ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ರಘು ಸಮರ್ಥ ಅವರ ’ಶ್ರೀಮಾನ್ ಶ್ರೀಮತಿ’

ರಘು ಸಮರ್ಥ

ಹೆಣ್ಣಿನ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೋಳೋದು ಅಸಾಧ್ಯ…. ಮದುವೆ ಆಗಿ ಸಂತೋಷವಾಗಿರೋಕೆ ಸಾಧ್ಯಾನೇ ಇಲ್ಲಾರೀ … ಹೂಂ ಹೊಸ ಹೊಸದರಲ್ಲಿ ನಾನೂ ಹೀಗೇ ಇದ್ದೆ, ಒಂದು ವರ್ಷ ಕಳೀಲಿ ನಿಂಗೇ ಅನುಭವಕ್ಕೆ ಬರುತ್ತೆ … ಹೆಂಡ್ತಿ ಅಂದ್ರೆ ಅನುಮಾನ, ಅನುಮಾನ ಅಂದ್ರೆ ಹೆಂಡ್ತಿ …. ಇದು ಮಾಡು, ಅದು ಮಾಡಬೇಡ, ಅಲ್ಲಿಗೆ ಹೋಗಬೇಡ …. ಬರೀ ಕಂಡೀಶನ್ನು ಮಾಡೋದು, ತಪ್ಪು ಹುಡುಕೋದು, ನನ್ನ ಗಂಡ ಸರಿ ಇಲ್ಲ ಅಂತ ಎಲ್ಲರ ಹತ್ರ ಹೇಳ್ಕೊಂಡು ಬರೋದು …
ಈ ಗಂಡಸರೆಲ್ಲಾ ಒಂದೇರೀ … ಲವ್ ಮಾಡೋ ಟೈಮಲ್ಲಿ ಹೆಂಗೆ ಹಿಂದೆ ಹಿಂದೇ ಬರ್ತಾರೆ ನೋಡಿ … ಮದುವೆಗೆ ಮುಂಚೆ ಸಾವಿರ ಸಲ ಐ ಲವ್ ಯು ಅನ್ನೋನು, ಈಗ … ಬೇಡ ಅಂದಿದ್ದೇ ಮಾಡೋದು … ಹೆಂಡ್ತಿ ಅಂದ್ರೆ ಬರೀ ಮನೆ ಕೆಲಸ ಮಾಡೋಳು, ಮಕ್ಕಳನ್ನ ಹೆರೋಳು ಅಷ್ಟೇನಾ… ?
ಒಂದು ಗೌರವ ಬೇಡವಾ … ? ಹೆಂಡ್ತಿ ಅಂದ್ರೆ ತಾತ್ಸಾರ… ಪ್ರೀತಿಯಿಂದ ನಾಲಕ್ ಮಾತಾಡಿ ಯಾವ ಕಾಲ ಆಯ್ತೋ … ಸೂಕ್ಷ್ಮ ಅನ್ನೋದೇ ಗೊತ್ತಿಲ್ಲ …

ಈ ಗಂಡಸರ ಜಾತೀನೇ ಇಷ್ಟು … ಡಾಮಿನೇಟಿಂಗ್ …
ಹೆಚ್ಚು ಕಮ್ಮಿ ಇಂಥಾ ಒಂದು ಪರ್ಸೆಷ್ಯನ್ ಇಬ್ಬರಿಗೂ ಇರುತ್ತೆ ಅಲ್ವಾ… ?
ಅದು ತಪ್ಪೋ ಸರೀನೋ ಅನ್ನೋದಲ್ಲ ಪಾಯಿಂಟ್ … ಗಂಡು ಹಾಗೂ ಹೆಣ್ಣು ಇವರಿಬ್ಬರ ಮಾತು, ಮೌನ, ಯೋಚನೆ, ಬಿಹೇವಿಯರ್, ಏನು ಮಾಡ್ತಾರೆ, ಏನು ಮಾಡಲ್ಲ, ಯಾಕೆ ಹೀಗೆ ಅನ್ನೋದರ ಹಿಂದೆ ಒಂದು ಸೈಕಾಲಜಿ ಇದೆ … ಸೈನ್ಸ್ ಇದೆ…. ಮೆದುಳು ಹೀಗೇ ಕೆಲಸ ಮಾಡಬೇಕು ಅಂತ ಪ್ರೋಗ್ರಾಮ್ ಆಗಿದೆ … ಅದರ ಬಗ್ಗೆ ಗೊತ್ತಿದೆಯಾ … ? ಎಲ್ಲೂ ಬೋರ್ ಹೊಡೆಸ್ಬಾರ್ದು, ಓದೋಕ್ ಮಜಾ ಬರ್ಬೇಕು, ಒಂದ್ ಹೊಸ ಅನುಭವ ಆಗಬೇಕು, ನನ್ ಮಗಂದು ಕನ್ನಡದಲ್ಲೂ ಇಂಥಾ ಬುಕ್ ಇದೆಯಾ ಅಂತ ಅನ್ನಿಸಬೇಕು ಅನ್ನೋ ಹಾಗೆ ಬರೆದಿದ್ದೀನಿ … ಬುದ್ಧಿವಂತಿಕೆ ಪ್ರದರ್ಶನ, ಗಿಮಿಕ್ಕು ಎಲ್ಲಾ ಸೈಡ್ ಗೆ ಇಟ್ಟು ಪ್ರೀತಿಯಿಂದ ಹೇಳ್ತಾ ಇದ್ದೀನಿ … ಇದನ್ನ ಓದಿ … ನಿಮಗೆ ತಗೋಬೇಕು ಅಂತ ಅನ್ನಿಸ್ತಾ ಇಲ್ಲ ಅಂದ್ರೆ ಖಂಡಿತಾ ಫೋರ್ಸ್ ಮಾಡಲ್ಲ … ನಿಮ್ಮ ಚಾಯ್ಸ್ ನ ಗೌರವಿಸ್ತೀನಿ ….
ರಘು ಸಮರ್ಥ
(ಬೆನ್ನುಡಿಯಿಂದ )
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಬೆಲೆ : ೧೫೦/-
 

‍ಲೇಖಕರು avadhi

5 April, 2014

1 Comment

  1. kannika sripathy

    jeevana annodu ondu retiya hondanike mayhi nambike aste.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading