ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಎಸ್ ರಾಮಸ್ವಾಮಿ ಟಾಪ್ ಟೆನ್!

ಡಿ ಎಸ್ ರಾಮಸ್ವಾಮಿ

ನನ್ನ ಮೆಚ್ಚಿನ ಹತ್ತು ಪುಸ್ತಕಗಳು :

1. ಕರ್ಣಾಟಕ ಭಾರತ ಕಥಾಮಂಜರಿ –  ಕುಮಾರವ್ಯಾಸ
ಭಾರತ ಅಂದೂ ಇಂದೂ ಮುಂದೂ ಹೇಗಿತ್ತು ಹೇಗಿರಬಹುದೆನ್ನುವ ಅದ್ಭುತ ಸಾರ ಸಂಗ್ರಹ. ಪುರುಸೊತ್ತಾದಾಗಲೆಲ್ಲ ರೂಪಕ ಸಾಮ್ರಾಜ್ಯ ಚಕ್ರವರ್ತಿಯೊಂದಿಗೆ ಮಾತು ಕತೆ.
 
2. ಪುರಾಣ ನಾಮ ಚೂಡಾಮಣಿ- ಬೆನಗಲ್ ರಾಮರಾವ್ –
ಪ್ರಸಾರಾಂಗ, ಮೈಸೂರು ವಿಶ್ವ ವಿದ್ಯಾಲಯದ ಪ್ರಕಟನೆ- ಪುರಾಣೇತಿಹಾಸಗಳ ಪಾತ್ರ ಪ್ರಪಂಚದ ಸೂಕ್ಷ್ಮ ಪರಿಚಯ- ರೂಪಕ, ಪ್ರತಿಮೆಗಳಿಗೆ ತಡಕಾಡುವ ಕವಿಗೆ ಸುಗ್ರಾಸ ಭೋಜನ.
 
3. ಮಲ್ಲಿಗೆಯ ಮಾಲೆ- ಕೆ ಎಸ್ ನ ಸಮಗ್ರ ಕಾವ್ಯ- ಕವಿತೆಯಲ್ಲಿ ಬಳಸಬಹುದಾದ ಸೂಕ್ಷ್ಮ ಸನ್ನಿವೇಶಗಳ ಬೆಳಕಿಂಡಿ

4. ಸಮಗ್ರ ಕಾವ್ಯ- ಅಡಿಗ – ಕಾವ್ಯೋಪಾಸಕರ ನಿತ್ಯ ಪಾರಾಯಣದ ಪರಮ ಸೂಕ್ತ.
5. ಸಂಪಿಗೆ ಭಾಗವತ- ಲಕ್ಷೀಶ ತೋಳ್ಪಾಡಿ- ಭಾಗವತದ ಸರಳ ನಿರೂಪಣೆ.
6. ಮಂಕುತಿಮ್ಮನ ಕಗ್ಗ- ಡಿ ವಿ ಜಿ

7. ಬಾಳಿಗೊಂದು ಬೆಳಗು- ಜಿಡ್ಡು ಕೃಷ್ಣಮೂರ್ತಿ
8. ರಾಮ ಮನೋಹರ ಲೋಹಿಯ ಪುಸ್ತಕ ಸರಣಿ- ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಣೆ-
9. ಪೂರ್ವಾಪರ- ಯು ಆರ್ ಅನಂತಮೂರ್ತಿ ಚಿಂತನ ಮಾಲಿಕೆ
10.  ಹುಳಿಮಾವಿನ ಮರ – ಲಂಕೇಶ್ – ಬರಹದ ತುರೀಯ- ಆತ್ಮವಂಚನೆಯ ನೆರಳಿರದ ಸಹಜ ಆತ್ಮ ವೃತ್ತಾಂತ

‍ಲೇಖಕರು avadhi-sandhyarani

7 February, 2013

1 Comment

  1. c v sheshadri holavanahalli

    pusthakagala ayke ishtavayitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading