ಡೈಲಿ ಬುಕ್ : ಸುಬ್ಬು ಹೊಲೆಯಾರ್ ಅವರ ’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ. .’



ಸುಬ್ಬು ಹೊಲೆಯಾರ್ ಮತ್ತವರ ಕವಿತೆ – ಎರಡರಲ್ಲಿ ಯಾವುದು ಹೆಚ್ಚು ಆಪ್ತ ಎಂದು ಕೇಳಿದರೆ ಉತ್ತರಿಸುವುದು ನನಗೆ ಕಷ್ಟ. ಕೃತಿ ಮತ್ತು ಕರ್ತೃ ಬೇರೆಬೇರೆಯೇ ಆಗಿ ಕಾಣಿಸುತ್ತಿರುವ ವಿರೋಧಾಭಾಸದ ಈ ದಿನಗಳಲ್ಲಿ ಸುಬ್ಬು ಮತ್ತವರ ಕಾವ್ಯ ಅಭಿನ್ನ ಎನ್ನುವ ಭಾವ ನನಗೆ ಖುಷಿ ಕೊಡುತ್ತಿದೆ. ತಮ್ಮ ಎದೆಮಡುವಿನ ವೇದನೆಯನ್ನು ಎಲ್ಲರ ಬೆರಳಿಗೆ ದುಃಖವಾಗಿ ದಾಟಿಸಲು, ಆ ಮೂಲಕ ಮನಸುಗಳ ತಿಳಿಗೊಳಿಸುವ ಕನಸು ಕಾಣಲು, ‘ಕತ್ತಲೆಯ ತಾಯಿಯಾಗು ಬೆಳಕೆನ್ನುವ ದೇವರೇ’ ಎಂದು ಪ್ರಾರ್ಥಿಸಲು ಅವರಿಗೆ ಸಾಧ್ಯವಾಗಿದೆ. ದಲಿತ ಹಿನ್ನೆಲೆಯ ಗೆಳೆಯರನೇಕರು ಒಂದು ರೀತಿಯ ಆಸಹನೆಯಲ್ಲಿ ತಮ್ಮನ್ನು ತಾವು ಬೆಳಗಿಸಿಕೊಳ್ಳುತ್ತಿರುವಾಗ, ಆ ಅಸಹನೆಯನ್ನು ತಮ್ಮ ಬರವಣಿಗೆಯ ಉರಿಯಾಗಿಸಿಕೊಂಡಿರುವ ಸುಬ್ಬು ಅವರಿಗೆ, ಅದಕ್ಕೊಂದು ಜೀವಪರ ಆರ್ದ್ರತೆಯನ್ನು ಕಸಿ ಮಾಡುವುದು ಕೂಡ ಸಾಧ್ಯವಾಗಿದೆ.
ಆ ಕಾರಣದಿಂದಲೇ ನೈತಿಕ ಪ್ರಭೆಯೊಂದನ್ನು ದಕ್ಕಿಸಿಕೊಂಡಿರುವ ಅವರ ಕವಿತೆಗಳು ನಳನಳಿಸುತ್ತಿವೆ. ‘ಬರೆಯುತ್ತಿದ್ದಾರೆ ಸಾಮಾನ್ಯರು ಕವಿತೆಗಳನ್ನು ಹಣ್ಣು ಕಿತ್ತುಕೊಳ್ಳುವ ಹಾಗೆ’ ಎನ್ನುವ ಭಾವದಿಂದಲೇ ಸುಬ್ಬು ಅವರ ಕವಿತೆ ಜನಸಾಮಾನ್ಯರ ಕವಿತೆಯೂ ಆಗಿದೆ. ಈ ಕವಿತೆಗಳಲ್ಲಿ ವೇದನೆ ವಿಷಾದದೊಂದಿಗೆ ಆಶಾಭಾವವೂ ಇದೆ. ಇದೆಲ್ಲಕ್ಕೂ ಮುಖ್ಯವಾಗಿ ಕವಿಯ ಪ್ರಾಮಾಣಿಕ ಅಭಿವ್ಯಕ್ತಿ ಕಾವ್ಯದಲ್ಲಿ ನಿಚ್ಚಳವಾಗಿ ಹೊಳೆಯುತ್ತಿದೆ. ಆಶಾಭಾವ ಹಾಗೂ ಪ್ರಾಮಾಣಿಕತೆಗಳಿಲ್ಲದೆ ಹೋದಲ್ಲಿ ಕವಿತೆ ಎನ್ನುವುದು ಹೇಳಿಕೆಗಳ ಕಟ್ಟಾಗಿಯಷ್ಟೇ ಉಳಿಯುವುದು. ಈ ಎಚ್ಚರದ ಕಾರಣದಿಂದಲೇ ಸುಬ್ಬು ಹೊಲೆಯಾರರು ತಮ್ಮ ಓರಗೆಯ ಕವಿಗಳ ನಡುವೆ ಭಿನ್ನವಾಗಿ ಕಾಣಿಸುತ್ತಾರೆ.
ಚ. ಹ. ರಘುನಾಥ
 

‍ಲೇಖಕರು avadhi

January 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Gururaj katriguppe

    ಸುಬ್ಬು ಸಾರ್, ಶುಭಾಶಯಗಳು, ಪುಸ್ತಕ ಓದಿದ ನಂತರ ಮತ್ತೆ ಬರೆಯುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: