಾರರು ವಿಶೇಷವಾಗಿ ಮಲೆನಾಡಿನ ಜೀವನಾಡಿಯ ಬೇರನ್ನು ಹಿಡಿದು ಬರೆದ ಲೇಖಕರು. ಬೆಂಕಿಯ ಸುಳಿ ಹೆಣ್ಣೊಬ್ಬಳ ಬೇಕು ಬೇಡಗಳನ್ನು ಪೂರೈಸಲಾಗದ ಗಂಡೊಬ್ಬನ ಅಸಾಹಯಕತೆಯನ್ನು ಹೇಳಿಕೊಳ್ಳಲಾಗದೆ ಬದುಕಲೇಬೇಕಾದ ಅನಿವಾರ್ಯತೆಯನ್ನು ಮತ್ತು ಅದರಾಚೆಗೆ ದಾಟುವ ಮನುಷ್ಯ ಸಂಬಂಧದ ಸೂಕ್ಷ್ಮ ಎಳೆಗಳನ್ನು ಬಿಡಿಸಿ ಮುಖಾಮುಖಿಯಾಗಿಸುವ ಕತೆಯ ಹಂದರವೇ ಈ ಕೃತಿಯ ವೈಶಿಷ್ಟ್ಯ. ಮಲೆನಾಡಿನ ಈ ಲೇಖಕರು ದಟ್ಟ ಮಳೆಯ ಹಾಗೆ ನಿರಂತರವಾಗಿ ಹುಯ್ಯುತ್ತಿರಲಿ, ನಾಗರಾಜ್ ರವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು.
ಸುಬ್ಬು ಹೊಲೆಯಾರ್
ನಿರಂತರ # 39/2&3, ಮೊದಲನೇ ಮಹಡಿ, ರೆಮ್ಕೋ ಲೇಔಟ್
ವಿಜಯನಗರ, ಬೆಂಗಳೂರು- 560040
ದೂರವಾಣಿ : 080 23159343
ಇ ಅಂಚೆ : nirantarakannada@mail.com
ಬೆಲೆ : ರೂ. 60




ABHINANDANE….5prati kalisi. dr.mallikarjuna kalamarahalli, HOD.kannada ,govt.P.G.college DAVANGERE….4