ಸಾದತ್ ಹಸನ್ ಮಂಟೊ ಅವರಷ್ಟು ಪ್ರಸಿದ್ಧಿ ಪಡೆದ ಇನ್ನೊಬ್ಬ ಉರ್ದು ಕತೆಗಾರನಿಲ್ಲ. ಅವರಷ್ಟು ವಿವಾದಕ್ಕೊಳಗಾದ ಮತ್ತೊಬ್ಬ ಸಾಹಿತಿ ಇಲ್ಲ. ಆಶ್ಲೀಲ ಸಾಹಿತ್ಯ ರಚಿಸಿದರೆಂದು ಅವರ ವಿರುದ್ಧ ಐದು ಮೊಕದ್ದಮೆಗಳನ್ನು ಹೂಡಲಾಯಿತು. ಇದೂ ಒಂದು ದಾಖಲೆಯೇ. ಆದಾಗ್ಯೂ ಖ್ಯಾತ ಹಿಂದಿ ವಿಮರ್ಶಕ ರಾಜೇಂದ್ರ ಯಾದವ್ ಅವರೇ ಹೇಳುವಂತೆ ಮಂಟೊ ಅವರ ಕತೆಗಳು ಭಾರತೀಯ ಕಥಾ ಸಾಹಿತ್ಯಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿದೆ.
ಮತಾಂಧರಿಂದ ಇಬ್ಭಾಗವಾದದ್ದು ಬರೀ ಒಂದು ದೇಶವಲ್ಲ. ಮೊಂಟೋರಂಥ ಸೂಕ್ಷ್ಮ ಮನಸ್ಸಿನ ಮಾನವತಾವಾದಿಗಳು ಒಡೆದ ವ್ಯಕ್ತಿತ್ವ (ಸಿಜೋಫ್ರೆನಿಯಾ) ದಂಥ ಭಯಂಕರ ಮನೋರೋಗಗಳಿಗೆ ಬಲಿಯಾಗಬೇಕಾಯಿತು. ಅವರ ‘ಹುಚ್ಚರ ದರ್ಬಾರ್’ ಕತೆ ಅಂದಿನ ಸಂದರ್ಭದ ಒಂದು ಅರ್ಥಗರ್ಭಿತ ವ್ಯಂಗ್ಯ ಚಿತ್ರದಂತಿದೆ. ಅವರಿಗೆ ಇಡೀ ದೇಶವೇ ಒಂದು ಹುಚ್ಚಾಸ್ಪತ್ರೆಯಾಗಿ ಕಂಡಿತ್ತು.

‘ಸದ್ಯಕಿದು ಹುಚ್ಚರ ಸಂತಿ’ ಕತೆಯಲ್ಲಿ ಶಿಶುನಾಳ ಶರೀಫರಂತೆ ಮಂಟೊ ಸಮೂಹ ಸನ್ನಿಯ ಆ ಸಂದರ್ಭದಲ್ಲಿ ಮಮಕಾರವನ್ನರಸುವ ಮುದುಕಿಯ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ‘ಆಠ ದಿನ್ ‘ ಚಿತ್ರದಲ್ಲಿ ಹುಚ್ಚ ಸೇನಾಧಿಕಾರಿಯ ಪಾತ್ರ ನಿರ್ವಹಿಸಿದ ಕತೆಗಾರ ತನ್ನ ನಿಜ ಜೀವನದಲ್ಲಿ ಎರಡು ಬಾರಿ ಹುಚ್ಚಾಸ್ಪತ್ರೆ ಸೇರುವಂತಾಯಿತು.
ಲೋಹಿಯಾ ಪ್ರಕಾಶನ, ಬಳ್ಳಾರಿ
ಬೆಲೆ : ರೂ. ೫೦/-
ಡೈಲಿ ಬುಕ್ : ಸಾದತ್ ಹಸನ್ ಮಂಟೋ ಪುಸ್ತಕದ ಅನುವಾದ ’ಸದ್ಯಕಿದು ಹುಚ್ಚರ ಸಂತಿ’
ನಿಮಗೆ ಇವೂ ಇಷ್ಟವಾಗಬಹುದು…

0 Comments