ಭೂಮಿಯ ಮೇಲೆ ಜೀವಬೀಜ ಬಿತ್ತನೆ ಹೇಗಾಯಿತು ಎಂಬ ಕೌತುಕದ ಭೂಮಿಗುದುರಿತೇ ಜೀವ? ಪ್ರಶ್ನೆಯಿಂದ ಇಲ್ಲಿನ ಲೇಖನ ಮಾಲೆ ಆರಂಭವಾಗುತ್ತದೆ. ಬೇರಾವುದೋ ಲೋಕದಿಂದ ಸೂಕ್ಷ್ಮಜೀವಿಗಳು ಬಂದು ಸೌರವ್ಯೂಹದ ಎಲ್ಲ ಗ್ರಹಗಳಿಗೆ ಜೀವಸಿಂಚನ ಮಾಡಿದವು (ಕೆಲವು ತಜ್ಞರ ಪ್ರಕಾರ ಈಗಲೂ ಮಾಡುತ್ತಿವೆ) ಎಂಬ ವಾದವನ್ನು ಒಪ್ಪಿಕೊಂಡರೆ ನಮ್ಮ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ಅವು ಬದುಕಿ ವಿಕಾಸವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ನಮ್ಮಲ್ಲಿ ಏಳುತ್ತದೆ.
ಅದಕ್ಕೆ ಉತ್ತರ ರೂಪವಾಗಿ ಕೊನೆಯ ಲೇಖನವಿದೆ. ಜೀವಲೋಕದ ಈ ಆದಿ-ಅಂತ್ಯಗಳ ನಡುವೆ ಅರಿವಿನ ವಿರಾಟ್ ಜಗತ್ತನ್ನು ತೋರಿಸುವ ಇತರ ೨೫ ಆಸಕ್ತಿದಾಯಕ ಲೇಖನಗಳ ಸರಮಾಲೆ ಈ ಸಂಕಲದಲ್ಲಿದೆ. ಕೊನೆಗೊಂದು ವಿಶಿಷ್ಟ ಹಿನ್ನುಡಿಯೂ ಇದೆ. ಇಲ್ಲಿಂದ ಆರಂಭಿಸಿ ಅಲ್ಲಿಯವರೆಗೂ ಕ್ರಮಿಸಿ, ಅರಿವಿನ ಹೊಸಹೊಸ ಮಜಲುಗಳನ್ನು ಮುಟ್ಟಿ ಬರುವ ಅವಕಾಶ ಕನ್ನಡ ಓದುಗರಿಗಿದೆ.
– ನಾಗೇಶ ಹೆಗಡೆ
ಮುನ್ನುಡಿಯಿಂದ




0 Comments