ಎಸ್. ಜಿ. ಸಿದ್ಧರಾಮಯ್ಯ
ನಮ್ಮ ಸಿದ್ಧರಾಮಯ್ಯ ತುಂಬಾ ಕಕ್ಕಲಾತಿಯ ಮನುಷ್ಯ. ಕರುಳ ಬಳ್ಳಿಯ ತಳಸಂಬಂಧಗಳ ಬಗ್ಗೆ ಕಾಳಜಿ ಉಳ್ಳವರೆಲ್ಲರೂ ಈ ಸಿದ್ಧರಾಮಯ್ಯನ ತರವೇ ಇರುತ್ತಾರೆ. ದೇಸಿ ಎಂದು ಏನು ಕರೆಯುತೇವೆಯೋ ಅದು ಅನೇಕ ವೈರುದ್ಧ್ಯಗಳ ನಡುವೆಯು ಒಂದು ಸಾಮರಸ್ಯದ ಚಿತ್ರಣವನ್ನು ಕಟ್ಟಿಕೊಡುವಂಥದ್ದು. ಈ ಸಾಮರಸ್ಯದ ಕನವರಿಕೆಯಲ್ಲಿ ನಿಂತ ಮನಸ್ಸು ಸುತ್ತಲಿನ ವಿಹ್ವಲತೆಗೆ ಕಂಗಾಲಾಗುತ್ತಿರುತ್ತದೆ. ಪ್ರಾಧಿಕಾರದ ಅದ್ಯಕ್ಷಗಿರಿ ಅಕಸ್ಮಾತ್ ಸಿಕ್ಕ ಈ ಹಳ್ಳಿಗ ಅಲ್ಲಿನ ವ್ಯವಸ್ಥೆ, ಅದರೊಳಗಿನ ಒಳಸುಳಿಗಳು, ಶಕ್ತಿರಾಜಕಾರಣದ ಅಧಿಕಾರ ಕೇಂದ್ರಗಳನ್ನು ಗಮನಿಸುತ್ತಾ ತಾನು ಶುದ್ಧವಾಗಿ, ಶುಭ್ರವಾಗಿ ಉಳಿಯಬೇಕೆಂಬ ಸಂಕಲ್ಪದಲ್ಲಿ ಕೈಗೊಂಡ ಕಾರ್ಯಗಳು, ಹಾಕಿಕೊಂಡ ಕಾರ್ಯಯೋಜನೆಗಳ ಬಗ್ಗೆ ಒಂದು ಪ್ರಾಮಾಣಿಕತೆಯನ್ನು ಪಾರದರ್ಶಕ ನೆಲೆಯನ್ನು ಸಾಬೀತುಗೊಳಿಸುವ ತುರ್ತನ್ನು ಮನಗಾಣಿಸುತ್ತಾನೆ. ಅಂತಹ ಒಂದು ತುರ್ತಿನ ದಾಖಲೆ ಈ ಬರಹ.

ಈ ಗ್ರಾಮ್ಯ ಕರುಳ ಬಳ್ಳಿ ಹಬ್ಬಿ ಬೆಳೆಯುವಂತಾಗಬೇಕು. ಸಾರ್ವತ್ರಿಕವಾದ ಸೌಹಾರ್ದ ಅನುಬವವೊಂದು ಸಮಾಜಕ್ಕೆ ದಕ್ಕುವಂತಾಗಬೇಕು. ಇಷ್ಟಕ್ಕೂ ನಾವೆಲ್ಲಾ ಬಯಸುವುದು ಇದನ್ನೇ ತಾನೇ?
ಪ್ರೊ. ಚಂದ್ರಶೇಖರ ತಾಳ್ಯ
(ಬೆನ್ನುಡಿ)
ಸುಮುಖ ಪ್ರಕಾಶನ
ಬೆಲೆ : ರೂ. 180/-



0 Comments