
ಲೋಕಸಂಗ್ರಹ ದೃಷ್ಠಿಯಿಂದ ನೋಡಿದರೆ; ಮಾನವನ ವಿಕಾಸದ ಚರಿತ್ರೆಯಲ್ಲಿ ಸ್ತ್ರೀಯರದ್ದೂ ಮಹತ್ವದ ಕೊಡುಗೆಗಳಿವೆ. ಕೃಷಿಯ ಶೋಧಕಿಯರಾದ ಮಾತೆಯರೇ ಗುದ್ದಲಿ, ಚಕ್ರ ಇತ್ಯಾದಿಗಳನ್ನು ಅನ್ವೇಷಿಸಿದವರು ಕೂಡಾ. ಹಾಗಿದ್ದೂ ಚರಿತ್ರೆಯನ್ನು ಕಟ್ಟುವ ನೆಲೆಯಲ್ಲಿ ಮಾತ್ರ ಸ್ತ್ರೀಯರ ಕೊಡುಗೆಗಳೆಲ್ಲಾ ಸರಳೀಕರಣಗೊಂಡಿದೆ. ತಪ್ಪಿದರೆ ನಿರ್ಲಕ್ಷಿಸಲ್ಪಟ್ಟಿದೆ. ಇನ್ನಾದರೂ ಇಂತಹ ಚಾರಿತ್ರಿಕ ಅವಘಡಗಳು ಕೊನೆಗೊಂಡು; ಚರಿತ್ರೆಯ ನಿಜದ ನೆಲೆಗಳಿಗೆ ನ್ಯಾಯ ದೊರೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಸ್ತ್ರೀಯರ ಆತ್ಮಕಥೆಗಳು ಮಹತ್ವ ಪಾತ್ರ ವಹಿಸಬಲ್ಲುದು. ಅಂತಹ ಕೆಲಸಕ್ಕೆ ಮುಂಬಯಿಯಲ್ಲಿ ಮನೆಮಾಡಿದ ಶಕುಂತಲಾ ಪ್ರಭು ಅವರಿಗೆ ಅಭಿನಂದನೆಗಳು.
ಡಾ.ಕೆ. ಸಾವಿತ್ರಿ
ಡೈಲಿ ಬುಕ್ : ಶಕುಂತಲಾ ಆರ್ ಪ್ರಭು ಬರೆದ ’ಶರಂತಿ-ಮೌನಿ ಮಾತೆ’
ನಿಮಗೆ ಇವೂ ಇಷ್ಟವಾಗಬಹುದು…

0 Comments