ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಎಂಡೋಸಲ್ಫಾನ್ ದುರಂತ ಕಟ್ಟಿಕೊಡುವ ’ಎಣ್ಮಕಜೆ’


ಅಂಬಿಕಾಸುತನ್ ಮಾಂಗಾಡ್

‘ಎಣ್ಮಕಜೆ’ ಒಂದು ಗ್ರಾಮದ ಹೆಸರು. ಜೊತೆಗೆ ಎಂಟು ಸಂಸ್ಕೃತಿಗಳ ನಾಡು ಎಂದರ್ಥ. ಕಾಸರಗೋಡು ಜಿಲ್ಲೆಗೆ ಸೇರಿದ ಈ ಗ್ರಾಮದ ಇತ್ತೀಚಿನ (ಕ್ರಿ. ಶ. 2000 ನಂತರದ) ಚರಿತ್ರೆ ಮತ್ತು ಸಂಸ್ಕೃತಿ ಈ ಕಾದಂಬರಿಯ ವಿಷಯ.
ಪರಿಸರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಿತ ಕೀಟನಾಶಕಗಳು ಬೀರುವ ದುಷ್ಪರಿಣಾಮಗಳನ್ನು ಈ ಕಾದಂಬರಿ ದಾರುಣವಾಗಿ ಚಿತ್ರಿಸುತ್ತದೆ. ಈಗಾಗಲೇ ಕುಖ್ಯಾತವಾಗಿರುವ ‘ಎಂಡೋಸಲ್ಫಾನ್’ ಕೀಟನಾಶಕದ ಬಳಕೆ ಈ ಪ್ರದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದು – ಮಾದುತ್ತಿರುವುದು, ಅದಕ್ಕೆ ಆಳುವ ವರ್ಗದ ಬೆಂಬಲ, ಇದನ್ನು ವಿರೋಧಿಸುತ್ತಿರುವ ಪರಿಸರವಾದಿಗಳ ಕ್ಷೀಣದನಿ, ಸಾಮಾನ್ಯಜನರ ಅಸಹಾಯಕತೆ- ಎಲ್ಲವನ್ನೂ ಲೇಖಕ ಮಾಂಗಾಡ್ ಅವರು ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ.

ನಿರಂಜನರ ‘ಚಿರಸ್ಮರಣೆ’ಯ ಕೈಯ್ಯೂರಿನ ರೈತ ಹೋರಾಟದ ಹಾಗೆ, ‘ಎಣ್ಮಕಜೆ’ ಯ ಪರಿಸರ ಹೋರಾಟ ದುರಂತ ಬದುಕಿನ ದಾರುಣ ಧ್ವನಿಗಳನ್ನು ಹಿಡಿದಿಟ್ಟುಕೊಳ್ಳುತ್ತಲೇ ನಮ್ಮೊಳಗಿನ ಮುನುಷ್ಯನನ್ನು ಹುಡುಕುವಂತೆ ಈ ಕೃತಿ ಪ್ರೇರೇಪಿಸುತ್ತದೆ.
(ಬೆನ್ನುಡಿ)
ಅಂಕಿತ ಪುಸ್ತಕ
ಬೆಲೆ : ರೂ. 150/-
 
 

‍ಲೇಖಕರು avadhi

28 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading