ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿಬುಕ್ : ಚೀಮನಹಳ್ಳಿ ರಮೇಶಬಾಬು ಅವರ ’ಬಲಿಹಾರ’


ನಮ್ಮ ವಿಮರ್ಶೆಯು ಯಾವುದಾದರೂ ಒಂದು ಕತೆ, ಕಾದಂಬರಿಯನ್ನಯ ಕೃತಿನಿಷ್ಠವಾಗಿ ಓದುವಾಗ ಅದು ಹೇಗಿದೆ ಎಂಬುದನ್ನು ಗುರ್ತಿಸುವುದಕ್ಕಿಂತ ಅದು ಹೇಗಿರಬೇಕಿತ್ತು ಎಂಬ ಬಗ್ಗೆಯೆ ಹೆಚ್ಚುಚರ್ಚಿಸಿದೆ. ನವ್ಯ ವಿಮರ್ಶೆಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹಾಗೆ ಯಾವುದಾದರು ಒಂದು ಕೃತಿಯನ್ನು ಲೇಖಕನನ್ನೆ ಕೇಂದ್ರವಾಗಿಸಿ ಆತ ಹಾಗೆ ಬರೆಯಬೇಕಿತ್ತು, ಹೀಗೆ ಬರೆಯಬೇಕಿತ್ತು ಎಂದು ಹೇಳುವುದು ಕಣಿ ಹೇಳುವುದೇ ಆಗುತ್ತದೆ. ಈ ಬಿಧಾನ ನನಗೆ ಸಮ್ಮತವಲ್ಲ. ಬರಹ ಸಮಾಜಘಾತಕ ಆಗಿದ್ದಾಗ ಬರಹವನ್ನೂ ಬರಹಗಾರನನ್ನೂ ನಾವು ಒಟ್ಟಿಗೆ ತಿರಸ್ಕರಿಸುತ್ತೇವೆ ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೃತಿ ಹೀಗೆ ಬರೆಯಲ್ಪಡಬೇಕಿತ್ತು ಎಂದು ಹೇಳುವುದು ಉಚಿತವಲ್ಲ. ರಮೇಶಬಾಬು ಅವರ ಬಲಿಹಾರ ನಮ್ಮ ಸಮಾಜವನ್ನು ವಾಸ್ತವವಾದಿ ಆಗಿ ಕಾಣಿಸುತ್ತದೆ. ಸಮಾಜದ ಊನವುಳ್ಳ ಕುಟುಂಬ ವ್ಯವಸ್ಥೆಯ ತುಣುಕೊಂದನ್ನು ಕಥಿಸುತ್ತದೆ. ಅಂತಹ ಸಂದರ್ಭದಲ್ಲಿ ಹೆಣ್ಣಿನ ಪಾತ್ರ ಹೇಗಿರುತ್ತದೆ? ಹೇಗಿರಬೇಕು? ಎಂಬ ವೈಚಾರಿಕತೆಯನ್ನು ಕಾದಂಬರಿ ಕಥನ ರೂಪಿಯಾಗಿ ಮಂಡಿಸುತ್ತದೆ. ಈ ದೃಷ್ಟಿಯಿಂದ ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಪಠ್ಯ ಆಗಬಲ್ಲುದು.
ಡಾ. ರಾಮಲಿಂಗಪ್ಪ ಟಿ. ಬೇಗೂರು
(ಬೆನ್ನುಡಿ)
ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
ಬೆಲೆ: ರೂ. 125/-
 
 

‍ಲೇಖಕರು avadhi

27 February, 2014

1 Comment

  1. ಹನುಮಂತ ಹಾಲಿಗೇರಿ

    ನಾನು ಇತ್ತೀಚೆಗೆ ಓದಿದ್ದರಲ್ಲಿ ಅತ್ಯಂತ ಖುಷಿ ಕೊಟ್ಟ ಕಾಡಿದ ಕಾದಂಬರಿ. ನಮ್ಮ ತಲೆಮಾರಿನಲ್ಲೋಬ್ಬರು ಪ್ರಾದೇಶಿಕ ಕಾದಂಬರಿಯನ್ನು ಬರೆಯಬಲ್ಲ ಗೆಳೆಯ ಇದ್ದಾನೆಂಬೂದೆ ದೊಡ್ಡ ಖುಷಿ. ಚಿಂತಾಮನಿ ಸುತ್ತಲಿನ ಗ್ರಾಮಗಳ ಬದುಕನ್ನು ಅರಿತುಕೊಳ್ಳಬೇಕಾದರೆ ಈ ಕಾದಂಬರಿಯನ್ನೊಮ್ಮೆ ಓದಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading