ಡೈನೋಸಾರ್ ಗಳು ಅಡ್ಡಾಡುತ್ತಿವೆ..

ಇದು ಡೈನೋಸಾರ್ ಗಳ ಕಾಲ. ‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ.

ವಿತೆ, ನೆನಪು, ಮೆಚ್ಚುಗೆ ಎಲ್ಲವೂ ಬರುತ್ತಿದೆ. ಹಾಗೆ ಬಂದ ಒಂದು ಕವಿತೆ ಇಲ್ಲಿದೆ.

ಡೈನೋಸಾರ್ ನಿಮಗೆ ಕಂಡಿದ್ದು ಹೇಗೆ?

ಕವಿತೆಯಾಗಿ ಇದನ್ನು ಮುಂದುವರಿಸಬಹುದೇ ನೋಡಿ..

ನಿಸಾರ್ ಅಹ್ಮದ್ 

ಅಪಾರ್ಟುಮೆಂಟಿನ ಮುಂದಿನ ರಸ್ತೆಯಲ್ಲಿ
ಡೈನೋಸಾರ್ ಗಳು ಅಡ್ಡಾಡುತ್ತಿವೆ,
ಕಣ್ಣುಜ್ಜಿಕೊಂಡು ಸರಿಯಾಗಿ ದಿಟ್ಟಿಸಿದೆ,
ಹೌದು ನಿರಾತಂಕವಾಗಿ ಸುಳಿದಾಡುತ್ತಿರುವ
ಅವುಗಳು ಡೈನೋಸಾರ್ ಗಳೇ;

ಅಗೋ, ಅಲ್ಲೊಂದು ಡೈನೋಸಾರ್ ವೇದಿಕೆ
ಮೇಲೇರಿ ಕೋಮುವಾದದ ವಿಷಬೀಜ ಬಿತ್ತುತ್ತಿದೆ,
ಇಲ್ಲಿ ನೋಡಿ ಕೆಲವು ಸರಕಾರಿ ಡೈನೋಸಾರ್ ಗಳು
ಮೇಜಿನಡಿಯಲ್ಲಿ ಕೈಚಾಚಿ ನಾಲಗೆಯನ್ನೂ
ಹೊರಚಾಚುತ್ತಿವೆ, ಪಾಪ ಹಸಿವಾಗಿರಬಹುದೇನೋ,
ಎಂದೆಂದೂ ತೀರದ ದಾಹ ಇವುಗಳದ್ದು..

ಭೂರೀಭೋಜನವನ್ನು ಅರ್ಧಂಬರ್ಧ ತಿಂದು
ಅಲ್ಲಲ್ಲೇ ಬಿಟ್ಟುಹೋಗುವ ಹೊಟ್ಟೆಬಾಕ
ಡೈನೋಸಾರ್ ಗಳೂ ಧಾರಾಳವಿದೆ..

ಚಿತ್ರವಿಚಿತ್ರ ಹೆಸರನ್ನಿಟ್ಟುಕೊಂಡ ಡೈನೋಸಾರ್
-ಗಳನ್ನು ನೋಡಿ ಉದಾರೀಕರಣ, ಖಾಸಗೀಕರಣ,
ಜಾಗತೀಕರಣಗಳಂತೆ, ತಲೆಬುಡವಿಲ್ಲದ ,
ಸಾಮಾನ್ಯನಿಗೆ ಅರ್ಥವೇ ಆಗದವುಗಳು;

ಸಂಪತ್ತನ್ನು ಗುಡ್ಡೆಹಾಕುತ್ತಿರುವ ಥೇಟ್
ಬಂಡವಾಳಶಾಹಿಗಳಂತಹ
ಡೈನೋಸಾರ್ ಗಳದ್ದು ದೈತ್ಯಗಾತ್ರ;

ತರಹೇವಾರಿ ಡೈನೋಸಾರ್ ಪ್ರಭೇಧಗಳಿವೆ,
ಕೆಲವಂತೂ ಗೋಮುಖ ಡೈನೋಸಾರ್ ಗಳೇ;

ಡೈನೋಸಾರ್ ಸಂಖ್ಯಾಸ್ಫೋಟವಾಗುತ್ತಿದೆ,
ಎಲ್ಲೆಲ್ಲೂ ವಿಕಾಸವಾದದ ಮೂಲತಳಿಗಳು;

******************
ಗ್ವಾಟೆಮಾಲದ ಖ್ಯಾತ ಬರಹಗಾರ ಆಗೊಸ್ತೋ ಮೊಂತೆರ್ರೊಸೊನ ಎಸ್.ದಿವಾಕರ್ ರವರು ಕನ್ನಡಕ್ಕೆ ಅನುವಾದಿಸಿದ ‘ನನಗೆ ಎಚ್ಚರವಾದಾಗ ಡೈನೋಸಾರ್ ಇನ್ನೂ ಅಲ್ಲಿಯೇ ಇತ್ತು (when I was awoke dinosaur was still there) ಎಂಬ ಪ್ರಸಿದ್ದ ಅತೀ ಸಣ್ಣ ಕತೆ..

ಬರೆದದ್ದು : october 2 2016

‍ಲೇಖಕರು sakshi

July 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: