ಬೆಂಗಳೂರಿನ ವರದಿಗಾರರ ತಂಡವೊಂದರ ಕುತೂಹಲ ಮತ್ತು ಆಸಕ್ತಿಯ ಫಲವಾಗಿ ಬಿಹಾರದ ನಾಯಕರಿಬ್ಬರ ಸುತ್ತ ಕಂಡುಬಂದ ಬೆಳವಣಿಗೆಯ ಕಥೆ ಇದು

-ಶೇಷಣ್ಣ (ಎಸ್. ಕೆ. ಶೇಷಚಂದ್ರಿಕ ) ೧೯೬೦ರಲ್ಲಿ ಮುಂಬಯಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಅಪ್ರೆಂಟಿಸ್ ವರದಿಗಾರರಾಗಿ ವೃತ್ತಿ ಆರಂಭಿಸಿದ ಇವರು ಬೆಂಗಳೂರಿನ ಜನವಾಣಿ- ಪ್ರಜಾಮತ, ಸಂಯುಕ್ತ ಕರ್ನಾಟಕ, ಪ್ರೆಸ್ ಇನ್ ಫರ್ ಮೇಷನ್ ಬ್ಯೂರೋ, ಕ್ಷೇತ್ರ ಪ್ರಚಾರ ವಿಭಾಗ, ಆಕಾಶವಾಣಿ ಮತ್ತು ದೂರದರ್ಶಕಗಳ ಹಿರಿಯ ವರದಿಗಾರ ಮತ್ತು ಸಂಪಾದಕ, ಮುಖ್ಯಮಂತ್ರಿಯವರ ಪತ್ರಿಕಾ ಕಾರ್ಯದರ್ಶಿ, ದಿ ಟ್ರಿಬ್ಯೂನ್ ಮತ್ತು ದೈನಿಕ ಭಾಸ್ಕರ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
-ಮಂಡ್ಯ-ಮೈಸೂರುಗಳಲ್ಲಿ ೧೯೭೦ರ ದಶಕದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರಾಗಿದ್ದ ಎಂ ಕೆ ವಿದ್ಯಾರಣ್ಯ ಬೆಂಗಳೂರಿನ ಪ್ರೆಸ್ ಟ್ರಸ್ಟ್ ಆಫ್ ಇಂಡಿಯ ಸುದ್ದಿ ಸಂಸ್ಥೆಯ ಪ್ರಮುಖ ವರದಿಗಾರ/ ಬ್ಯೂರೋ ಚೀಫ್ ಆಗಿ ಸೇವೆ ಸಲ್ಲಿಸಿದವರು. ನಂತರ ‘ಪೊಲಿಟಿಕಲ್ ರಿವ್ಯೂ’ ಇಂಗ್ಲೀಷ್ ಪತ್ರಿಕೆಯ ಸಂಪಾದಕರಾಗಿದ್ದವರು.
-ಉತ್ಸಾಹಿ ತರುಣ ಕಿರಣ್ ವಟಿ ಪುಸ್ತಕ ಪ್ರಕಾಶನ, ಅನಿಮೇಷನ್ ಚಲನಚಿತ್ರ, ರಂಗಭೂಮಿ, ಪತ್ರಿಕೆಯ ಕಾಲಂ ಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಕಳೆದ ಎರಡು ದಶಕಗಳಿಂದ ಅಮೋಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
-ವೃತ್ತಿಯಲ್ಲಿ ನ್ಯಾಯವಾದಿಯಾದರೂ ಮಾಧ್ಯಮದಲ್ಲಿ ಕಳೆದ ಮೂವತ್ತು ವರುಷಗಳ ಸೇವೆ ಸಲ್ಲಿಸಿದ್ ಗೂಳೆಹರವಿ ಪ್ರಕಾಶ. ಮಾಹಿತಿ ಸಂಗ್ರಹಣೆಯಲ್ಲಿ ಸಿದ್ಧಹಸ್ತರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು
ಬೆಲೆ : ೧೦೦/-


0 Comments