ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿಬುಕ್ : ಇಂದಿರಾತನಯರ ’ಶಕ್ತಿಪೂಜೆ’

ಇಂದಿರಾತನಯ

ಇಂದಿರಾತನಯ
ಯಾರಿವರು ?
ಇಪ್ಪತ್ತೊಂದನೆಯ ಶತಮಾನದ ಸಾಹಿತ್ಯಲೋಕದ ಹೊಸಚಿಗುರು ಸಹೃದಯಿಗಳು ಇಂಥದೊಂದು ಪ್ರಶ್ನೆ ಕೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಹೀಗೊಬ್ಬರಿದ್ದರು …..

ಇಪ್ಪತ್ತನೆಯ ಶತಮಾನದ ದ್ವೀತಿಯಾರ್ಧದಲ್ಲಿ ಆಗಿನ ಹೊಸಪೀಳಿಗೆಯ ಕಲಾರಸಿಕರು. ಲೇಖಕರು ಮತ್ತು ಪತ್ರಕರ್ತರಿಗೆ ದಾರ್ಶನಿಕ, ಗುರು, ಮಾರ್ಗದರ್ಶಿಯಾಗಿದ್ದವರು. ಇಂಗ್ಲಿಷ್ ನ ತ್ರಿವಳಿ ಇದೆಯಲ್ಲ , ಅದರ ಸಾಕ್ಷಾತ್ ಕನ್ನಡ ರೂಪ. ಕಾಲದ ಸಹಜ ನಡವಳಿಕೆ – ಹೊಸಚಿಗುರು ಹೊಮ್ಮಿದಾಗ ಹಳೆಬೇರು ಭೂಗತ. ಹೊಸ ನೀರು ಬಂದಾಗ ಹಳೆಯದು ಅಂತರ್ಜಲ. ನವನವೋನ್ಮೇಷ ಶಾಲಿನಿಗಳಿಗೆ ಜಾಗಬಿಟ್ಟು ಕೊಡುವ ಪರಂಪರೆಯ ಪರಿ ಇದು. ಡಿವಿಜಿ ಬೆಳಕು ಚೆಲ್ಲಿದ್ದು.
ಇವತ್ತಿಗೆ ಕನ್ನಡ ಕಥಾಸಾಹಿತ್ಯದ ತಾಯಿಬೇರುಗಳ ಸೃಜನಶೀಲ ಪೋಷಕ ದ್ರವ್ಯ ಮೂಲಗಳ ವಾರಿಧಿಯಲ್ಲೊಂದು ರಸಬಿನ್ದುವಾಗಿರುವ ಇಂದಿರಾತನಯ ಹುಟ್ಟಿದ್ದು ೧೯೩೧ ರ ಮಾರ್ಚ್ ೧೨ ರಂದು, ಮಾಗಡಿ ತಾಲ್ಲೂಕಿನ ವಾಗತ ಅಗ್ರಹಾರದಲ್ಲಿ. ಕೂಗಳತೆಯಲ್ಲೇ ಕನ್ನಡ ಸಣ್ಣಕಥೆಯ ತೌರುಮನೆ ಮಾಸ್ತಿ. ತಂದೆ-ತಾಯಿ ಹಿರಿಯರು ಇತ್ತ ಒಲವಿನ ಹೆಸರು : ಶ್ಯಾಮ .
ಶ್ಯಾಮಸುಂದರನ ಕಂಡು
ಮಾರುಹೊದಳು ರಾಧೆ
ಧಾರೆಧಾರೆಯಾಗಿ ಹರಿಯಿತು ಆನಂದದ ಪನ್ನೀರು.
ಜಿ ಎನ್. ರಂಗನಾಥರಾವ್ (ನಲ್ನುಡಿಯಿಂದ ಆಯ್ದ ಭಾಗ )
ಅಂಕಿತ ಪುಸ್ತಕ
ಬೆಲೆ : ರೂ ೧೫೦/-
 

‍ಲೇಖಕರು avadhi

1 April, 2014

1 Comment

  1. Anonymous

    ಇಂದಿರಾತನಯರ ಕಾದಂಬರಿಗಳು ತಾಂತ್ರಿಕ್ ಶಕ್ತಿ ಸಾಧನೆಯ ಮತ್ತು ಅದನ್ನು ದುರುಪಯೋಗಗೊಳಿಸುವ ತಾಂತ್ರಿಕರ ವೃತ್ತಿ ದ್ವೇಷದ, ತಾಂತ್ರಿಕರೆಂದರೆ ಹೆಣ್ಣನ್ನು ಮರುಳುಗೊಳಿಸುವ ವಿದ್ಯೆಯಲ್ಲಿ ಮತ್ತು ವ್ಷೇಕರಣ ವಿದ್ಯೆಯಲ್ಲಿ ಪಳಗಿದವರೆಂದು ಆ ಕುರಿತು ಬರೆದ ರೋಚಕ ಕತಾನಕಗಳನ್ನು ಬರೆದು ಓದುಗರಿಗೆ ರೋಚಕ ಮನರಂಜನೆ ಒದಗಿಸಿದವು.. ವಶೀಕರಣ, ಶತ್ರುನಾಶ ಮುಂತಾದ ಶಕ್ತಿಯನ್ನು ಪಡೆದ ತಾಂತ್ರಿಕರ ಕತೆಗಳನ್ನು ತುಂಬಾ ಬರೆದವರು. ಆದರೆ ವಾಸ್ತವವವಾಗಿ ಹಗೊಂದು ಶಕ್ತಿಯನ್ನು ಪಡೆಯಲು ಸಾಧ್ಯವೇ? ಇಂತಹ ಕಾದಂಬರಿಗಳು ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲವೇ? ಉದಯಕುಮಾರ ಹಬ್ಬು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading