ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ’ಭಾರತೀಯ ನಾಟಕ ಪರಂಪರೆ’

ಭಾರತೀಯ ನಾಟಕ ಪರಂಪರೆ


ಪ್ರೊ.ಪ್ರಭಾಕರ ಸಾತಖೇಡ ಅವರು ವೃತ್ತಿಯಿಂದ ಕಾಲೇಜು ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ರಂಗಕರ್ಮಿ. ಈ ನಾಲ್ಕು ದಶಕಗಳ ಅವಧಿಯಲ್ಲಿ ರಂಗ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದಾರೆ. ರಂಗ ಸಂಘಟಕರಾಗಿ,ನಿರ್ದೇಶಕರಾಗಿ, ನಟರಾಗಿ, ರಂಗಭೂಮಿಯ ಸಾಧ್ಯತೆಗಳನ್ನು ಜನಸಮುದಾಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ರಂಗಮಾಧ್ಯಮ’ದ ಮೂಲಕ ಇಂದು ಅನೇಕ ಕಲಾವಿದರು ನಿರ್ದೇಶಕರು ಬೆಳಕು ಕಂಡಿದ್ದಾರೆ. ಅಲ್ಲೆಲ್ಲಾ ಪ್ರೊ.ಸಾತಖೇಡ ಅವರ ನಿರಂತರ ಪ್ರಯತ್ನವಿದೆ.ಈ ಕೃತಿ, ಎಂಗಭೂಮಿ ಹಾಗೂ ನಾಟಕ ಸಾಹಿತ್ಯದ ವಿಷಯವನ್ನು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡುತ್ತದೆ.

1994ರಲ್ಲಿ ಗುಲಬರ್ಗಾ ಆಕಾಶವಾಣಿಯಿಂದ ಪ್ರಸಾರಗೊಂಡ ಈ ರೂಪಕ ಈಗ ವಿಸ್ತೃತ ರೂಪದಲ್ಲಿ ಕೃತಿಯಾಗಿ ಪ್ರಕಟವಾಗುತ್ತಲಿದೆ. ಇಲ್ಲಿ ಸಂಸ್ಕೃತ ನಾಟಕ-ಕನ್ನಡ ನಾಟಕಗಳ ಪರಿಚಯದೊಂದಿಗೆ ರಂಗಭೂಮಿಯ ಪ್ರಾಚೀನತೆಯನ್ನು ಹೇಳುವ ವಿಷಯ, ಕೇಳುಗರಿಗೆ-ಓದುಗರಿಗೆ ಬೇಸರವನ್ನುಂಡುಮಾಡುವುದಿಲ್ಲ. ರಂಗಭೂಮಿಯ ಪರಂಪರೆಯನ್ನು ಸರಳವಾದ ನುಡಿಗಟ್ಟಿನಲ್ಲಿ ಹೇಳಲಾಗಿದೆ.

ಒಂದು ದೀರ್ಘ ಲೇಖನವಾಗಬಹುದಾಗಿದ್ದೀ ಬರಹ ಇಲ್ಲಿ ರೂಪಕವಾಗಿ ಪ್ರಕಟವಾಗಿದೆ. ಪ್ರೊ.ಸಾತಖೇಡ ಅವರ ಇಂತಹ ಪ್ರಯತ್ನಗಳು ರಂಗಭೂಮಿಯಲ್ಲಿ ಮುಂದುವರಿಯಲೆಂದು ಹಾರೈಸುತ್ತೇನೆ.

ಡಾ.ಬಸವರಾಜ ಸಬರದ

 

 

‍ಲೇಖಕರು avadhi

15 March, 2013

1 Comment

  1. Gopaal Wajapeyi

    ಹಿರಿಯ ಮಿತ್ರ ಪ್ರೊ. ಪ್ರಭಾಕರ ಸಾತಖೇಡರಿಗೆ ಅಭಿನಂದನೆಗಳು. ಕೃತಿಯನ್ನು ‘ನೋಡಲು’ ಕಾತರಗೊಂಡಿದ್ದೇನೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading