ಡೈಲಿ ಬುಕ್ : ’ಜ್ಞಾನಭಂಡಾರಿ ಬಸವಣ್ಣ’

ಭಗವದ್ಗೀತೆ, ಬೈಬಲ್, ಶಂಕರ, ರಾಮನುಜರ, ಬಸವಾದಿ ಶರಣರ, ಪುರಂದರ ಕನಕಾದಿ ದಾಸವರೇಣ್ಯರ ಬರಹಗಳು, ಮನ ತನುವಿನ ಅನುಭವದತ್ತ ಪುಣಿಸುವ ಸೂತ್ರಗಳೇ ಹೊರತು ಪಾಂಡಿತ್ಯ ಪ್ರದರ್ಶನಕ್ಕಾಗಿ ಹೇಳಿದವುಗಳಲ್ಲ. ಸಿಮೆಂಟಿನ ಛತ್ತು ಗಟ್ಟಿಗೊಳ್ಳಲು ತಟ್ಟಿ ಬಳಸಿದಂತೆ! ನಂತರ ತಟ್ಟಿಯನ್ನು ಯಾರೂ ಪೂಜಿಸುವುದಿಲ್ಲ; ಸಂಗ್ರಹಿಸುವುದಿಲ್ಲ.

ಅನುಭವ ಎನ್ನುವುದು ತನುವಿನ ಗರ್ಭದಲ್ಲಿಯೇ ನಿಮರ್ಾಣವಾಗಿದೆ. ಕಣ್ಣು ನೋಡುವುದನ್ನು, ಮೂಗು ಮೂಸಿಸುವುದನ್ನು, ಕಿವಿ ಕೇಳುವುದನ್ನು, ಚರ್ಮ ಸ್ಪಶರ್ಿಸುವುದನ್ನು, ನಾಲಿಗೆ ರುಚಿಸುವುದನ್ನು ತನು ಗರ್ಭದಲ್ಲಿರುವಾಗಲೇ ಕಲಿತುಕೊಂಡು ಬಂದಿದೆ. ತನುವಿನ ಈ ಐದು ಜ್ಞಾನೇಂದ್ರಿಯಗಳಿಗೆ ಯಾರ ಪಾಠದ ಅವಶ್ಯಕತೆಯೂ ಇಲ್ಲ.
ವಸ್ತುವಿನ ಸತ್ಯ, ಅಸತ್ಯವನ್ನು ಕಣ್ಣು ತನ್ನ ಗರ್ಭದಲ್ಲಿಯೇ ಅಡಗಿಸಿಕೊಂಡಿದೆ. ಅಸತ್ಯ ಮೋಡಿ ನಿರ್ಧರಿಸುವ ಮುನ್ನ ಸತ್ಯ ತನ್ನ ಅನುಭವಕ್ಕೆ ತಂದುಕೊಂಡು ನೋಡುವುದೇ ಕಣ್ಣಿನ ಸ್ವಾನುಭವ! ಈ ನೋಟದಿಂದ ತನು ವಿಚಲಿತವಾಗುವುದಿಲ್ಲ. ಬದಲಿಗೆ ವಸ್ತುವಿನ ಸತ್ಯದರ್ಶನವಾಗುತ್ತದೆ.
ಉದಾ: ಕಲ್ಲು ನೋಡಿದ ಕಣ್ಣು ಕಲ್ಲೆಂದು ಹೇಳಲು ಬಾಯಿಗೆ ಆದೇಶ ಕೊಡುತ್ತದೆ. ಬಾಯಿ ಕಲ್ಲೆಂದು ಹೇಳುತ್ತದೆ. ಇದು ಕಣ್ಣಿನ ಅನುಭವದ ದೈಶ್ಯ ಸಂದೇಶ! ಕಲ್ಲನ್ನು ನೋಡಿದ ಕಣ್ಣಿಗೆ, ಕಲ್ಲೆಂದು ನುಡಿದ ಬಾಯಿಗೆ ಮತ್ತು ಕಲ್ಲೆಂದು ಆಲಿಸಿದ ಕಿವಿಗಳಿಗೆ ಯಾವ ಭ್ರಮೆಯೂ ಉಂಟಾಗುವುದಿಲ್ಲ. ತುಂಡು ಕಲ್ಲು ತೆಗೆದುಕೊಂಡು ಮೂರು ಭಾಗಗಳನ್ನಾಗಿ ಮಾಡಿ, ಕ್ರಿಸ್ತ, ಕ್ರಿಷ್ಣ, ಮಸೀದಿಯನ್ನು ಕೆತ್ತಿದಾಗ ಕಲ್ಲೆಂದು ಹೇಳಿದ ಕಣ್ಣಿನ ಅನುಭವ ಕಣ್ಣಿನಲ್ಲಿಯೇ ಉಳಿಯುತ್ತದೆ. ಕಣ್ಣಿನಲ್ಲಿ ದೇವರು, ಧರ್ಮ ಎನ್ನುವ ಭ್ರಮೆ ಸೃಷ್ಠಿಯಾಗುತ್ತದೆ. ದ್ವೇಷ, ರೋಷ, ಅಸೂಯೆಗಳು ತನುಗಳಲ್ಲಿ ಮನೆ ಮಾಡಿಕೊಳ್ಳುತ್ತವೆ.
ತನುವಿಲ್ಲದ್ದ ಅನುಭವ ತನುವಿಗೆ ಬಳಕೆಯಾಗಲಿ ಎಂದು ಕ್ರಿಸ್ತ, ಕ್ರಿಷ್ಣ, ಬುದ್ಧ, ಮಹಾವೀರ, ಶಂಕರ, ರಾಮಾನುಜ, ಬಸವಾದಿಶರಣರು, ದಾಸವರೇಣ್ಯರು ಪ್ರಯತ್ನ ಪಟ್ಟು ತನುವಿನಲ್ಲಿಯೇ ಅನುಭವದ ಸುಖವನುಂಡರು. ಅದು ಹೀಗಿದೆ ಎಂದು ಸೂತ್ರ ರೂಪದಲ್ಲಿ ಬರೆದು ತಿಳಿಸಿದರು. ಆದರೆ ಭ್ರಮೆಯಿಂದಾಗಿ ಒಬ್ಬೊಬ್ಬ ಅನುಭಾವಿಗೆ ಹಿಂಬಾಲಕರು ಹುಟ್ಟಿಕೊಂಡರು. ಅದು ಜಗದ ತುಂಬಾ ವ್ಯಾಪಿಸಿತು. ತನುವಿಗೆ ಹಚ್ಚಿಕೊಂಡ ಭ್ರಮೆಯ ಕಿಚ್ಚನ್ನು ಯಾವ ಗ್ರಂಥಗಳೂ ಆರಿಸಲರಿಯವು.
ಬಸವರಾಜ ಸ್ವಾಮಿ
(ಬೆನ್ನುಡಿ)
ಪ್ರಕಾಶಕರು: ಸುದ್ದಿಮೂಲ ಪಬ್ಲಿಷರ್ಸ್ ಇಂಡಿಯಾ ಲಿಮಿಟೆಡ್
ಬೆಲೆ : ರೂ. 400/-
 
 

‍ಲೇಖಕರು avadhi

March 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: