ವಿನಯ್ ಭಾರದ್ವಾಜ್
‘ಡೈರೆಕ್ಟರ್ಸ್ ಸ್ಪೆಶಲ್’, ಸ್ಪೆಶಲ್ ಡೈರೆಕ್ಟರ್ ರ ಸ್ಪೆಷಾಲಿಟಿ ಪ್ರಾಡಕ್ಟ್! ಹಾಗಾಗಿ ಇದು ಅವರ ವರಿಜಿನಲ್ ಚಾಯ್ಸ್. ಪ್ರೇಕ್ಷಕರು ನಿರಾಳವಾಗಿ ಹೇಳಬಹುದು, ‘ಚೀಯರ್ಸ್’. ಇಲ್ಲಿ ಇರುವುದು ಕೇವಲ ಬೆರಳೆಣಿಕೆಯಷ್ಟು ಪ್ಲೇಯರ್ಸ್, ಹಾಗಾಗಿ ಹೊಡೆದ ಪ್ರತೀ ಬಾಲು ಸಿಕ್ಸರ್, ಪ್ರತೀ ಎಸೆತವೂ ಬೌನ್ಸರ್. ಹಾಗಾಗಿ ಎಲ್ಲವೂ ತಲೆ ಮೇಲೆ ಹೋಗ ತೊಡಗುತ್ತದೆ. ಆದರೂ ಬೌನ್ಸರ್ ಮಿಸ್ಸಾದರೇನು, ಸಿಕ್ಸರ್ ನ ಎಂಜಾಯ್ ಮಾಡಬಹುದು. ಪೂಜಾ ಗಾಂಧಿಯನ್ನು ಬೇಕಿದ್ದರೆ ಐಟಂ ಗರ್ಲ್ ಅನ್ನುವ ಬದಲು ಚೀರ್ ಗರ್ಲ್ ಅನ್ನಬಹುದೇನೋ! ಹೀಗೆಲ್ಲಾ ಸಿಕ್ಸರ್ರು-ಬೌನ್ಸರ್ರು ಎಂದೆಲ್ಲಾ ಹೇಳತೊಡಗಿದರೆ , ಐಪಿಎಲ್ ಮುಗಿದ ಖುಷಿಯಲ್ಲಿ ಬರೆದಹಾಗಿರುತ್ತದೆ. ಆದರೆ ಒಂದು ಸಂತೋಷದ ವಿಷಯ ಅಂದರೆ ಇಲ್ಲಿ ಯಾವುದೇ ಸ್ಪಾಟ್ ಫಿಕ್ಸಿಂಗ್ ಗುಗಳಿಲ್ಲ, ಇಲ್ಲಿರುವುದು ಸೀಟ್ ಫಿಕ್ಸಿಂಗ್ ಒಂದೇ! ಥಿಯೇಟರ್ ನ ಸೀಟಿನೊಳಗೆ ಬಂಧಿಯಾಗುವುದು. ದಟ್ಸ್ ಇಟ್.
ಕಥೆಯಲ್ಲಿ ಹೀರೋ ಯಾರು ಎಂದು ಹುಡುಕುವುದು ಅಸಮಂಜಸ. ಕಥೆಯೇ ಹೀರೋ ಎಂದುಬಿಡುವುದು ಸುಲಭ. ಆದರೆ, ‘ಏನು ಕಥೆ…?’ ಎಂದರೆ ತಬ್ಬಿಬ್ಬಾಗುತ್ತದೆ. ಏಕೆಂದರೆ ಕಥೆಗೆ ಚೌಕಟ್ಟಿಲ್ಲ. ಪ್ರತಿ ದೃಶ್ಯದ ನಂತರವೂ ‘ವಾಟ್ಸ್ ನೆಕ್ಸ್ಟ್’ ಎನ್ನುವುದು ಸಹಜವಾಗಿ ಒಡಮೂಡುವ ಪ್ರೆಶ್ನೆ. ಚಿತ್ರ ಮುಗಿದ ಮೇಲೂ ಅಲ್ಲಿ ‘ಬಿಟ್ಟ ಸ್ಥಳ ತುಂಬಿರಿ’ ಅನ್ನುವ ಹಾಗೆ ಒಂದು ವಾಕ್ಯುಮ್ ಕ್ರಿಯೇಟ್ ಆಗುತ್ತದೆ ಹಾಗು ಅಲ್ಲಿನ ಪ್ರೆಶ್ನೆಗಳಿಗೆ ನಾವೇ ಉತ್ತರಿಸಿಕೊಳ್ಳಬೇಕು. ಹಾಗಾಗಿ ಚಿತ್ರದ ಕೆಲವು ದೃಶ್ಯಗಳು ಪ್ರಶ್ನಾತೀತವಾಗೇ ಉಳಿದುಬಿಡುತ್ತದೆ. ಅಲ್ಲಿ ತರ್ಕಕ್ಕೆ ಅಥವಾ ತತ್ವಕ್ಕೆ ಮೂರು ಕಾಸಿನ ಸ್ಥಳವಿಲ್ಲ. ಏಕೆಂದರೆ ಇದು ನಮ್ಮನಿಮ್ಮ ನಡುವಿನ ಬದುಕಿನ ಪ್ರತಿಬಿಂಬದ ಹಾಗೆ ಕಾಣುತ್ತದೆ. ಇದು ಸಂಬಂಧಗಳ ಸುತ್ತ ಹೆಣೆದ ಕಥೆ…

ಕಥೆಯಲ್ಲಿ ಅನ್ಯೂಶಯಲ್ ಅನ್ನಿಸುವ ಗುಣ ಹೊಂದಿದ್ದು, ಕಥೆ ತೆರೆದುಕೊಳ್ಳುತ್ತಾ ಹೋದಂತೆ ಅನೂಹ್ಯತೆ ಆವರಿಸುತ್ತಾ ಹೋಗುತ್ತದೆ. ಆದರೆ ಕಥೆ ಸಾಗುತ್ತಾ ಸಾಗುತ್ತಾ ನಮಗೆ ಅರಿವಾಗದಿರುವುದು ಅದರ ಹರಿವು! ಅದಕ್ಕೆ ಮೂಲ ಕಾರಣ ಕಥೆಯ ಪಾತ್ರಗಳು. ಬಹುಶಃ ಸಂಭಾಷಣೆಯನ್ನು ಅತ್ಯಂತ ಸಶಕ್ತವಾಗಿ ಹಾಗು ಸೂಕ್ತವಾಗಿ ಬಳಸುವ ನಿರ್ದೇಶಕರಲ್ಲಿ, ಗುರುಪ್ರಸಾದ್ ಮೊದಲಿಗರೋ ಏನೋ. ರಂಗಾಯಣ ರಘು ಅವರ ಪಾತ್ರವನ್ನು ಕೇವಲ ಅವರಷ್ಟೇ ನಿಭಾಯಿಸಬಲ್ಲರು. ಕಥೆಗೆ ಒಂದು ದಿಶೆ ಬರುವುದು ರಂಗಾಯಣ ರಘು ರ ಅಭಿನಯದಿಂದ. ಅವರ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್ ಎಲ್ಲವೂ ಸ್ಪೆಕ್ಲೆಸ್. ಈ ನಿಟ್ಟಿನಲ್ಲಿ ಚಿತ್ರದ ಅಘೋಷಿತ ಹೀರೋ ರಂಗಾಯಣ ರಘು ಅನ್ನಬಹುದೋ ಏನೋ. ಆದರೆ ಅಸಲಿಗೆ ಪಾತ್ರ ಪೋಷಣೆಯಾಗುವುದು ಧನಂಜಯ ಅವರ ಪಾತ್ರದ ಸುತ್ತ. ಹಾಗಾಗಿ ಇನ್ ಅದರ್ ಟರ್ಮ್ಸ್, ಧನಂಜಯ ಚಿತ್ರದ ಹೀರೋ ಎನ್ನಲಡ್ಡಿಯಿಲ್ಲ. ಪ್ರತಿ ಪಾತ್ರಗಳಿಗೂ ತಮ್ಮದೇ ಆದಂತಹ ಆನ್ ಸ್ಕ್ರೀನ್ ಸ್ಪೇಸ್ ಇದೆ. ಹಾಗಾಗಿ ಎಲ್ಲರೂ ಪ್ರಮುಖರೆ.
ಚಿತ್ರದ ಹೈಲೈಟ್ ಎಂದರೆ ಅಂದಾಜಿಗೂ ಸಿಗದ ಸಂಭಾಷಣೆ. ಪ್ರತಿಯೊಂದು ಡೈಲಾಗುಗಳೂ, ಅದರ ಅರ್ಥಗಳಿಗೆ ಹೊಸ ಆಯಾಮವನ್ನೇ ನೀಡುತ್ತದೆ. ಅದು ನಮಗೆ ದಕ್ಕಿದಷ್ಟೇ ಸಲೀಸು. ಅಲ್ಲಲ್ಲಿ ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ಇನ್ನೂ ಚೆಂದವಿರಬಹುದಿತ್ತು ಅನ್ನಿಸುತ್ತದೆ. ಆದರೆ ಕಥೆಯ ಓವರ್ ಆಲ್ ಗುಣಮಟ್ಟದ ಮುಂದೆ ಇದು ನಗಣ್ಯ ಎನಿಸಿಬಿಡುತ್ತದೆ.
ಕೇವಲ ಐದಾರು ಪಾತ್ರಗಳನಿಟ್ಟುಕೊಂಡು ಅತ್ಯಂತ ಸಶಕ್ತವಾದ ಚಿತ್ರ ಕೊಡಬಹುದು ಎನ್ನುವುದಕ್ಕೆ ಗುರುಪ್ರಸಾದ್ ಹಾಗು ಡೈರೆಕ್ಟರ್ಸ್ ಸ್ಪೆಶಲ್ ಒಂದು ಉತ್ತಮ ಉದಾಹರಣೆ. ಅಟ್ ದಿ ಸೇಮ್ ಟೈಮ್, ಪಂಚ ವಾರ್ಷಿಕ ಯೋಜನೆಯ ಹಾಗೆ ಐದು ವರ್ಷಗಳಿಗೊಮ್ಮೆ ಬರುವ ಚಿತ್ರಕ್ಕೆ ಗುರುಪ್ರಸಾದ್ ರ ಚಿತ್ರ ಅನ್ನಬಹುದೋ ಏನೋ! ಇವೆಲ್ಲಾ ಏನೇ ಇರಲಿ, ಪಾತ್ರಗಳಲ್ಲಿನ ವೈರುಧ್ಯತೆ, ವೈವಿಧ್ಯತೆಗಳಿಂದಾಗಿ ಇದೊಂದು ವಿಶಿಷ್ಟವಾದ ಚಿತ್ರ ಅನಿಸುವಲ್ಲಿ ಎರಡು ಮಾತಿಲ್ಲ. ಹಾಗಾಗಿ ಇದು ‘ಡೈರೆಕ್ಟರ್ಸ್ ಸ್ಪೆಶಲ್’, ಕಡಿಮೆಯಾದೀತು ಹಾಕಿದರೆ ನೂರು ವಿಷಲ್…!!






ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಕನ್ನಡದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಿಸಿದ ಹತಾಶ ನಿರ್ದೇಶಕ ಗಾಂಧಿನಗರದ ಮೇಲೆ ಕಥೆ ಬರೆಯುತ್ತೇನೆ ಅಂತ ಸುದ್ದಿ ಮಾಡಿ,ನಂತರ ಕಥೆಯ ದಿಕ್ಕು ಬದಲಿಸಿ ಡೈರೆಕ್ಟರ್ ಸ್ಪೆಷಲ್ ಅನ್ನೋ ಸಾಮಾನ್ಯ ಕಥೆ ನಮ್ಮ ಮುಂದಿಟ್ಟಿದ್ದಾರೆ. ಅವರ ಹಿಂದಿನ ಎರಡೂ ಚಿತ್ರ ಎಷ್ಟು ಇಷ್ಟ ಪಟ್ಟಿದ್ನೋ ಅಷ್ಟೇ ಈ ಚಿತ್ರ ಇಷ್ಟ ಆಗಲಿಲ್ಲ.ಚಿತ್ರದ ಕೊನೆಯ ದೃಶ್ಯ ಕಣ್ಣಿಗೆ ಬಿದ್ದು ಎಲ್ಲರು ಎದ್ದು ಹೊರಡುವಾಗ, ನನಗಿನ್ನೂ ಚಿತ್ರ ಹೀಗೆ ಹೇಗೆ ಮುಗಿಯಲು ಸಾಧ್ಯ ಇನ್ನು ಮುಂದೆ ಇರಬೇಕು ಅಂತ ಮನಸ್ಸು ಉಳಿದ ಕಥೆಗಾಗಿ ಅಲ್ಲೇ ಹುಡುಕುತಿತ್ತು.
ಪಾತ್ರ ವರ್ಗಕ್ಕೆ ಬಂದರೆ ರಂಗಾಯಣ ರಘು ಚಿತ್ರದ ಅಘೋಷಿತ ನಾಯಕ.ಚಿತ್ರದ ಬೆನ್ನೆಲುಬು.ಆದರೆ, ಆ ಪಾತ್ರ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಜಗ್ಗೇಶರ ಪಾತ್ರದ extended ವರ್ಷನ್ ಅಂತ ಚಿತ್ರ ಮುಂದುವರೆದಂತೆ ಗೊತ್ತಾಗುತ್ತದೆ.ಚಿತ್ರದ ಹಲವು ಸನ್ನಿವೇಶದಲ್ಲಿ (ಡೈಲಾಗ್ ಡೆಲಿವರಿ) ಜಗ್ಗೇಶರನ್ನ ನೆನಪಿಸುತ್ತದೆ. ಅದಕ್ಕೆ ಕಾರಣ ಒಂದೇ genre ಪಾತ್ರ ಸೃಷ್ಟಿಸಿದಕ್ಕೆನೋ.
ಹೊಸ ಪ್ರತಿಭೆ ನಾಯಕ ಧನಂಜಯ್ ಕನ್ನಡ ಚಿತ್ರರಂಗಕ್ಕೆ ಒಂದು ಕೊಡುಗೆ.ಚಿತ್ರದಲ್ಲಿ ಅವರ ಪ್ರತಿಭೆ ಸಂಪೂರ್ಣವಾಗಿ ತೋರಿಸುವಷ್ಟು ಇರದೇ ಹೋಗಿದ್ದರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.ನಾಯಕರಾಗಿ ಹೊರಹೊಮ್ಮುವ ಭರವಸೆಯ ಮೂಡಿಸುತ್ತಾರೆ.
ಇನ್ನು ಚಿತ್ರಕಥೆಗೆ ಬಂದರೆ ಮೊದಲ ದೃಶ್ಯ ನಾಯಕ “ನಾನೇನೋ ಅನ್ಕೊಂಡಿದ್ದೀನಿ , ಅದನ್ನ ಆಗುವಂತೆ ಮಾಡು” ಅಂತ ದೇವರಿಗೆ ಕೈ ಮುಗಿಯುವದರಿಂದ ಶುರುವಾಗುತ್ತದೆ. ಅಲ್ಲಿಂದ ತಂದೆ , ತಾಯಿ , ತಂಗಿ, ಅಣ್ಣ ಅಂತ ತನ್ನದೇ ಹೊಸ ಪರಿವಾರ ಕಟ್ಟುತ್ತಾನೆ. ಎಲ್ಲರ ನಾಮಕರಣದ ಜೊತೆ ತನ್ನ ನಾಮಕರನವು ಮಾಡಿಕೊಳ್ಳುತ್ತಾನೆ. ಹೀಗೆ ಬೇರೆ ಬೇರೆ ಕಡೆಯಿಂದ ಎರವಲು ತಂದ ಸಂಭದಗಳು ಒಂದೆಡೆ ಸೇರಿದಾಗ ಆಗುವ ಸಾಧ್ಯತೆಯೇ ಚಿತ್ರಕಥೆ.
ಹೀಗೆ ಒಂದೇ ಮನೆಯಲ್ಲಿ….ಸಂಭಾಷಣೆಯ ಬಲದ ಮೇಲೆ ನಡೆಯುವ ಚಿತ್ರ ಸಂಭಂದ,ನಂಬಿಕೆ,ಕೊಲೆಯ ಹೊಂಚಿನ ಸುತ್ತ ಸುತ್ತತ್ತದೆ. ಒಂದು ಮನೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲಿನ ನಂಬಿಕೆ,ಗೌರವ ಯಾವ ಯಾವ ಸಂದರ್ಭದಲ್ಲಿ,ಯಾರ ಯಾರ ಮುಂದೆ ಹೇಗೆ ಬದಲಾಗುತ್ತದೆ, ಅದರಲ್ಲೂ ಸಂಭಂದವಿರದ ವ್ಯಕ್ತಿಗಳಿಗೆ ಕರೆತಂದು ಸಂಭಂದ ಕಲ್ಪಿಸಿ ಅವರ ಮಧ್ಯ ಆಗುವ ತಿಕಲಾಟದ ಮೇಲೆ ಚಿತ್ರ ನಿಂತಿದೆ.
ಚಿತ್ರದಲ್ಲಿ ಮನುಷ್ಯ ಎರಡು ತರಹದ ಬದುಕು ಬದುಕುತ್ತಾನೆ.ಒಂದು ಖಾಸಗಿ ಬದುಕು,ಅದು ಅವನು ತನ್ನ ಅವಶ್ಯಕತೆ,ಸ್ವಾರ್ಥದ ಸಲುವಾಗಿ ತನ್ನ ಮನಸ್ಸಿಗೆ ಮಾತಾಡುವದು,ಅದರಂತೆ ಗೌಪ್ಯವಾಗಿಯೇ ನಡೆದುಕೊಳ್ಳುವದು.ಇನ್ನೊಂದು ಬಾಹ್ಯ ಬದುಕು.ಅವನು ಬೇರೆಯವರ ಜೊತೆ ನಡೆದುಕೊಳ್ಳುವದು,ಇನ್ನೊಂದು ತೋರಿಸುತ್ತ ತನ್ನ ಸ್ವಾರ್ಥ ಸಾಧಿಸುವದು.
ಮನಸ್ಸು ಹೇಗೆ ತನ್ನ ಖಾಸಗಿ ಹಾಗು ಬಾಹ್ಯ ಬದುಕಿನ ಮಧ್ಯ ತೊಳಲಾಡುತ್ತದೆ ಅನ್ನುವದು ಹೇಳಲು ಇಲ್ಲಿ ಯತ್ನಿಸಿದ್ದಾರೆ.
ಚಿತ್ರದಲ್ಲಿ. ಮಗ(ನಾಯಕ) ಮನೆಗೆ ಬಂದರೆ ಎಲ್ಲರ ಬಾಹ್ಯ ಬದುಕು ಅನಾವರಣಗೊಳ್ಳುತ್ತದೆ. ಎಲ್ಲರು ಪ್ರೀತಿಯ ನದಿಯಲ್ಲಿ ತೇಲಿದಂತೆ ಆಪ್ತರಾಗುತ್ತಾರೆ.ಯಾಕೆಂದರೆ ನಾಯಕನೇ ಎಲ್ಲರನ್ನು ಸಾಕುತ್ತಿರುವದು.ಅವನ ಮುಂದೆ ಅನ್ಯೊನ್ಯವಾಗಿದ್ದಂತೆ ತೋರಿಸಿಕೊಳ್ಳುವದು ಅವಶ್ಯಕ. ಅದೇ ಮಗ ಇಲ್ಲದಿರುವಾಗ ಅವರವ ಖಾಸಗಿ ಬದುಕು,ಅವಶ್ಯಕತೆಗಳಿಗೆ ಮುಖ ಮಾಡಿ ನಿಲ್ಲುತ್ತಾರೆ.ಇವು ನಮ್ಮಲ್ಲೇ ಇರುವ ಎರಡು ಮುಖಗಳ ಪಾಯಿಂಟ್ ಆಫ್ ವಿವ್ (POV).ಇದು ಸ್ವಲ್ಪ ಅಸಹಜವಾಗಿ ಕಾಣುವದು ಸಹಜ.ಆದರೆ ಇದೆ ಆ ಕಥೆಯ ಮೂಲ.
ಇನ್ನು ಚಿತ್ರಕಥೆಗೆ ಬಂದರೆ. ಕೊನೆಯವರೆಗೂ ನಾಯಕ ಅನ್ಕೊಂಡಿರುವದಾದರು ಏನು ಅನ್ನುವದು ಇನ್ನು ಬಗೆಹರಿಯದ ಪ್ರಚಂಡ ಪ್ರಶ್ನೆಯಾಗಿ ಉಳಿಯುತ್ತದೆ.ಅವನ ಉದ್ದೇಶ ತಂದೆ ತಾಯಿಯ ಪ್ರೀತಿ ಪಡೆಯುವದಕ್ಕೆ ಹೀಗೆ ಮಾಡಿದ್ನಾ ಅಥವಾ ನಂಬಿಕೆಯಿಂದ ಸಂಭಂದ ಗೆಲ್ಲಬಹುದೇ ಅಥವಾ ಸಂಬಂಧದಲ್ಲಿ ನಂಬಿಕೆಯಿರಬೇಕು ಅನ್ನುವ ಆಪೆಕ್ಷೆಗಾಗಿ ಮಾಡಿದ್ದಾನೆ ಅನ್ನುವದು ತಿಳಿಯುವದಿಲ್ಲ.
ಆದರೆ ಚಿತ್ರದ ಹಲವು ಸನ್ನಿವೇಶಗಳು ನಾಯಕ ಮನೆಯ ಜನರನ್ನ ಪರೋಕ್ಷವಾಗಿ “ದಯವಿಟ್ಟು ನಂಬಿಕೆ ಉಳಿಸಿಕೊಳ್ಳಿ” ಅಂತ ಹೇಳುವ ಪ್ರಯತ್ನ ಮಾಡುತ್ತದೆ. ಮನೆ ಮಂದಿ ಎಲ್ಲರು ಇಸ್ಪಿಟ್ ಆಡುವಾಗ. ಅದನ್ನು ಗಮನಿಸಿ ನಾಯಕ ಆಡಬೇಡಿ ಅಂತ ಹೇಳುವ ಬದಲು,ಅವರ ಜೊತೆ ಆಟ ಆಡಿ ಗೆದ್ದು ಎಚ್ಚರ ನೀಡುತ್ತಾನೆ. ಹಾಗೇ ಕೊಟ್ಟ ದುಡ್ಡು ಪರತ್ ಕೊಡಲಿಲ್ಲ ಅಂತ ಗೆಳೆಯನನ್ನ ಮನೆಗೆ ಕರೆದು ಊಟ ಮಾಡಿಸಿ ನಂತರ ಹೊಡೆದು ದುಡ್ಡು ವಸೂಲಿ ಮಾಡುತ್ತಾನೆ. ಅಂದ್ರೆ ನಂಬಿಕೆಗೆ ಮೋಸ ಮಾಡಬೇಡಿ ಅಂತ ಪರೋಕ್ಷವಾಗಿ ಹೇಳಲು ಯತ್ನಿಸುತ್ತಾನೆ. ಆದರೇ ದುಡ್ಡಿನ ಮುಂದೆ ಯಾವ ಸಂಭಂದ ಏನು ಇಲ್ಲ ಅಂತ ಪಾತ್ರಗಳು ಅದನ್ನು ಲೆಕ್ಕಿಸದೆ ಮುಂದೆ ಹೋಗುತ್ತವೆ.
ಛಾಯಾಗ್ರಹಣ ಕಡೆಗೆ ಗಮನ ಹರಿಸಿದ್ರೆ ಕಡಿಮೆ ಬಜೆಟ್ ಗೆ ತಕ್ಕಂತೆ,ಕಥೆಗೆ ತಕ್ಕಂತೆ ಮೂಡಿಬಂದಿದೆ.ಆದ್ರೆ ಸಂಭಾಷಣೆ ಚಿತ್ರದ ಮಾನ ಕಾಪಾಡಿರುವದಂತು ನಿಜ.ಚಿತ್ರದಲ್ಲಿ ಹಿನ್ನಲೆ ಸಂಗೀತ ಸಮಂಜಸವಾಗಿ ಬಳಸಲಾಗಿದೆ.ಪಾತ್ರಗಳನ್ನು ಕೊನೆಯವರೆಗೂ ತೆಗೆದುಕೊಂಡು ಹೋಗದೆ ಅರ್ದಕ್ಕೆ ಕೈ ಚೆಲ್ಲಿ ನಿಲ್ಲಿಸಿದ ಹಾಗೆ ಫೀಲ್ ಬರುತ್ತದೆ.
ಕೊನೆಯಲ್ಲಿ ಉದ್ಭವಿಸುವ ಫೈಟಿಂಗ್ ಮತ್ತು ಐಟಂ ಸಾಂಗ್ ಎಷ್ಟರ ಮಟ್ಟಿಗೆ ಅವಶ್ಯಕ ಅನ್ನುವದು ಅರ್ಥವಾಗದ ವಿಷಯ. ಎದ್ದೇಳು ಮಂಜುನಾಥ ಚಿತ್ರದಲ್ಲಿ “ಪ್ರಪಂಚವೇ ದೇವರು ಮಾಡಿರುವ ಬಾರು” ಅನ್ನುವ ಐಟಂ ಸಾಂಗ್ ಚಿತ್ರಕಥೆಗೆ ಎಷ್ಟು ಪೂರಕವಾಗಿತ್ತೆಂದರೆ, ಅಲ್ಲಿ ಎಲ್ಲೂ ನಿಮಗೆ ಹಾಡು ತಂದು ತುರುಕಿರುವ ಹಾಗೆ ಅನಿಸುವ ಸಾಧ್ಯತೆಗಳೇ ಇರಲಿಲ್ಲ. ಆದರೆ ಇಲ್ಲಿ ಆ ಫೀಲ್ ಬರುತ್ತದೆ. ಹಾಗೇ ಎದ್ದೇಳು ಮಂಜುನಾಥ್ ಚಿತ್ರದಲ್ಲಿ,ಚಿತ್ರದ ಪ್ರತಿಯೊಂದು ದೃಶ್ಯ ಚಿತ್ರದ ಕ್ಲೈಮಾಕ್ಸ್ ಗಟ್ಟಿಗೊಳಿಸುವದರಲ್ಲಿ ಸಾಗುತ್ತದೆ.ಆದರೆ ಇಲ್ಲಿ ಅದು ಯಾವ ವಿಷಯವು ಲೆಕ್ಕಕ್ಕೆ ಬರದೇ ಇರುವದು ಅರಗಿಸಿಕೊಳ್ಳುವದು ಕಷ್ಟ.
ಮೂರು ವರ್ಷ ಕಾದು ನೋಡುವ ಚಿತ್ರ ಅಲ್ಲ ಆದರೆ ಇದು ಒಂದು ಪ್ರತಿಭಾವಂತ ನಿರ್ದೇಶಕನ ಸಾಧಾರಣ ಚಿತ್ರ ಅಷ್ಟೇ….ಇಷ್ಟಕ್ಕೆ ಮುಗಿಯುವದಿಲ್ಲ.ನಿರ್ದೇಶಕನ ಪ್ರತಿಭೆ ಹೊಸ ಚಿತ್ರಗಳ ಮೂಲಕ ಚಿತ್ರ ಪ್ರೇಮಿಗಳಿಗೆ ಉಣಬಡಿಸುವಂತಾಗಲಿ.
ಚಿತ್ರದ ಬಗ್ಗೆ ಇರುವ ನನ್ನ ಅಭಿಪ್ರಾಯ ವೈಯಕ್ತಿಕ . ನಿಮ್ಮ ಅನಿಸಿಕೆಗಳಿಗೂ ಸ್ವಾಗತ.
Watched “Director’s Special” today. When I entered the cinema hall, I told myself not to compare the movie to “Eddelu Manjunatha” as that would be unfair. Its like asking Nolan to give us a better antagonist than Joker. Still I felt utterly disappointed after the end credits rolled. Now why was the movie called thus in the first place? No idea! We all know Rangayana Raghu is a powerhouse of talent (who has been criminally reduced to hamming by KFI) But making a movie just to showcase the talent of RR is a recipe for disaster. A sequence of unrelated sketches could have worked better!
The dialogues and some scenes are really funny. But they are too sporadic and does not fit in the narrative structure. The movie fails due to a weak story line and half baked characterization. Basically what was the story about? An orphan brings in a bunch of orphans to “form” a family. Novel plot! After that? He stays away from home most of the time, as if the family should “gel” on its own? The protagonist role is so weak – the whole premise is just to give an opportunity for RR. In spite of a brilliant Rangayana Raghu, many sequences are overlong. Add to that a terribly written and choreographed item song, an unnecessary mass pleasing fight scene and an abrupt and pretentious ending made it a disappointing experience.
In short, “Dialogues” is not equal to “Film making”!
I had such high hopes on this film, that I am feeling cheated. Need some healing – now I got to search my VCDs – where art thou Manja?