ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಟಿ ಪಿ ಅಶೋಕ ಅವರ ’ತೇಜಸ್ವಿ ಕಥನ’

ಟಿ ಪಿ ಅಶೋಕ


ಪೂರ್ಣಚಂದ್ರ ತೇಜಸ್ವಿ ಅವರ ಕಥೆ, ಕಾದಂಬರಿ, ಪ್ರಬಂಧ, ಪ್ರವಾಸ ಕಥನ ಮೊದಲಾದ ಬರಹಗಳನ್ನು ಒಟ್ಟಾಗಿ ಇಟ್ಟುಕೊಂಡು ತೇಜಸ್ವಿಯವರ ಕೃತಿಗಳ ಹಿಂದಿರುವ ದರ್ಶನವನ್ನು ಶೋಧಿಸುವ ಮಹತ್ತ್ವಾಕಾಂಕ್ಷೆಯಿಂದ ಪ್ರಸ್ತುತ ಕೃತಿ ಉದ್ಯುಕ್ತವಾಗಿದೆ. ತೇಜಸ್ವಿಯವರ ಬರಹಗಳಲ್ಲೇ ಕಾಣಸಿಗುವ ಬೌದ್ಧಿಕಲಹರಿಯನ್ನು ಅನುಸರಿಸುತ್ತ ಸಿದ್ಧಾಂತದ ಶಸ್ತ್ರಗಳನ್ನು ಝಳಪಿಸದೆ ಕೃತಿಯ ಮಾತುಗಳನ್ನೇ ಎತ್ತಿಕೊಂಡು ಅವುಗಳ ಮೂಲಕವೇ ವಿಮರ್ಶಾ ವಿವೇಕವನ್ನು ಹೆಣೆಯುವ ಕ್ರಮವನ್ನು ಈ ಕೃತಿಯು ಆವಿಷ್ಕರಿಸಿಕೊಂಡಿದೆ. ಟಿ ಪಿ ಅಶೋಕ್ ಅವರು ಕನ್ನಡದ ಹಲವಾರು ಲೇಖಕರ ಬಗ್ಗೆ ಇಂಥ ಅಧ್ಯಯನಗಳನ್ನು ಈಗಾಗಲೇ ನಡೆಸಿರುವುದರಿಂದ ಸಹಜವಾಗಿಯೇ ಈ ಕಥನದಲ್ಲಿ ಕನ್ನಡದ ಇತರ ಮಹತ್ತ್ವದ ಲೇಖಕರೂ ಕೂಡಿಕೊಳ್ಳುತ್ತಾರೆ. ಅವರೆಲ್ಲರ ನಡುವಿನ ಸಂಬಂಧದ ತಾತ್ತ್ವಿಕ ಭಿತ್ತಿಯ ಮೇಲೆ ಈ ಕಥನವು ತೇಜಸ್ವಿ ಕೃತಿಸಮೂಹದ ಆಪ್ತಾವಲೋಕನವೊಂದನ್ನು ನಮ್ಮ ಮುಂದಿಡುತ್ತದೆ.
ಪ್ರಕಾಶಕರು : ಅಕ್ಷರ ಪ್ರಕಾಶನ ಹೆಗ್ಗೋಡು
ಬೆಲೆ : ರೂ. 100/-
 

‍ಲೇಖಕರು avadhi

4 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading