ನನ್ನ ತೇಜಸ್ವಿ ಎಂಬ ಅದ್ಭುತ ಗ್ರಂಥ
ಕಳೆದ ವಾರ ಓದಿ ಮುಗಿಸಿದ ಒಂದು ಅದ್ಬುತವಾದ ಪುಸ್ತಕದ ಕುರಿತು ಒಂದೆರಡು ಮಾತು . ತೇಜಸ್ವಿ ಕನ್ನಡದ ಪ್ರಮುಖ ಚಿಂತಕ ಮತ್ತು ಬರಹಗಾರ ಎಂಬುದು ಅವರ ಕೃತಿಗಳನ್ನು ಓದಿದ ಎಲ್ಲರಿಗೂ ಗೊತ್ತು , ಆದರೆ ಅವರ ವ್ಯಕ್ತಿತ್ವದ ಪರಿಚಯ ಕೇವಲ ಬರಹದ ಮುಖೇನ ಆಗಿತ್ತು.
ರಾಜೇಶ್ವರಿ ತೇಜಸ್ವಿ ಅವರ “ನನ್ನ ತೇಜಸ್ವಿ” ಕೃತಿ ನಮಗೆ ಪೂರ್ಣಚಂದ್ರ ತೇಜಸ್ವಿ ಅವರ ಸಂಪೂರ್ಣ ಚಿತ್ರಣವನ್ನು ಕೊಡುತ್ತದೆ, ಅಲ್ಲದೆ ಕುವೆಂಪು ಅವರ ಕುರಿತು ಅರಿವು ಮೂಡಿಸುತ್ತದೆ, ತೇಜಸ್ವಿ ಅವರ ಕಾಡಿನ ಪ್ರೇಮ , ಕೃಷಿಯ ಆಸಕ್ತಿ , ಬೇಟೆ, ಪತ್ರಗಳು, ಚಳುವಳಿಗಳು ತುಂಬ ಖುಷಿ ಕೊಡುತ್ಹವೆ. ಪುಸ್ತಕದ ಕೊನೆ ತಲುಪಿದಾಗ ಕನ್ನಡದ ಜನ ಮತ್ತು ಜಗತ್ತು ಒಂದು ಅನನ್ಯ ರತ್ನವನ್ನು ಕಳೆದು ಕೊಂಡಿತಲ್ಲ ಎಂಬ ಬೇಸರದೊಂದಿಗೆ ಕಣ್ಣಿನಲ್ಲಿ ನೀರು ತುಂಬುತ್ತದೆ.]]>



0 Comments