…ಇದ್ದಕ್ಕಿದ್ದಂತೆ ಒಂದು ದಿನ ರಮೇಶರ ಕವನಗಳನ್ನು ಓದುತ್ತ ನನಗೆ ಎಷ್ಟು ಸಂತೋಷವಾಯಿತೆಂದರೆ ಅವರನ್ನು ಕರೆದುನನ್ನ ಮೆಚ್ಚುಗೆ ಹೇಳಿದೆ. ರಮೇಶರೂ ಸಂತೋಷಪಟ್ಟರು. ಸ್ವತಃ ಲೇಖಕನಾದ ನನಗೆ ಈ ಬಗೆಯ ಶುದ್ಧವಾದ ಸ್ಫಂದನದಸುಖ ಎಷ್ಟು ಆಳವಾದದ್ದು ಎಂದು ಗೊತ್ತು. ರಮೇಶರ ಕವನಗಳನ್ನು ನಾನು ಬಾಯಿತುಂಬ ಹೊಗಳಿ ಅವರಲ್ಲಿ ಅತಿಯಾದಆತ್ಮವಿಶ್ವಾಸ ಹುಟ್ಟುವಂತೆ ಮಾಡಕೂಡದು. ಇವರು ‘ಆಗುತ್ತ’ ಇರುವ ಕವಿ; ಆಗಿಬಿಟ್ಟಿರುವ ಕವಿಯಲ್ಲ. ಅವರು ಅಲ್ಪತೃಪ್ತರಾಗದಿದ್ದರೆ ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರೂ ಆದಾರು. . . ಈ ಕವಿಯ ವಿಶೇಷವಾದ ಗುಣವೆಂದರೆ ಇವರಲ್ಲಿ ಕಾಣುವ ಹೊರಗಿನ ಸತ್ಯಕ್ಕೂ ಒಳಗಿನ ಸತ್ಯಕ್ಕೂ ನಡುವೆ ಬಿರುಕು ಇಲ್ಲ. ಒಂದು ಇನ್ನೊಂದು ಆಗುತ್ತದೆ, ಅಥವಾ ಹೊಳೆಯಿಸುತ್ತದೆ.. .
ಯು.ಆರ್.ಅನಂತಮೂರ್ತಿ (ಮುನ್ನುಡಿಯಿಂದ)




0 Comments