ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಬಿ ಎ ಸನದಿಯವರ 'ಶಾಂತಿಗೊಂದು ಸವಾಲು'

ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಟಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು… ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯಪೂರ್ಣವೂ ಆಗಿದೆ…

…ಬೌದ್ಧಿಕ ಠೇಂಕಾರವಾಗಲಿ ಭಾವುಕ ಉನ್ಮಾದವಾಗಲಿ ಇವರಿಗೆ ಸಲ್ಲದವುಗಳು. ಒಳಗನ್ನು ನಿರೀಕ್ಷಿಸುತ್ತಾ ಹೊರಗನ್ನು ಅರಿಯುವ ಪರಿ ಇವರ ಕಾವ್ಯದ ದನಿಯಾಗಿದೆ. ಅಸಹನೆಯಲ್ಲಿ ಆರೋಪಿಸುವುದಕ್ಕಿಂತ ವಿಷಾದದಲ್ಲಿ ಆಪ್ತತೆಗಳನ್ನು ಅವುಗಳ ಸಂಬಂಧ ಸೂಕ್ಷ್ಮಗಳನ್ನು ವಿಶ್ಲೇಷಿಸುವ ಮನೋಧರ್ಮ ಇವರ ಕಾವ್ಯಧರ್ಮ. ದುರಾಸೆಯ ಸ್ವಾರ್ಥದಲ್ಲಿ ಭೂಖಂಡದ ಬದುಕನ್ನು ನರಕವಾಗಿಸುತ್ತಿರುವ ಸಾಮ್ರಾಜ್ಯಶಾಹಿ ಮನಸ್ಸುಗಳಿಗೆ ಸನದಿಯವರ ಕಾವ್ಯ ನೀಡುವ ಲೋಕದೃಷ್ಟಿ ವಿಹಿತ ಪ್ರಜ್ಞೆಯ, ವಿವೇಕದ ನಡೆಯ ನೋಟವಾಗಿದೆ.

ಪ್ರೊ|| ಎಸ್.ಜಿ.ಸಿದ್ಧರಾಮಯ್ಯ ಅವರ ಮುನ್ನುಡಿಯಿಂದ

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
ದೂರವಾಣಿ : 080-30578020/22 ಫ್ಯಾಕ್ಸ್ : 080-30578023
ಇಮೇಲ್ : navakarnataka@gmail.com
ಬೆಲೆ : ರೂ. 100
 

 

‍ಲೇಖಕರು avadhi

31 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading