ಮಂಜುನಾಥ ಲತಾ
-ಪ್ರೀತಿ
ಸತ್ತು ಹೋಗುತ್ತದೆ
ಎನ್ನುವುದಾದರೆ
ಮನುಷ್ಯರೇಕೆ ಬದುಕಿದ್ದಾರೆ?
-ರತಿಸುಖದ
ತುಟ್ಟತುದಿಯಲ್ಲಿ
ತನ್ನ ಇನಿಯನ
ತಬ್ಬಿಕೊಂಡ ಹೆಣ್ಣು
ಇವನಿಗಿಂತಲೂ
ಸುಖ ಕೊಡುವ
ಪುರುಷನಿದ್ದಾನೆಂದು
ಧ್ಯಾನಿಸುವುದು
ಹಾದರವಲ್ಲ;
ಮಹತ್ವಾಕಾಂಕ್ಷೆ.

-ದೇವರೇ,
ನಿನಗೆ
ನನ್ನ ಪ್ರಶ್ನೆಯೊಂದೇ:
ಇಷ್ಟಕೂ ನೀನು ಯಾರು?
-ದೇವರನ್ನು ಕಲ್ಪಿಸಿಕೊಳ್ಳುತ್ತಾ
ಹೋದ ಮನುಷ್ಯ
ದೇವರ ಆಕೃತಿಯನ್ನಷ್ಟೇ
ಕಡೆದ; ಪಡೆದ.
ಮನುಷ್ಯನ ಸೋಮಾರಿತನಕ್ಕೆ
ಇದಕ್ಕಿಂತ ಉದಾಹರಣೆ ಬೇಕೆ ?
-ಕವಿ ತನ್ನ ಪದ್ಯ ಓದುವುದನ್ನು
ನಿಲ್ಲಿಸಿದ ದಿನ
ನಿಜವಾದ ಕಾವ್ಯಪ್ರೇಮಿಗಳು
ಹುಟ್ಟಿಕೊಳ್ಳುತ್ತಾರೆ.
-ಸಂಬಂಧಗಳ ಹೆಸರುಗಳು
ಅಳಿಸಿಹೋದ ದಿನ,
ಬಹುಶಃ
ನಮ್ಮ ನಡುವಿನ
ಸಂಬಂಧಗಳು
ಸುಧಾರಿಸಬಹುದು.
-ತತ್ವಜ್ಞಾನಿಯಾಗಬೇಕೆಂಬ ಆಸೆಯಿದ್ದ
ಆತ, ಹೇಗೆ ಆಗಬೇಕೆಂಬುದು
ಗೊತ್ತಿಲ್ಲದೆ ಯೋಚಿಸಿ ಯೋಚಿಸಿ
ಹುಚ್ಚನಾಗಿ ಹೋದ.
ಕೊನೆಗೂ ಅವನ ಆಸೆ ಫಲಿಸಿತು!
(ಬೆನ್ನುಡಿ)
ರೂಪ ಪ್ರಕಾಶನ
ಬೆಲೆ : ರೂ 100/-



Good Read. Thank u sir.
best of luck..abhinandanegaLu..