ಫ್ರೆಂಚ್ ಕವಿ, ಕಾದಂಬರಿಕಾರ, ನಾಟಕಕರ್ತೃ, ವಿಮರ್ಶಕ ಮತ್ತು ರಾಜಕಾರಣಿ. ಈತನ ಪ್ರಭೆ ಮತ್ತು ಪ್ರಭಾವ ಅಂದಿನಷ್ಟೇ ಇಂದು (2002) ಕೂಡ ಉಜ್ಜ್ವಲ. ಕಾರಣ? ಈ ಸಾಹಿತ್ಯ ಬ್ರಹ್ಮಗಿರಿ ಮತ್ತು ರಾಗಭಾವ ಕಾವೇರಿ ರಚಿಸಿದ 48 ಬೃಹತ್ಸಂಪುಟಗಳು ಜಗತ್ತಿನ 44ಕ್ಕಿಂತಲೂ ಹೆಚ್ಚಿನ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ. The Hunchback of Notredame(1831), Les Miserables(1862), Toilers of the Sea(1866) ಸದಾ ಪ್ರಸ್ತುತ. “ಇದು ಬರಿ-ಬೆಳಗಲ್ಲೋ ಅಣ್ಣಾ!” ಅಲ್ಲವಿದು ಕಾಲ್ಪನಿಕ ಕಥೆ, ಬದಲು, ಮನುಕುಲದ ವ್ಯಥೆ, ಮೌಲ್ಯಗಳ ಗಾಥೆ.
ಕಾನೂನು ಕಟ್ಟಳೆಗಳನ್ನು ಅಮಾನುಷ ಯಾಂತ್ರಿಕ ದಕ್ಷತೆಯಿಂದ ಚಾಲೂಗೊಳಿಸುವ ಸಮಸ್ತ ಸಾಮಾಜಿಕ ಸನ್ನಿವೇಶಗಳಲ್ಲಿಯೂ ನಿಂದನೆ-ಖಂಡನೆ-ಭರ್ತ್ಸನೆ ಸಹಿತವಾದ ಒಂದು ವಿಕೃತ ಮಾನಸಿಕ ಸ್ಥಿತಿ ಉದ್ಭವಿಸುತ್ತದೆ. ನಾಗರಿಕತೆ-ಅಂಚಿನಾಚೆಗಿನ ನರಕಕೂಪಕ್ಕೆ ತಳ್ಳಲ್ಪಟ್ಟವರ ಮೂಕ ವೇದನೆ ಇದು. ಇಂಥವರ ಎದೆಯಾಳದ ದನಿ, ಮನದುಮ್ಮಳದ ಬನಿ. ಮಾನವೀಯತೆಯ ಗಣಿ, ಮತ್ತು ಬಯಕೆ ಹಂಬಲಗಳ ವಾಣಿ ಹ್ಯೂಗೊವಿರಚಿತ ಮಹಾಕಾದಂಬರಿ Les Miserables.

ಅಂತಿಮವಾಗಿ ಜೀವನ ಮೂರು ಸಂಚಾರೀಭಾವಗಳ ಸಂತತ ಕ್ಷೋಭೆ-ಕಾಠಿಣ್ಯ, ದೈನ್ಯ, ಕಾರುಣ್ಯ. ದುರ್ಯೋಧನ-ಕಾಠಿಣ್ಯ, ದ್ರೌಪದೀ-ದೈನ್ಯ, ಶ್ರೀಕೃಷ್ಣ-ಕಾರುಣ್ಯ, ಅಂತೆಯೇ, ಜೇವರ್ಟ್ – ಕಾಠಿಣ್ಯ, ಜೀನ್ ವಾಲ್ ಜೀನ್-ದೈನ್ಯ, ಬಿಷಪ್-ಕಾರುಣ್ಯ (ಹೊದಿಕೆ ಚಿತ್ರ) ನಿದರ್ಶನಗಳು.
Les Miserables ಸುಮಾರು 1200 ಪುಟಗಳ ವಿಸ್ತಾರಾರ್ಣವ. ಇದನ್ನು 320 ಪುಟಗಳ ಕನ್ನಡ-ಅಮೃತಸರೋವರಕ್ಕೆ ಸಾರವಿಳಿಸುವುದರಲ್ಲಿಯೂ ಮೂಲ-ಅನುವಾದಿತಗಳಲ್ಲಿ ವಸ್ತು-ಭಾವ-ಸನ್ನಿವೇಶಗಳ ನಡುವಿನ ಏಕ-ಏಕ ಸಂವಾದಿತ್ವ ಸಾಧಿಸುವುದರಲ್ಲಿಯೂ ಸಮಗ್ರವಾಗಿ ಮೂಲದ ಅಂತಸ್ಸತ್ತ್ವಕ್ಕೆ ಮರುವುಟ್ಟು ಕೊಡುವುದರಲ್ಲಿಯೂ ಎ. ಪಿ. ಸುಬ್ಬಯ್ಯನವರು (1901-77) ಅನನ್ಯ ವೈದುಷ್ಯ, ಅಪಾರ ನಿಷ್ಠೆ ಮತ್ತು ಅಪ್ರತಿಮ ಪ್ರತಿಭೆ ಠೇವಣಿ ಹೂಡಿದ್ದಾರೆ.
ವಿಶ್ವಜ್ಷಾನದ ಸೇವಾಕೇಂದ್ರ
ಅರಿವಿನ ಬೆಳಕನು ಪಸರಿಪ ಚಂದ್ರ
ಪಂಡಿತ ಪಾಮರ ಪ್ರಜ್ಷಾಸಾಂದ್ರ
ಪುಸ್ತಕ ಲೋಕದಲಿದು ದೇವೇಂದ್ರ…
(ಬೆನ್ನುಡಿ )
ಅತ್ರಿ ಬುಕ್ ಸೆಂಟರ್
ಬೆಲೆ : ರೂ. 70/-
ಡೈಲಿ ಬುಕ್ : ವಿಕ್ಟರ್ ಹ್ಯೂಗೋ ಬರೆದ ’ದುಃಖಾರ್ತರು’
ನಿಮಗೆ ಇವೂ ಇಷ್ಟವಾಗಬಹುದು…

ಅನುವಾದದ ಪ್ರಸ್ತುತ ಆವೃತ್ತಿ (ಎರಡನೇ ಮುದ್ರಣ) ನನ್ನ ಪ್ರಕಟಣೆಯಾದರೂ ವಿಶ್ವಸಾಹಿತ್ಯದಲ್ಲಿ ಅನನ್ಯ ಸ್ಥಾನಗಳಿಸಿದ ದುಃಖಾರ್ತರನ್ನು ಅನಿರೀಕ್ಷಿತವಾಗಿಯೇ ಆದರೂ ಸರಿಯಾಗಿ ಗುರುತಿಸಿ ಈ ಮೂಲಕ ಪ್ರಚುರಿಸಿದ ಅವಧಿಗೆ ಕೃತಜ್ಞತೆಗಳು.ಇದರ ಕೆಲವೇ ಮುದ್ರಿತ ಪ್ರತಿಗಳು ನನ್ನಲ್ಲಿನ್ನೂ ಉಳಿದಿರುವುದರಿಂದ ಆಸಕ್ತರು ನೇರ ರೂ ಎಪ್ಪತ್ತು ಮನಿಯಾರ್ಡರ್ ಮಾಡಿದರೆ ನನ್ನದೇ ವೆಚ್ಚದಲ್ಲಿ ಸಾದಾ ಮರುಟಪಾಲಿಗೆ ಪುಸ್ತಕ ರವಾನಿಸುತ್ತೇನೆ. ನೋಂದಾಯಿತ ಅಂಚೆಯಲ್ಲಿ ಬೇಕಾದವರು ಒಂದು ನೂರು ರೂಪಾಯಿ ಮುಂಗಡ ಕಳಿಸಿ. ನಿಮ್ಮ ಹೆಸರು ಮತ್ತು ಸ್ಪಷ್ಟ ಅಂಚೆ ವಿಳಾಸವನ್ನು ನನಗೆ ಮಿಂಚಂಚೆಯಲ್ಲೂ ಅವಶ್ಯ ತಿಳಿಸಿ. athreebook@ gmail.com. ನನ್ನ ಅಂಚೆ ವಿಳಾಸ: ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೩
ದುಃಖಾರ್ತರು – ಅನುವಾದಕ ನನ್ನಜ್ಜ. ಅದರ ಮೊದಲ ಪ್ರಕಾಶನ ಪುತ್ತೂರಿನ ಪಾಪ್ಯುಲರ್ ನ್ಯೂಸ್ ಏಜನ್ಸೀಸಿನ ಮಾಲಿಕ ಶಿವರಾಮ ಹೊಳ್ಳ. ಈ ಎಲ್ಲ ನೆನಪುಗಳನ್ನು ಪುನರುಜ್ಜೀವಿಸುವಂತೆ ನಾನಿದರ ಮರುಮುದ್ರಣವನ್ನು ಪ್ರಕಟಿಸಲಿದ್ದಾಗ ಪುತ್ತೂರಿನ ಕರ್ನಾಟಕ ಸಂಘದ ಬಹುಕಾರ್ಯಶೀಲ ಬೋಳಂತಕೋಡಿ ಈಶ್ವರ ಭಟ್ಟರು ಸಮಾರಂಭದ ಆಯೋಜನೆಯನ್ನು ಪ್ರೀತಿಯಿಂದ, ಸ್ವಂತ ವೆಚ್ಚದಲ್ಲಿ ನಡೆಸಿಕೊಟ್ಟರು. ಆಗ ಸಮನಿಸಿದ ವೈಶಿಷ್ಟ್ಯಗಳನ್ನು ಆಸಕ್ತರು ಇಲ್ಲಿ ಓದಬಹುದು.
http://www.athreebook.com/2011/08/blog-post.html
One should read this book, beautifully translated
pusthaka siguva sthalada mahithi nidi plz