ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ’ಕಾಲದಲೆಯ ಮೇಲೆ’

ಕವಿತೆಯಂತೆಯೇ ಇದ್ದವಳು, ನಿತ್ಯ ಜೊತೆಗಿಲ್ಲದಿದ್ದರೂ ಜೊತೆಗೇ ಇದ್ದವಳು, ‘ನಮ್ಮ ಪ್ರೀತಿಯ ಪೂರ್ಣಿಮಾ’ ಅವಳು. ಕವಿತೆಗಳನ್ನು ಬರೆದೂ ಬರೆಯದವಳಂತೆ ಪ್ರಕಟಮಾಡದೆ ಹಾಯಾಗಿ ಇದ್ದಳಲ್ಲ, ಆ ಶಕ್ತಿ ಅಂಥ ಅವಳಿಗೆ ಮಾತ್ರ.

ಆದರೂ ತರವಲ್ಲವಿದು ನಿನಗೆ ಪೂರ್ಣಿಮಾ, ಪ್ರಕಟಿಸಬೇಕಿತ್ತು ಅಂತಂದರೆ ನಕ್ಕು ಮಾತು ತೇಲಿಸಿ ಮರೆಸುವ ಅವಳ ನಗೆಬಗೆ ಕಣ್ಣಿಗೆ ಕಟ್ಟುತ್ತಿದೆ. ಕಣ್ಣೆದುರಿನ ಚಿತ್ರವಾದಳು ಎಂತು ಬಂಗಾರ ಹುಡುಗಿ, ಇಷ್ಟು ಬೇಗ.

ಸತ್ಯ ಮತ್ತು ನಿಜ ಕಾಲದಲೆಗಳು ನಂಬುವ ಮತ್ತು ನುಂಗುವ ಕಷ್ಟಗಳೊಡನೆ ಬಿಟ್ಟುಹೋದ ಈ ಕವನಗಳು ಉದ್ದಕ್ಕೂ ಸ್ಪರ್ಶಿಸುವ ಸಾವಧಾನದ ಹಸುಕು ಬಿಸಿನುಡಿ, ಒಳಮಾತು, ಕಾಣದಂತೆ ಆದರೆ ತಿಳಿಯುವಂತೆ ಹೊಳೆವ ಕಣ್ ತೇವ… ಓದುತ್ತಾ ಹೋದಂತೆ ನಿಶ್ಯಬ್ದಗೊಳಿಸುತ್ತವೆ.

ವೈದೇಹಿ

 

 

‍ಲೇಖಕರು avadhi

7 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading