ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ವಿ ಜಿ ಜ್ಞಾಪಕ ಚಿತ್ರಗಳು

ಮುದವೀಡು ಕೃಷ್ಣರಾಯರು ಖ್ಯಾತ ವಾಗ್ಮಿಗಳು. ಒಮ್ಮೆ ಬೆಂಗಳೂರಲ್ಲಿ ಅವರ ನಿರರ್ಗಳ ಮಾತು ಸಾಗಿತ್ತು: “ನಮ್ಮಲ್ಲಿ ಎಂಥೆಂಥ ಮಹಾಕವಿಗಳು ಆಗಿಹೋದರು. ಪಂಪ ಏನು! ರನ್ನ ಏನು! ಪೊನ್ನ ಏನು! ಜನ್ನ ಏನು!…” ಹೀಗೇ ಅವರು ಮಾತು ಮುಂದುವರಿಸಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಡಿ ವಿ ಜಿ, ಕೃಷ್ಣರಾಯರನ್ನು ತಿವಿದರು. ಕೃಷ್ಣರಾಯರು ತಿರುಗಿದಾಗ dvg.jpgಡಿವಿಜಿಯವರು, “ಪೊನ್ನ ಏನು? ಜನ್ನ ಏನು?” ಎಂದು ಕೇಳಿದರು. ಆಗ ಕೃಷ್ಣರಾಯರು ಹೇಳಿದರಂತೆ:

“ಅದನ್ನು ನಾವೇನು ಬಲ್ಲೆವಪ್ಪಾ! ನೀವೇ ಎಲ್ಲಾ ಹೇಳ್ತೀರಲ್ಲೊ!”

*

ಮ್ಮೆ ಎನ್ ನರಸಿಂಹಮೂರ್ತಿಯವರು ಕೈಯಲ್ಲಿ ತಂಬಿಗೆ ಹಿಡಿದು ಶೌಚಕ್ಕೆ ಹೊರಟಾಗ ಅವರ ತಲೆಯಲ್ಲಿ ದಿಢೀರಂತಾ ಒಂದು ಗಹನ ತಾತ್ವಿಕ ಪ್ರಶ್ನೆ ಕಾಡಿತು. “ಲೈಬ್ನಿಟ್ಸ್ ಹೀಗೆಂದಿದ್ದಾನೆ., ಆದರೆ ಸ್ಪಿನೋಜಾ ಹಾಗೆ ಹೇಳಿದಾನಲ್ಲ?”

ಅದಕ್ಕೆ ಡಿವಿಜಿ ಕೇಳಿದರಂತೆ: “ಈ ವಿಷಯ ಈಗಲೇ ತೀರ್ಮಾನವಾಗಬೇಕೊ ಅಥವಾ ನೀವು ಶೌಚಕ್ಕೆ ಹೋಗಿ ಬರುವವರೆಗ ಕಾಲಾವಕಾಶ ಇದೆಯೊ?”

‍ಲೇಖಕರು avadhi

18 August, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading