ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಆರ್ ಜಿ ಹಳ್ಳಿ ನಾಗರಾಜ್ ಅವರ ’ಶಹನಾಯ್’

ಆರ್ ಜಿ ಹಳ್ಳಿ ನಾಗರಾಜ

ಲಹರಿ ಬದುಕಿಗೆ ಕಾವ್ಯ ಕನ್ನಡಿ
ಈ ಸಿಡಿಲು-ಮಿಂಚಿನ, ಮೇಲುನೋಟಕ್ಕೆ ಗಡುಸು ಗಂಡಸಾಗಿ ತೋರುವ ರಾಮಗೊಂಡನಹಳ್ಳಿ ನಾಗರಾಜರ ಕಾವ್ಯವ್ಯಕ್ತಿತ್ವ ಅದಕ್ಕೆ ವ್ಯತಿರಿಕ್ತವಾಗಿ ಅನುಭವದ ಮಾರ್ದವವಾದ ಮಗ್ಗುಲುಗಳನ್ನು, ಭಾವಗೀತಾತ್ಮಕವಾದ ಬಾಗುಗಳನ್ನು ಅರಸುತ್ತಿರುವುದು ನನಗೆ ಸೋಜಿಗದ ಸಂಗತಿಯಾಗಿದೆ. ಸಿಡುಕು ಮತ್ತು ರೇಗಾಟಗಳ ಬಂಡಾಯ ವ್ಯಕ್ತಿತ್ವದ ಕಾಯುವಿಕೆಯ ಕಾಯಿಮಾಗಿ ಸುಡುಬೇಸಗೆಯ ಉರಿಬಿಸಿಲು ಮಾಗಿ ಮುಂಜಾನೆಯ ಹಿತ, ಮಿತ ಬಿಸಿಲಾಗಿ ಮಾರ್ಪಾಡು ಹೊಂದತೊಡಗಿರುವುದು ಸಂತಸದ ವಿಷಯ. ಜೊತೆಗೆ ಗಂಡುಗೂಳಿ ವ್ಯಕ್ತಿತ್ವ ಹೆಂಗರುಳಿನ ದನಿಯಾಗಲು ಪ್ರಯತ್ನಿಸುತ್ತಿರುವ ಪ್ರಕ್ರಿಯೆ ಕಳೆದೆರಡು ದಶಕಗಳಲ್ಲಿ ಕನ್ನಡಕಾವ್ಯದ ನುಡಿಗಟ್ಟಿನಲ್ಲಿ, ಹಿಡಿಗಟ್ಟಿನಲ್ಲಿ ಸ್ತ್ರೀಕಾವ್ಯ ತಂದಿರುವ ಸ್ವಾಗತಾರ್ಹ ಬದಲಾವಣೆ.
ಎಲ್ಲ ಗಂಡಸು ಕವಿಗಳೂ ಈ ಥರ ಸ್ತ್ರೀಕಾವ್ಯದಿಂದ ಪ್ರಭಾವಿತರಾಗಿಲ್ಲ. ಅವರು ಕಾರಿಕೊಳ್ಳುತ್ತಿರುವ ಕಾಮಕಾವ್ಯ ಚೂರೂ ಅರಾಸಿಲ್ಲದ ಗಂಡು ಲೈಂಗಿಕತೆಯ ಏಕಮುಖೀ ಸ್ಖಲನ. ನಾಗರಾಜ ಈ ದಾರಿಯನ್ನು ತೊರೆಯುತ್ತಿರುವುದು ಅವರ ಕಾವ್ಯದ ಬಗ್ಗೆ ಮೆಚ್ಚುಗೆಯನ್ನು ತರುತ್ತದೆ.

ಕನ್ನಡ ಸಾಹಿತ್ಯ ವಲಯದ ಮೇರುವ್ಯಕ್ತಿಗಳನ್ನು ಕಾಣಿಸುವುದರಲ್ಲಿ ಮತ್ತು ಸಾಹಿತ್ಯ ಕಾಳಜಿಗಳ ಚೌಕಟ್ಟಿನಲ್ಲಿ ಅವನ್ನು ರೇಖಿಸುವುದರಲ್ಲಿ ಕಿ. ರಂ. ಕುರಿತ ‘ಭೂತುಕನ್ನಡಿ ಹಾಗೂ ಮೇಷ್ಟ್ರು’, ಸತ್ಯಕಾಮರ ಕುರಿತ ‘ಸುಮ್ಮನೆ ಜಂಗಮನ ಬೆನ್ನುಹತ್ತಿ’, ‘ತಿಮ್ಮಕ್ಕ…. ‘ ಮತ್ತು ಕುವೆಂಪು ಮಲೆನಾಡಿನ ‘ಕುಪ್ಪಳಿಯ ಮಳೆಯ ಚಿತ್ರಗಳು’ ಕುರಿತ ಅವರ ಕವಿತೆಗಳು ಮನಸೆಳೆಯುತ್ತವೆ.
ಎಚ್ ಎಸ್ ಶಿವಪ್ರಕಾಶ್
(ಬೆನ್ನುಡಿ)
 
ಬೆಲೆ : ರೂ. ೫೦/-
ಚಾರುಮತಿ ಪ್ರಕಾಶನ
 

‍ಲೇಖಕರು avadhi

23 April, 2014

1 Comment

  1. k v pundalik

    r g kalli shahanoy kelisikolli
    maatu hege joro
    hjage ivara shahanoy joru
    kettideyaaa

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading