‘ಹ್ಯಾಪಿ ಗೋ ಲಕಿ ಗಯ್’ ಮಿಥುನ್ ಗೆ ತನ್ನ ಜೀವನದ ಮೂವತ್ತು ವಸಂತಗಳು ಉರುಳಿದ್ದೇ ಗೊತ್ತಾಗಲಿಲ್ಲ. ಜೀವನದ ಹೈವೇಯಲ್ಲಿ ಅವನದು ಯಾವತ್ತೂ ನೂರಿಪ್ಪತ್ತು. ನೂರನಲ್ವತ್ತರ ವೇಗ. ಹೀಗಿರುವಾಗ ಅದೊಮ್ಮೆ ಸಣ್ಣದೊಂದು ಗುಂಡಿಯಲ್ಲಿಅವನ ಬಂಡಿ ಇಳಿದು ಹತ್ತಿತು ಆಗಲೇ ಮಿಥುನ್ ಗೆ ಗೊತ್ತಾಗಿದ್ದು, ತಾನು ಆಗಸದಲ್ಲಿ ಹಾರುತ್ತಿಲ್ಲ ಎಂದು. ಕೈ ತುಂಬಾ ಸಂಬಳ, ಕಣ್ತುಂಬಾ ನಿದ್ದೆ ಇದ್ದವನಿಗೆ ಆ ಕಣ್ಣೊಳಗೆ ಕನಸುಗಳೇ ಇಲ್ಲ ಎನ್ನುವುದು ಅರಿವಿಗೆ ಬಂದದ್ದೇ ಆ ಕ್ಷಣ!

ಹೌದು, ಅಕ್ಷರಶಃ ಕನಸುಗಳನ್ನು ಕಳೆದುಕೊಂಡವನೀತ. ತನ್ನ ನಿದ್ದೆಯಲ್ಲಿ ಒಂದೇ ಒಂದು ಕನಸೂ ಬರುತ್ತಿಲ್ಲ ಎಂದು ಗೊತ್ತಾಗುವ ವೇಳೆಗಾಗಲೇ ಅವನು ಬಲುದೂರ ಸಾಗಿದ್ದ. ಅರೆ, ಎಲ್ಲಿ ಹೋದವು ನನ್ನ ಕನಸುಗಳು?! ನನ್ನಿಂದೇಕೆ ಅವು ದೂರಾಗಿವೆ? ಅಸಲಿಗೆ ಈ ಮೊದಲು ನನಗೆ ಯಾವುದಾದರೂ ಕನಸು ಬಿದ್ದಿತ್ತಾ? ಇಂಥ ಪ್ರಶ್ನೆಗಳ ಸರಮಾಲೆಯನ್ನೇ ಹೊತ್ತ ಮಿಥುನ್ ಉತ್ತರ ಕಂಡುಕೊಳ್ಳು ಸಲುವಾಗಿ ತನ್ನೊಳಗೇ ತಾನು ಇಳಿಯುವುದು ಅನಿವಾರ್ಯವಾಯಿತು
ಮಿಥುನ್ ನ ಈ ಕನಸುಗಳ ಹುಡುಕಾಟದಲ್ಲಿ ಯಾರೆಲ್ಲಾ ಕೈಜೋಡಿಸುತ್ತಾರೆ ? ಅಲ್ಲಿ ಪೋಲಿಸರಿಗೆ, ಡಿಟೆಕ್ಟಿವ್ ಗಳಿಗೆ ಏನು ಕೆಲಸ? ಸಣ್ಣದೊಂದು ಕ್ಲೂ ಕೂಡ ಕೊಡದೆ ಮರೆಯಾಗಿ ಹೋಗಿರುವ ಕನಸುಗಳನ್ನು ಬೆನ್ನುಹತ್ತುವುದಾದರೂ ಹೇಗೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ, ಅಡಿಗಡಿಗೂ ಕುತೂಹಲ ಹುಟ್ಟಿಸುತ್ತಾ, ಅಂತರಂಗದ ಅನೂಹ್ಯ ಅನ್ವೇಷಣೆಯಲ್ಲಿ ಓದುಗರನ್ನೂ ಭಾಗೀದಾರರಾಗಿಸುವ ಈ ಕೃತಿಯೊಳಗಿದೆ.
ಹಾಗಾದರೆ ತಡವೇಕೆ ಪಯಣ ಆರಂಭಿಸಿ, ಹ್ಯಾಪಿ ಜರ್ನಿ. . .
ಡೈಲಿ ಬುಕ್ : ಕನಸು ಕಾಣೆಯಾಗಿದೆ
ನಿಮಗೆ ಇವೂ ಇಷ್ಟವಾಗಬಹುದು…

– ಮಿಥುನನ ಕಾಣೆಯಾದ ಕನಸುಗಳನ್ನು ಹುಡುಕುವ ತವಕ ಹೆಚ್ಚುತ್ತಿದೆ, ನೋಡೋಣ ಯಾವಾಗ ಆತನ ಕನಸುಗಳ ದರ್ಶನ ವಾಗುತ್ತದೆ ಎನ್ನುವುದನ್ನು.
– Sir, Is this book available in online?
Hi Mr.Patil and Mr.Siddalingamurthy, thanks for the interest shown on the novel ‘Kanasu Kaneyagide.’. Here is the link for online order: http://www.a4dable.in/kanasu-kaneyagide-by-nataraju-v
ತುಂಬಾ ವಿಭಿನ್ನವಾದ ಕಾದಂಬರಿ, ಸಮಕಾಲೀನವಾದ ಬರಹ…