ದೇವರ ಜಾತ್ರೆ
ನರಸಿಂಹಮೂರ್ತಿ ಹೂವಿನಹಳ್ಳಿ ಕಾದಂಬರಿ ಹೀಗೆ ಹೇಳುತ್ತದೆ:
“ನಲಿ ಕಲಿ ಹುಡುಗ್ರು. ಓಟ್ಲು ಬೆಂಚ್ ಕಲ್ಲಿನ ಮ್ಯಾಲೆ ಕಾಲು ಮ್ಯಾಲೆ ಕಾಲು ಆಕ್ಕಂಡು ಕಾಫಿ ಹೀರಾದು. ಬೀಡಿ, ಸಿಗರೇಟು ಸೇದಾದು. ಅನ್ಸ್, ಪಾನ್ ಪಾರಾಗ್ ನ್ನಾ ದವ್ಡೆಗೆ ಸಿಕ್ಸುಕಂಡು ವಗೆಸೊಪ್ಪು ಎಂಜುಲ್ನಾ ಪಿಚಕ್ನೆ ನೆಲುಕ್ಕೆ ಉಗಿಯಾದು. ದೊಡ್ಡೋರು ಬಂದ್ರೆ ಯದ್ರೊದಿರ್ಲಿ, ಕುಂತ್ಕಳ್ಳಾಕೆ ಜಾಗನೂ ಕೊಡ್ದೇ ಬಾರೋ, ಓಗೋ, ಏನೋ ಅಂತ ಮಾತಾಡ್ಸಾದು. ಉಟ್ಟಿಸಿದ ತಂದೆ ತಾಯಿಗೆ ಒಂದು ಒತ್ತು ಕೂಳು ಆಕಾದಿರ್ಲಿ. ಒಂದು ದಿನಕ್ಕೆ ಬೇಕಾಗುವಷ್ಟು ಎಲೆ, ಅಡ್ಕೆ ಕೊಡುಸ್ದೆ, ತಳ್ಕು ಬಳ್ಕು ಮಾತುಗ್ಳು ಬಾಲಬೀಸ್ತಾ, ಅವುರ್ದೆ ಗುಂಗುನಾಗೆ ಗುಂಪು ಕಟ್ಕಂಡು ನಗ್ತಾರೆ. ಮೈಯಲ್ಲಾ ಕಾಣಂಗೆ ಬಟ್ಟೆ ಆಕಂಡಿರಾ ಅರ್ಥವಿಲ್ಲದ ಆಡ್ನ, ಸಂಗೀತನ ಜೊಡ್ಸಿರಾ ಸಿನಿಮಾ ಬಂತು ಅಂದ್ರೆ ಸಾಲುಗಟ್ಟಿ ಸಿನಿಮಾ ನೋಡಾಕೆ ನುಗ್ಗುತಿರ್ತಾರೆ ಕಂತ್ರಿ ನಾಯಿ ನನಮಕ್ಳು”
“ನಿಂಗೆ ಏನು ಕಾಣಬೇಕು. ಆ ಗೌಡ, ಈ ಗೌಡ, ಊರು ಗೌಡ, ಐದಳ್ಳಿ ಗೌಡ ಅಂತ ಸಲಾಮು ವಡ್ಕಂಡು ನಿನ್ನ ಕೆಲ್ಸ ತೂಗ್ಸುಕೊಳ್ತೀಯ. ಈ ತಾಯಿ ಜಾತ್ರೆ ಮಾಡಾದು ಸಾಕು. ಆ ಬಡ್ಡಿ ನರಸಿಂಹಣ್ಣನ ಯಮನ ಬಾಧೇನು ಸಾಕು. ಈ ದೇಸದಾಗೆ ದೇವ್ರು ಯಸ್ರುನಾಗೆ ನನ್ನಂತ ಬಡುವ್ರು ದುಡ್ಡು ಇರಾರು ಕಂಕ್ಳಾಗೆ ಸಿಕ್ಕು ಆಕ್ಕಂಡು ನರಳ್ತಾ ಅವ್ರೆ. ಉದ್ದಾರ ಆಗಾದಿರ್ಲಿ. ಸಾಲಶೂಲ ಇಲ್ದಂಗೆ ನಿಂತುಕ್ಕೊಳ್ಳಾಕೂ ಆಗ್ತಾ ಇಲ್ಲ. ಇಂತ ಊರುಗಳಾಗೆ ನಮ್ಮಂತ ಬಡಪಾಯಿಗ್ಳು ಅಣೆಬರನೇ ಇಷ್ಟು; ಹಿಂದಿನ ಸಾರಿ ನಡ್ದು ಜಾತ್ರೆಗೆ ಮಾಡಿರಾ ಸಾಲನೇ ತೀರ್ಸಿಲ್ಲ. ಯಾವ ಪುಣ್ಯಾತ್ಮನ್ನಾ ಇಡೀಬೇಕೋ ಎನೋ. ಇಲ್ಲ ಅಂದ್ರೆ ಆವಿರಾ ಉತ್ತದೊಳೀಕ್ಕೆ ಕೈ ಹಾಕಿ ಸಾಯಾದೇ ಒಳ್ಳೇದು”
“ಆ ಗ್ಯಾಸ್ ಲೈಟ್ ವಡ್ಡು ಓದ್ರೆ ನಮ್ಮ ಜೀವ ಯೇನು ಓಗ್ತ ಇರಲಿಲ್ಲ. ದೇವ್ರು ಕಣ್ಣೆತ್ತಿ ನೋಡಿದ್ರೆ ಅಂತ ಹತ್ತು ಲೈಟ್ ತಂದು ಬಿಸಾಕುತ್ತಿದ್ದೆ. ಈ ನರಾ ಮನ್ಸುರು ಮಾತು ಕಟ್ಕಂಡು ಪೋಲಿಸಪನ್ನಾ ಹಿಂದಿಕ್ಕಂಡು ಬಂದಿದ್ದೀಯಲ್ಲಾ. ಯಾರು ಉಗಿಲಿಲ್ಲವೆ ನಿನ್ನ. ಓಗ್ಲಿ, ಆ ಪೊಲೀಸ್ ನವ್ನು ನಿನ್ನ ಲೈಟ್ ಕೊಡ್ಸು ಬಿಟ್ಟನೇನು? ಅವ್ನು ಮಾಡಿದ್ದು ಇಷ್ಟೆ. ನಾವು ಊರಾಗೆ ತಲೆ ಎತ್ಕಂಡು ತಿರುಗಾಡ್ದಂಗೆ ಮಾಡೋದ್ರು. ಪೊಲೀಸ್ ನವ್ನು ಅತ್ರ ಓಗಿ ಕಂಪ್ಲೆಂಟು ಕೊಡಾದು, ಮಸಣಕ್ಕೆ ಯಣ ತಕಂಡು ಓಗಾದು, ಕೆರೆ ಹಿಂದಕ್ಕೆ ನೀರು ಓಗಾದು, ಆವಿನ ಜೊತೆ ಸರ್ಸ್ವಾಡಿ ಮುತ್ತು ಕೊಡಾದು ಇವೆಲ್ಲ ಒಂದೆತರ. ಓಗಿದ್ದು ಓಯ್ತು ಅಂತ ತೆಪ್ಗೆ ಮನೆಗೆ ಇದ್ದಿದ್ರೆ ಈ ಬಯ್ಲು ನಾಟ್ಕನಾ ಯಾರಾದ್ರೂ ನೋಡಾಕೆ ಬತ್ತಿದ್ರ. ಪೊಲೀಸಪ್ಪನ್ನಾ ಕರ್ಕಂಡು ಬಂದು ದೊಡ್ಡ ಸಾಸ ಮಾಡಿದ್ದೀಯ. ಇನ್ನು ಒಂದು ಬಾಕಿ ಉಳುದೈತೆ. ನಿನ್ನ ಮಾರಿಗೆ ಮಂಗಳಾರ್ತಿ ಎತ್ತಬೇಕು ನೋಡು. ದೊಡ್ಡ ಘನಕಾರ್ಯ ಮಾಡಿದ್ದೀಯ ಅಂತ.”
(ಬೆನ್ನುಡಿಯಿಂದ ಆಯ್ದ ಭಾಗ )






0 Comments