ಕನ್ನಡ ಸಾಹಿತಿಗಳಲ್ಲಿ ಕೆಲವರು ವಿಜಾತಿ ವಿವಾಹವಾಗಿ ಬಾಳಿ ಬದುಕಿದವರು. ಆದರೆ ಇವರುಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಬಿಟ್ಟರೆ ಉಳಿದವರು, ಆ ಪರಿಸ್ಥಿತಿಯನ್ನು ತಮ್ಮ ಕಥಾ ಸಾಹಿತ್ಯದಲ್ಲಿ ಚಿತ್ರಿಸಿಲ್ಲ ಎನಿಸುತ್ತದೆ. ಈ ದೃಷ್ಟಿಯಿಂದ ಅಂತರ್ ಜಾತಿ ವಿವಾಹಿತರನ್ನು ಪ್ರಧಾನವಾಗಿ ಲಕ್ಷ್ಯದಲ್ಲಿರಿಸಿಕೊಂಡ ಲಕ್ಷಣ ಕೊಡಸೆ ಸಾಂಸ್ಕೃತಿಕವಾಗಿ ಗಮನಾರ್ಹವಾಗಿ ಕಾಣುತ್ತಾರೆ. ಅವರ ಕಾದಂಬರಿಗಳಲ್ಲಿ ಅಂತರ್ ಜಾತಿ ವಿವಾಹಿತರ ಸಮಸ್ಯೆಗಳು ವಿಶೇಷವಾಗಿ ವಿಶ್ಲೇಷಣೆಗೆ ಒಳಪಡುತ್ತವೆ. ಅದೇಹಾದಿಯಲ್ಲಿ ಈ ‘ಕಾಮಾಕ್ಷಿಯ ಸಂಸಾರನೌಕೆ’ ಯೂ ಸಾಗಿದೆ.

ಒಂದು ಗದಗುಡುವ ವಸ್ತುವನ್ನು – ಅಂತರ್ ಜಾತಿ ಮದುವೆಯಿಂದ ಜಾತಿಯನ್ನು ಮೀರುವಿಕೆ ಅಥವಾ ಅಳಿಸುವಿಕೆಯ ಆಶಯವನ್ನು ಇಟ್ಟುಕೊಂಡು ಅದರ ಮಿತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಇಲ್ಲಿ ನಿಚ್ಚಳವಾಗಿದೆ. ಮಹಿಳಾಕೇಂದ್ರಿತ ವಸ್ತು ಇಲ್ಲಿನ ವೈಶಿಷ್ಟ್ಯ.
ಪ್ರಕಾಶಕರು
ಡೈಲಿ ಬುಕ್ : ಲಕ್ಷ್ಮಣ ಕೊಡಸೆಯವರ ’ಕಾಮಾಕ್ಷಿ ಸಂಸಾರನೌಕೆ’
ನಿಮಗೆ ಇವೂ ಇಷ್ಟವಾಗಬಹುದು…

ellaranhthalla kodaseyavaru antha thamma baravanigeyinda thorisiddrae……