ಎನ್. ಎಸ್. ಶಂಕರ್
ಬೆಹಮಾಯಿಯಲ್ಲಿ … .
… ಫೂಲನ್ ಒದ್ದು ಗುದ್ದಿ ಅರಚಿ ಪರಚಾಡಿದಳು. ಆದರವನು ತಿರುಗಿ ಎಷ್ಟು ಜೋರಾಗಿ ಬಾರಿಸಿದನೆಂದರೆ ಅವಳಿಗೆ ತನ್ನ ತಲೆಬುರುಡೆಹೋಳಾದಂತೆನಿಸಿತು. ಮತ್ತೆ ಅವಳ ಮೇಲೆರಗಿದ. ಅವಳು ಆಳುತ್ತ ನರಳುವುದರ ಹೊರತು ಇನ್ನೇನೂ ಮಾಡುವಂತಿರಲಿಲ್ಲ. ಎಲ್ಲ ಮುಗಿದ ಮೇಲೆ ಅವನು ಒಂದೂ ಮಾತಿಲ್ಲದೆ ಎದ್ದು ಹೋದ. ಕೋಣೆಯ ತುಂಬಾ ಈಗ ಭೀತಿ, ಬೆವರು ಮತ್ತು ಅವಳ ನರಳಿಕೆಯ ದುರ್ಗಂಧ ಮಾತ್ರ. ಕ್ಷಣಗಳಲ್ಲಿ ಅಲ್ಲಿ ಇನ್ನೊಬ್ಬ ಗಂಡಸು ಹಾಜರಾಗಿದ್ದ. ಅವನೂ ಕಚ್ಚುತ್ತ, ಉಗಿಯುತ್ತ ಅವಳನ್ನು ಪ್ರವೇಶಿಸಿದ. ಅವನಾದ ಮೇಲೆ ಮತ್ತೂ ಮೂವರು ಬಂದರು. ಈ ವೇಳೆಗೆ ಅವಳು ಕೊಸರಾಡುವುದನ್ನೂ ನಿಲ್ಲಿಸಿಬಿಟ್ಟಳು. ಸಂಪೂರ್ಣ ಮರಗಟ್ಟಿ ಅವರು ಮಾಡಿದಂತೆ ಮಾಡಲು ಬಿಟ್ಟಳು …

ನಂತರ ಅದೇ ಬೆಹಮಾಯಿಯಲ್ಲಿ
ಫೊಲನ್ ಎರಡು ಹೆಜ್ಜೆ ಹಿಂದೆ ಬಂದು, ಅವನ ಕಾಲುಗಳಿಗೆ ಗುರಿ ಹಿಡಿದು ಎರಡು ಬಾರಿ ಗುಂಡು ಹಾರಿಸಿದಳು. ಅವನ ಬಾಯಿ ಗಕ್ಕನೆ ತೆರೆದು, ಹಾರಿ ಹೋಗುವವನಂತೆ ತುಯ್ದು ಧೊಪ್ಪನೆ ನೆಲಕ್ಕೆ ಕುಸಿದು ಚೀತ್ಕರಿಸತೊಡಗಿದ. ಹಳ್ಳಿಗರ ತಲೆಯಲ್ಲಿ ಭೀತಿಯ ಹಾವುಗಳು ಹರಿದಾಡಿ ಮಾತು ನಿಂತು ನೋಡಿದರು. ಅವನ ರೋದನ ಕಣಿವೆಗಳಿಗೆ ಬಡಿದು ಬಂದು, ಹಳ್ಳಿಯ ನಾಯಿಗಳು ದಿಕ್ಕಾಪಾಲಾಗಿ ಬೊಗಳುತ್ತ ಓಡಿದವು. ಅವನ ಮಂಡಿ ಚಿಪ್ಪುಗಳು ಛಿದ್ರವಾಗಿದ್ದವು. ಸುರೇಂದ್ರಸಿಂಗ್ ನೆಲ ಬಡಿಯುತ್ತ, ತೇಕುತ್ತ ತನ್ನನ್ನು ಕೊಳ್ಳುವ ನೋವಿನಿಂದ ಬಿಡುಗಡೆಗಾಗಿ ಒದ್ದಾಡುತ್ತಾ ರಕ್ತ ಸುರಿಸುತ್ತ ಕಿರುಚಾಡುತ್ತಲೇ ಇದ್ದ. ಅವನ ದೇಹದ ರಕ್ತ ಹರಿದು ನೆಲದಲ್ಲಿ ಇಂಗಿಹೋಯಿತು. ತಡೆಯಲಾರದೆ ವಾಂತಿ ಮಾಡಿಕೊಂಡ …
(ಬೆನ್ನುಡಿ )
ಅಕ್ಷರ ಮಂಟಪ
ಬೆಲೆ : ರೂ . ೧೮೦/-



0 Comments