ಡೈಲಿ ಬುಕ್ : ಅತೀಂದ್ರಿಯ ಅನುಭವಗಳ ’ಮಂತ್ರಶಕ್ತಿ’

ಇಂದಿರಾತನಯ

“ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು ”
“ಸದಾ ಮರವೇರಿ ಕುಳಿತಿರುತ್ತಿದ್ದ ಹುಡುಗ ಕೆಳಗಿಳಿದು
ಬಂದು ಬಾಳುವೆ ಮಾಡತೊಡಗಿದ …. ”
“ಕಣ್ಣಿನ ದೃಷ್ಟಿಯಿಂದಲೇ ಮೊಹಿತಳಾದ ಹೆಂಗಸೊಬ್ಬಳು
ಕಂಡು ಕೇಳರಿಯದವನೊಬ್ಬನ ದುರಾಸೆಗೆ ಬಲಿಯಾದಳು…”

-ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ. ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ,ಅತೀಂದ್ರಿಯ ಲೋಕವೊಂದನ್ನು ಧ್ವನಿಸುತ್ತವೆ. ಮನುಷ್ಯನ ಎಲ್ಲೆಯಿರದ ಮನಃ ಶಕ್ತಿಯನ್ನು ಮನವರಿಕೆ ಮಾಡಿಕೊಡುವ ಈ ಕೃತಿ ಒಂದು ಅರ್ಥದಲ್ಲಿ ಕಾದಂಬರಿ, ನಿಜ. ಆದರೆ ವ್ಯಾಪಕ ಅರ್ಥದಲ್ಲಿ ಸಂಕಲ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥ. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು. ನೇರವಾಗಿ ಕತೆ ಹೇಳುವ ಜಾಣ್ಮೆ, ಉದ್ದೇಶಿಸಿರುವುದಕ್ಕಿನ್ತ ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ, ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ- ಇವುಗಳಿಂದಾಗಿ ಈ ಕೃತಿ ಮತ್ತೆಮತ್ತೆ ಓದಿಸಿಕೊಳ್ಳುವ ಅನನ್ಯ ಕೃತಿಯೆನಿಸಿದೆ.
ಕಳೆದ ಆರು ದಶಕಗಳಿಂದ ಇಂದಿರಾತನಯರ ಕೃತಿಗಳ ಜನಪ್ರಿಯತೆ ಒಂದಿಷ್ಟೂ ಕುಗ್ಗಿಲ್ಲ ಎಂದರೆ ಅದು ಅತಿಶಯೋಕ್ತಿ ಖಂಡಿತ ಅಲ್ಲ. ಇಲ್ಲಿ ನಿರೂಪಿತವಾಗಿರುವ ಘಟನೆಗಳು ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುವಂತಿದ್ದರೂ, ಪುಸ್ತಕ ಓದಿ ಮುಗಿಸಿದಾಗ ಮನಶ್ಯಕ್ತಿಯ ಸಾಧ್ಯತೆಗಳನ್ನು ಮನದಟ್ಟು ಮಾಡಿಕೊಡುವ ಅನುಭವ ಘಟಕಗಳಾಗಿಯೂ ಅವು ಕೆಲಸ ಮಾಡುತ್ತವೆ. ಇಂದಿರಾತನಯ ಕೇವಲ ಕಾದಂಬರಿಕಾರರಲ್ಲ; ಅವರ ಅತೀಂದ್ರಿಯ ಅನುಭವಗಳ ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರ ಒಂದು ವಾಹಕವಷ್ಟೆ. ಅತೀಂದ್ರಿಯ ಲೋಕವನ್ನು ಕಣ್ಣೆದುರು ತರುವ ಇಂದಿರಾತನಯರ ಕೃತಿಗಳು ಪರಿಪೂರ್ಣ ಕೃತಿಗಳಾಗಿವೆ.
ಎಸ್. ದಿವಾಕರ್ (ಬೆನ್ನುಡಿ )
ಅಂಕಿತ ಪುಸ್ತಕ
ಬೆಲೆ : ರೂ ೧೫೦/-
 

‍ಲೇಖಕರು avadhi

March 30, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: