ಶ್ರೀಮತಿ ನೂತನ ಎಂ ದೋಶೆಟ್ಟಿಯವರು ತಮ್ಮ ವೃತ್ತಿಯ ಕಾರ್ಯಭಾರದ ಜೊತೆಗೆ ಕತೆ, ಕವಿತೆ, ಮುಂತಾದ ಸಾಹಿತ್ಯ ಸೃಜನೆಯಲ್ಲೂ ತೊಡಗಿಕೊಂಡಿರುವುದು ಸ್ವಾಗತಾರ್ಹ. ನೆಲದ ಕಂಪು, ನೀರ ತಂಪು ಇತ್ಯಾದಿ ಗ್ರಾಮೀಣ ಪರಿಸರದ ಹಿನ್ನಲೆಯಲ್ಲಿ ಬೆಳೆದ ಮನಸ್ಸೊಂದು ಐಟಿ, ಬೀಟಿಯೇ ಉಸಿರಾಗಿರುವ ನಗರಕ್ಕೆ ಆಗಮಿಸಿ, ಇಲ್ಲಿನ ಯಾಂತ್ರಿಕತೆಯ ಪರಿಣಾಮವಾಗಿ ಉಂಟಾಗಬಹುದಾದ ಕೌಟುಂಬಿಕ ವಿಘಟನೆಗೆ ಸ್ಪಂದಿಸಿರುವುದರ ಫಲಿತವೇ ಈ ಕಥಾಸಂಕಲನ.
ಇಲ್ಲಿನ ಪ್ರತಿ ಕತೆಯಲ್ಲೂ ಮಧ್ಯಮ ವರ್ಗದ ಗಂಡ-ಹೆಂಡಿರಿಬ್ಬರೂ ದುಡಿಯುವ ಕುಟುಂಬದ ಸಾಂಸಾರಿಕ ಏರು-ಪೇರುಗಳನ್ನು ತಮ್ಮದೇ ರೀತಿಯಲ್ಲಿ ಕಥೆಗಾರ‍್ತಿ ನಿರೂಪಿಸಲೆತ್ನಿಸಿದ್ದಾರೆ. ಆಟಿಕೆ ಕಾರು ಕೊಳ್ಳುವ, ದಣಿದು ಮನೆಗೆ ಬಂದು ಟೀ ಕಾಫಿ ಮಾಡುವಂಥ ಚಿಕ್ಕಪುಟ್ಟ ಸನ್ನಿವೇಶಗಳಿಂದ ಹಿಡಿದು, ವೇತನ, ಒಲುಮೆ ಮೊದಲಾದ ಸೂಕ್ಷ್ಮ ವಿಷಯಗಳ ವಿವೇಚನೆಯ ಸಂದರ್ಭಗಳನ್ನೆದುರಿಸುವಾಗ ಇವರ ಪಾತ್ರಗಳು ತಲ್ಲಣಿಸುತ್ತವೆ. ಆ ವೈಯಕ್ತಿಕ ತಲ್ಲಣ ಕೌಟುಂಬಿಕ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮವನ್ನು ಕತೆಗಾರ್ತಿ ಅನಾವರಣ ಮಾಡುತ್ತಾರೆ.
-ಡಾ.ಗೀತಾ ಪ್ರಸಾದ
ಬೆನ್ನುಡಿಯಿಂದ





0 Comments