‘ಲಕ್ಷ್ಮಣ ಬಯಲಾದ ! ಸೀತೆ ಬಯಲಾದಳು ! ರಾಮ ಜೀವನ ರಿಕ್ತವಾಗಿದೆ. ಶೂನ್ಯವಾಗಿದೆ-ಜನ ರಾಮನಾಮವನ್ನು ಪತಿತಪಾವನ ಮಂತ್ರವೆಂದು ಹೊಗಳಿ ಹಾಡಿ ಜಪಿಸುತ್ತಾರೆ. ರಾಮನಿಂದ ರಾಜ್ಯ ಶಾಂತಿ ಪಡೆಯಿತು. ಆದರೆ ರಾಮನಿಗೆ ಅಶಾಂತಿ ಪರ್ವ ಮುಗಿದಿಲ್ಲ.
ನನ್ನನ್ನು ನಿತ್ಯವೂ ಸೀತೆಯ ಮರಣ, ಲಕ್ಷ್ಮಣನ ಸಾವುಗಳು ತಿವಿಯುತ್ತಿದ್ದವು, ಕರೆಯುತ್ತಿದ್ದವು. ಅವರ ಮರಣಕ್ಕೆ ಏನು ಕಾರಣ –
ನನ್ನ ಜೀವನದಲ್ಲಿ ಕೌಟುಂಬಿಕ ಮಧುರ ಭಾವನೆಗಳ ಮೇಲೆ ರಾಜಕೀಯವು ನಡೆಸಿದ ದುರಾಕ್ರಮಣದ ಪರಿಣಾಮವಾಗಿಯೇ ಅವರು ಪ್ರಾಣ ನೀಗಿದರು! ಇದಕ್ಕಾಗಿ ನನ್ನ ಪೂರ್ಣಾಹುತಿ ಅಗತ್ಯವಿತ್ತು.
ಆ ದಿನ ನಾನು ಡಂಗುರವನ್ನು ಸಾರಿಸಿ ಬಿಟ್ಟೆ – ಸರಯೂ ತೀರದಲ್ಲಿ ಅಯೋಧ್ಯೆಯೆ ಕಿಕ್ಕಿರಿದು ತುಂಬಿತ್ತು. ನಡೆದೆ, ಇನ್ನೂ ನಡೆದೆ – ಸೆಳವು ಜೋರಾಯಿತು. ನೀರು ಎದೆಯೆತ್ತರ, ಕಂಠದವರೆಗೆ, ಬಾಯಿ, ಮುಖ … ಮುಂದೆ ಸಾಗಿದೆ, ಮುಂದೆ, ಮುಂದೆ… ” ಇವನು ಸತ್ಯಕಾಮರ ಶ್ರೀರಾಮ. ಲೋಕಾಪವಾದಕ್ಕೆ ಅಂಜುವ ರಾಜಾರಾಮ, ವೈಯಕ್ತಿಕ ಬದುಕಿನ ಶ್ರೀರಾಮ. ಎರಡರ ನಡುವಿನ ಅಲ್ಲೋಲಕಲ್ಲೋಲ .. ರಾಜಬಲಿ



0 Comments