ಸಿ ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕವಿತೆಗಳಲ್ಲಿ ಮಕ್ಕಳ ಬುದ್ದಿಗೆ ಮೀಟುಕೊಡುವ ಜಾಣ್ಮೆ ದೆ. ಖುಷಿ ಕೊಡುವ ಮನೋಹರವಾದ ಕಲ್ಪನೆಗಳಿವೆ. ಕಲಿಕೆಗೆ ಸಹಾಯಕವಾಗುವ ಭಾಷೆಯ ಚೆನ್ನಾಟವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಉಸಿರನ್ನೆ ಹಿಡಿದು ಈ ಕವಿತೆಗಳನ್ನು ಕಟ್ಟಿದ ಹಾಗಿದೆ.
ಇಲ್ಲಿರುವ ಕವಿತೆಗಳನ್ನು ತಿದ್ದಿ ತೀಡಿ ಇನ್ನಷ್ಟು ಮಾಟಗೊಳಿಸ ಬಹುದಿತ್ತು ಮುಂದೆ ಬರೆಯುವ ಕವಿತೆಗಳಲ್ಲಿ ಶೇಷಾದ್ರಿ ಆ ಕಸುಬು ಕೈಗೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ.
ಮಕ್ಕಳ ಸಾಹಿತ್ಯಕ್ಕೆ “ಗಿಲ್ ಗಿಲ್ ಗಿಲಗಿಚ್ಚಿ” ನಿಸ್ಸಂಶಯವಾಗಿ ಒಂದು ಒಳ್ಳೆಯ ಕೊಡುಗೆ.
– ಎಚ್. ಎಸ್ . ವೆಂಕಟೇಶಮೂರ್ತಿ
ಬೆನ್ನುಡಿಯಿಂದ







one of the best book for childrens. . must read