ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡುಂಡಿ- ಜೋಗಿ ಸವಾಲ್ ಜವಾಬ್

ಮದ್ಯದ ಸಾರವೇ ಅಂತಹದ್ದು. ಅಪಾರ ಬರೆದ ಚುಟುಕಕ್ಕೆ ಇಲ್ಲಿರುವ ಎರಡು ಸವಾಲ್ ಜವಾಬ್ ನೋಡಿ. ನಿಜಕ್ಕೂ ನೀವು ಮದ್ಯ ಪರರಾಗಿದ್ದರೆ ಕೈ ಜೋಡಿಸಿ. ಸಾರಿ.. ಕವನ ಜೋಡಿಸಿ. ಈ ಸವಾಲ್ ಗಳನ್ನೂ ಇನ್ನಷ್ಟು ಉದ್ದ ಬೆಳಸೋಣ. ಹಾಗೂ ನಾವೇ ಜವಾಬ್ ಕೂಡಾ ನೀಡೋಣ…

‘ಇದೇ ಕೊನೆಯ ಬಾರಿಗೆ’
———————

ಅನ್ನುವರು ಕೆಲವರು 
‘ಇದೇ ಕೊನೆಯ ಬಾರಿಗೆ’
ಪ್ರತಿಯೊಂದು ಸಲ
ಹೋದಾಗಲೂ ಬಾರಿಗೆ
 
ಬಹುಶಃ ನೀವೂ ಹಾಗೇ!
ನೆನಪಿರಲಿ- ಕುಡುಕರು
ನಿಲ್ಲಿಸುವ  ವಿಚಾರದಲ್ಲಿ
ದುಡುಕರು !

-ಡುಂಡಿರಾಜ್
 


ಕುಡಿದರಷ್ಟೇ ಸಾಗುವುದು ಬದುಕು ಜಟಕಾಬಂಡಿ
———————————
ಗುಟುಕಿನ ಮಜಾ ಏನು ಗೊತ್ತು ಡುಂಡಿರಾಜರಿಗೆ
ಅವರದೇನಿದ್ದರೂ ಚುಟುಕು.
ಮದ್ಯದ ಮಾತು ಆಡಬಾರದು ಅವರು
ಅವರದ್ದೇನಿದ್ದರೂ ಪದ್ಯ.
ಪದ್ಯಂ ವಧ್ಯಂ ಮದ್ಯಂ ಹೃದ್ಯಂ
ನಾವು ಕುಡೀತೇವೆ
ಕಂಡು ಧನ್ಯರಾಗಲಿ ಡುಂಡಿ
ಬೆಂಗಳೂರಲ್ಲಿ ಭಾರಿ ಥಂಡಿ
ಕುಡಿದರಷ್ಟೇ ಸಾಗುವುದು
ಬದುಕು ಜಟಕಾಬಂಡಿ
-ಜೋಗಿ

‍ಲೇಖಕರು avadhi

13 June, 2008

7 Comments

  1. Raghavendra Joshi

    ಮದ್ಯಸಾರ ಮದ್ಯಸಾರ
    ನಿನ್ನೀ ಮಹಿಮೆ ಅಪಾರ
    ಅದ್ಹೇಗೆ ಹಚ್ಚಿಬಿಟ್ಟೆ ಕಿಚ್ಚು
    ನೋಡೀಗ ಜೋಗಿರಾಜರ ಕಾಳ್ಗಿಚ್ಚು!

  2. ಶ್ರೀ ಹರ್ಷ

    ಬಾರು ಬಾರಿಗೂ
    ಭೇಟಿ ನೀಡುವರು, ಪ್ರತೀ ಬಾರಿಗೂ
    ನಿರೀಕ್ಷಿಸುತಾಮೃತ.
    ಅವರಿಗೇನ್ಗೊತ್ತು, ಶೀಘ್ರದಲ್ಲಾಗುವರವರು ಮೃತ!!!

  3. jogi

    ಸಾಯುತ್ತಾರೆಂದು ಕುಡಿಯದೇ
    ಇರುತ್ತಾರೆಯೇ ಪಾಪಿ.
    ಕಾಪಿ ಕುಡಿದವರೂ ಸಾಯ್ತಾರೆ
    ಮದ್ಯಕ್ಕಿರಲಿ ಮಾಫಿ.
    ಅಮೃತ ಕುಡಿದು ಅಮರರಾಗುವ
    ದುರಾಶೆಯಿಲ್ಲ ನಮಗೆ
    `ಮದ್ಯ’ಮ ವರ್ಗದವರು ನಾವು
    ಗಡಂಗೇ ಗುಡಿಯೆಮಗೆ
    -ಜೋಗಿ

  4. nilgiri

    ನಿಮ್ಮ ಜೀವ ನಮ್ಮ ಸಂಪತ್ತು
    ಕುಡಿದು ತಂದಿಟ್ಟುಕೊಳ್ಳಬೇಡಿ ಆಪತ್ತು
    ಬರಬೇಡಿ ಸ್ವಂತ ಕಾರಲ್ಲಿ ಬಾರಿಗೆ
    ಫೋನ್ ಮಾಡಿ 0800 ನಂಬರಿಗೆ
    ಬಾರಿನದೇ ಕಾರಿದೆ ಬಾಡಿಗೆಗೆ
    ವಾಪಸ್ಸು ಬಿಡುತ್ತೇವೆ ನಿಮ್ಮ ಮನೆಬಾಗಿಲಿಗೆ 😀

  5. ಅಹರ್ನಿಶಿ

    ಎಷ್ಟು ವೈನಾ(wine)ಗಿದೆ ಜುಗಲ್ ಬ೦ಧಿ
    ಮಲ್ಯನ ಶಲ್ಯ ಬೀದಿ ಪಾಲಾಗಿದೆ
    ಪ್ರೀಮಿಯರ್ ಲೀಗ್ ಜೂಜಾಡಿ
    ಯೂಬಿಗೆ ಬೇಕಾಗಿದೆ ಬಕಾರ್ಡಿ
    ಲಿಕ್ಕರ್ ಲಾಬಿಗಾಗಿ ಲಾಡಿ ಲೂಸಾಗಿದೆ
    ಪ್ರಜೆಗಳ್ ಟೈಟಾಗಿದೆ.

  6. Santhosh Ananthapura

    Excellent. Cheeeeeeeeeeeers……

  7. Santhosh Ananthapura

    ಚಿಯರ್ಸ್….
    ಸೋಮರಸವ ಕುಡಿದ ದೇವಾದಿ ದೇವರ ಕಾಣನೆ ನಮ್ಮ ಡುಂಡಿ
    ಅವರ್‍ಯಾಕೆ ನಮ್ಮ ಬಗ್ಗೆ ಇಷ್ಟೊಂದು ಚಂಡಿ ?
    ಜೋಗಿಯಾದ್ದೋ ಜಾಗರಣೆಯ ವೃತ್ತಿ
    ಅದಕ್ಕಾಗಿ ಮಾಡಿಕೊಂಡಿದ್ದಾರೆ ಗುಂಡಿನ ಪ್ರವೃತ್ತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading