ಕನ್ನಡ ಪತ್ರಿಕೋದ್ಯಮದಲ್ಲಿ ಕುಷ್ಟಗಿ ಅವರ ಬರವಣಿಗೆ ವಿಶಿಷ್ಟವಾದುದು, ಹರಿತವಾದುದು ಹಾಗೂ ಬೌದ್ಧಿಕವಾಗಿ ಹರಿತವಾದುದು ….. ಇತ್ತೀಚಿನ ವರ್ಷಗಳಲ್ಲಿ ಕುಷ್ಟಗಿ ಅವರೊಂದಿಗೆ ಗಂಟೆಗಟ್ಟಲೆ ಚರ್ಚೆಮಾಡುವುದು ನನಗೆ ವಾಡಿಕೆಯಾಗಿಬಿಟ್ಟಿದೆ. ಅವರು ಬೌದ್ಧಿಕ ವಲಯದ ವಿವಿಧ ಕ್ಷೇತ್ರಗಳನ್ನು ಆವರಿಸಿಕೊಂಡಿದ್ದನ್ನು ಕಂಡು ನಾನು ಚಕಿತನಾದದ್ದಂತೂ ಹೌದು. ಹೈದ್ರಾಬಾದ್ ಕರ್ನಾಟಕ ಜೀವನ, ಸಂಸ್ಕೃತಿ, ಚರಿತ್ರೆ ಇತ್ಯಾದಿಗಳ ವಿವಿಧ ಆಯಾಮಗಳ ಬಗೆಗೆ ಸುಲಲಿತವಾಗಿ ಮಾತನಾಡಬಲ್ಲ ಕುಷ್ಟಗಿ ಅವರು ಪ್ರಾಚೀನ ತತ್ವಶಾಸ್ತ್ರದಿಂದ ಹಿಡಿದು ಆಧುನಿಕ ಸಿದ್ಧಾ೦ತಗಳವರೆಗೂ ಪ್ರವೇಶಿಸಬಲ್ಲ ವಿದ್ವಾಂಸರು ….. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ಬಹಳ ಮುಖ್ಯವಾದ ಲೇಖನಗಳನ್ನು ಕುಷ್ಟಗಿ ಅವರು ಬರೆದಿದ್ದಾರೆ. ಕನ್ನಡದ ಮೂಲಕ ಹೊರಜಗತ್ತನ್ನು ನೋಡಿ ಅರ್ಥಮಾಡಿಕೊಂಡು ಕನ್ನಡದಲ್ಲಿ ಬರೆಯುವುದು ಬಹಳ ದೊಡ್ಡ ಜವಾಬ್ದಾರಿ ….

ಪ್ರಸ್ತುತ ಕೃತಿ ‘ಪ್ರಜಾಪ್ರಭುತ್ವದ ತಲ್ಲಣ’ ಭಾರತದ ರಾಜಕಾರಣವನ್ನು ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಗ್ರಹಿಸಲು ಯಶಸ್ವಿಯಾಗಿದೆ. ಸ್ವಾತಂತ್ಯೋತ್ತರ ಭಾರತದ ರಾಜಕೀಯ ಮಗ್ಗುಲುಗಳನ್ನು ಬಹುವಿನ್ಯಾಸಗಳಿಂದ ಚರ್ಚಿಸಲು ಯತ್ನಿಸಿರುವ ಈ ಕೃತಿ ಉಳಿದ ಭಾರತೀಯ ಭಾಷೆಗಳಿಗೂ ಮತ್ತು ಮುಖ್ಯವಾಗಿ ಇಂಗ್ಲೀಷ್ ಭಾಷೆಗೂ ಅನುವಾದವಾಗಬೇಕಾದ ಜರೂರಿದೆ ….
(ಮುನ್ನುಡಿಯಿಂದ )
ಡಾ ವಿಜಯ್ ಪೂಣಚ್ಚ ತಂಬಂಡ
ಡೈಲಿ ಬುಕ್ : ಗಂಗಾಧರ ಕುಷ್ಟಗಿ ಅವರ ’ಪ್ರಜಾಪ್ರಭುತ್ವದ ತಲ್ಲಣಗಳು’
ನಿಮಗೆ ಇವೂ ಇಷ್ಟವಾಗಬಹುದು…

0 Comments