ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಎಸ್ ನಾಗಭೂಷಣರ ‘ಗಾಂಧಿ ಕಥನ’

ಸತೀಶ ಕುಲಕರ್ಣಿ

ನನ್ನ ಓದಿನ ತಾಳ್ಮೆ ಹಚ್ಚೆಂದರೆ 150 ರಿಂದ 200 ಪುಟಗಳದ್ದು. ಕಾವ್ಯವನ್ನೆ ಓದುತ್ತ ಬರೆಯುವ ನಾನು ಇತ್ತೀಚೆಗೆ ತುಂಬ ಮನಸ್ಸು ಕೊಟ್ಟು ಓದಿದ ಪುಸ್ತಕ ಗಾಂಧಿ ಕಥನ. 676 ಪುಟಗಳ ಗಾಂಧಿ ಕಥನವನ್ನು ಬರೆದವರು ಹಿರಿಯ ಸಮಾಜವಾದಿ ಲೇಖಕ ಡಿ. ಎಸ್. ನಾಗಭೂಷಣ ಗಾಂಧಿ ಬದುಕಿನ ಬಹುತೇಕ ಹೆಜ್ಜೆಗಳನ್ನು ದಾಖಲಿಸಿದ ಕೃತಿ.

ಪ್ರಭಾತಪೇರಿ, ಸ್ವಚ್ಛತಾ ಕೆಲಸ, ಕೋಲು, ಚಾಳೀಸು, ಟೊಂಕದಲ್ಲೊಂದು ದುಂಡು ಗಡಿಯಾರ ಕಟ್ಟಕೊಂಡ ಗಾಂಧೀಜಿಯನ್ನು ನೋಡುತ್ತ ಬೆಳೆದವನು ನಾನು. ಏನೋವೊಂದು ವಿಚಿತ್ರ ಛಾಪು. ಅವರ ಸರಳತೆ, ಸಹಜತೆ ಸದಾ ಕಾಡುವಂತಹದ್ದು. ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯ ಪಡೆದುದರ ಬಗ್ಗೆ ಮಾತನಾಡುವಾಗಲೆಲ್ಲ ಗಾಂಧಿ ಹೆಸರಿನಂತರವೇ ಉಳಿದೆಲ್ಲ  ಹೆಸರುಗಳನ್ನು ಹೇಳಿದವರು.

ಇಂತಹ ಗಾಂಧಿಜಿಯವರ ಹರಕು ಮುರುಕು ಚಿತ್ರಗಳ ಒಡಕು ಕನ್ನಡಿಯಂತಿದ್ದ ಗಾಂಧಿ ಚಿತ್ರವನ್ನು ಬದಲಿಸಿದ ಕೃತಿ ಗಾಂಧಿ ಕಥನ. ಒಂದು ಪೂರ್ಣ ತಿಳಿವು ತಂದುಕೊಟ್ಟ ಗಾಂಧಿ ಕಥನವನ್ನು ಎಲ್ಲರೂ ಓದಲೇ ಬೇಕು ಎಂದೆನಿಸಿದ್ದುಂಟು. ಗಾಂಧಿ ಚಿತ್ರ ಮಾಸಿ ಹೋಗುತ್ತಿರುವ ಈ ದಿನಗಳಲ್ಲಿ ಮತ್ತೊಮ್ಮೆ ಗಾಂಧಿ ಅಸ್ಮಿತೆಯನ್ನು ಕೊಟ್ಟಕೊಡಬಹುದಾದ ಕೃತಿ.

ಗಾಂಧಿ ಕಥನ ಮೂರ ಭಾಗಗಳಲ್ಲೊ ನಿರೂಪಿತವಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ಹೋರಾಟ, ಭಾರತಕ್ಕೆ ಬಂದ ನಂತರದ ಸಂಘರ್ಷ ಹಾಗೂ ಮಾಡು ಇಲ್ಲವೆ ಮಡಿ ಉತ್ತುಂಗು ಕಾಲದ ಭಾಗಗಳಾಗಿ ವಿಂಗಡಿತವಾಗಿವೆ. ಡಿ.ಎಸ್. ನಾಗಭೂಷಣ ಅವರು ನಮ್ಮ ನಡುವಿನ ತುಂಬ ಸಂಘರ್ಷ ಮನಸ್ಸಿನ ಸಮತಾವಾದಿ ಚಿಂತಕ. ಯಾವ ಅತರೇಕಗಳನ್ನು ಸಹಿಸದ ಚಡಪಡಿಕೆಯ ಬರೆಹಗಾರ.

ಹೊಸ ಮನುಷ್ಯ ಎಂಬ ಮಾಸಿಕವನ್ನು ಸಂಪಾದಿಸುತ್ತಿದ್ದಾರೆ. ತಾವೇ ಲೇಖಕರಿಗೆ ಕೇಳಿ ಲೇಖನಗಳನ್ನು ಬರೆಯಿಸುವ ಏಕೈಕ ಪತ್ರಿಕೆ. ಅವರ ಪತ್ನಿ ಸವಿತಾ ನಾಗಭೂಷಣ ನಮ್ಮ ನಡುವಿನ ತುಂಬ ಸೆನ್ಸಿಟಿವ್ ಕವಯತ್ರಿ.

ಹಾಗೆ ನೋಡಿದರೆ ಇದು ಅನೇಕ ಮೂಲಗಳು ಮತ್ತು ತಮ್ಮದೇಯಾದ ಚಿಂತನಾ ಕ್ರಮದಿಂದ ಕಟ್ಟಿಕೊಟ್ಟ ಕೃತಿ. ಆರಂಭದಲ್ಲಿ ಅವರು ಹೇಳುವಂತೆ ನಂಬಿಕೆಯಿಂದ ಸಮಾಜವಾದಿಯಾದ ನಾನು, ಈ ಹೊತ್ತಿಗೆ ಅದನ್ನೊಂದು ಸ್ಥಿರ ಸಿದ್ದಾಂತವನ್ನಾಗಿ ಪರಿಗಣಿಸುವ ವಯಸ್ಸು ಮತ್ತು ಕಾಲ ದಾಟಿ, ಅದನ್ನು ಒಂದು ಉದಾತ್ತ ಜೀವನ ದೃಷ್ಟಿ ಕೋನವನ್ನಾಗಿ ಗ್ರಹಿಸುವ ಹಂತ ತಲುಪಿದ್ದವನಾಗಿದ್ದರಿಂದ ಸಮಾಜವಾದ ಕುರಿತ ನನ್ನ ಧ್ಯಾನ ಪದೇ ಪದೇ ಗಾಂಧಿಯತ್ತ ತಿರುಗುತ್ತಿರುವುದನ್ನು ಗಮನಿಸಿದ್ದೇನೆ ಎನ್ನುತ್ತಾರೆ.

ಮುಂದುವರೆದು ಕಳೆದ 90ರ ದಶಕದಿಂದೀಚೆಗೆ ಆರಂಭವಾಗಿದ್ದ ಮುಕ್ತ ಮಾರುಕಟ್ಟೆಯ ಆರ್ಥಿಕತೆ ಜನರ ಆರ್ಥಿಕ ಜೀವನದಲ್ಲಿ ಒಂದಿಷ್ಟು ನೆಮ್ಮದಿಯನ್ನು ತಂದಿದ್ದರು – ಅದು ಸಾಮಾಜಿಕವಾಗಿ ಉಂಟು ಮಾಡುತ್ತಿದ್ದ ಹಿಂಸಾತ್ಮಕ ಒತ್ತಡಗಳು ಮತ್ತು ಸೃಷ್ಠಿಸುತ್ತಿದ್ದ ಸಾಂಸ್ಕಂತಿಕ ಅಶ್ಲೀಲತೆಗಳು ನನಗೆ ಅಪಾಯದ ಕರೆಗಂಟೆಗಳಂತೆಯೇ ಕೇಳಿಸ ತೊಡಗಿದ್ದವು.

ಈ ಹೊಸ ಬೆಳವಣಿಗೆಯನ್ನು ಅರಿಯಲು ಮುಖಾ ಮುಖಿಗೊಳ್ಳಲು ನಾನು ಓದಿಕೊಂಡ, ನಂಬಿಕೊಂಡ ಸಮಾಜವಾದ ಸಾಲದೆನಿಸತೊಡಗಿತ್ತು. ಅದು ಬಹುವಾಗಿ ಚರಿತ್ರೆಯ ಪ್ರಗತಿಶೀಲತೆಯನ್ನು ನಂಬಿದಂತಿತ್ತು. ತಮ್ಮನ್ನು ಗಾಂಧಿ ಸಮಾಜವಾದಿಯಂದು ಕರೆದುಕೊಳ್ಳುತ್ತಿದ್ದ ರಾಮ ಮನೋಹರ ಲೋಹಿಯಾ ಅವರ ವಿಚಾರಗಳ ಅಭಿಮಾನಿಯಾಗಿ, ಅವರು ಚರಿತ್ರೆಯನ್ನು ಮನಷ್ಯ ಚೇತನ ಮೀರಬಲ್ಲ ಸಾಧ್ಯತೆಗಳ ಬಗ್ಗೆ ಬೊಟ್ಟು ಮಾಡಿರುವುದನ್ನು ನಾನು ಗಮನಿಸಿದ್ದೇನಾದರು ಅವರ ದಿಕ್ಕಿನ ಚಿಂತನೆ ಕೇವಲ ಚಕ್ರಗತಿಯ ಚರಿತ್ರೆಯ ಮೀಮಾಂಸೆಯಲ್ಲಿ ಸಿಕ್ಕಿಕೊಂಡಿರುವುದನ್ನು  ನಾನು ಗಮನಿಸಿರಲಿಲ್ಲ.

ಬಹುಶಃ ನಾಗಭೂಷಣರ ಒಡಲಾಳದ ಈ ಅನಿಸಿಕೆಗಳ ನಮ್ಮೆಲ್ಲರ ಅಂತರಂಗದ ಪಿಸುಮಾತುಗಳೇ ಇರಬಹುದೆ. ಸರಳವಾಗಿ ಬದುಕುವುದು ಅತ್ಯಂತ ಕಠಿಣ ವಾದ ಕೆಲಸ  ಅನಿಸುತ್ತಿರುವ ಈ ದಿನಗಳಲ್ಲಿ ಗಾಂಧಿಜಿಯವರನ್ನು ಮತ್ತೆ ಹತ್ತಿರ ತರುವ ಪ್ರಯತ್ನವನ್ನು  ನಾಗಭೂಷಣ ತುಂಬ ಶ್ರದ್ದೆಯಿಂದ ಮಾಡಿದ್ದಾರೆ.

ನನ್ನ ಓದಿನ ಮಿತಿಯಲ್ಲಿ ಗಾಂಧಿ ರೂಪಗೊಂಡಿದ್ದು ಭಾರತಕ್ಕೆ ಅವರು ಬಂದ ಮೇಲೆಯೇ ಎಂದಿತ್ತು. ಆದರೆ ಗಾಂಧಿ ಕಥನಮ ಓದಿದ ಮೇಲೆ ಗಾಂಧಿಜಿಯವರ ವ್ಯಕ್ತಿತ್ವ ಖಚಿತವಾಗಿ ಆಕೃತಿ ಪಡೆದದ್ದು ದಕ್ಷಿಣ ಆಫ್ರಿಕಾದ ವರ್ಣ ನೀತಿಯ ವಿರೋಧದ ಹೋರಾಟದ ಮೂಲಕವೇ. ಅಲ್ಲಿಯ ಪ್ರತಿ ಹಂತದ ದಬ್ಬಾಳಿಕೆ, ಒಪ್ಪಂದ, ವಂಚನೆ, ನೆಲೆಯಿರದ ಬದುಕು, ಸಂಧಾನಿವೆಲ್ಲ ಗಾಂಧಿಜಿಯವರನ್ನು ಬೆಂಕಿಯೊಳಗಿನ ಬಂಗಾರವಾಗಿಸಿದ್ದು.

ಜೋಹಾನ್ಸಬರ್ಗ, ಟ್ರಾಶನ್ಸ್ ವಾಲಾ, ಬೋಯರ್ ಯುದ್ಧ, ಪ್ರಿಟೋರಿಯಾ ಸೆರೆಮನೆ ಒಂದೊಂದು ಹೆಜ್ಜೆಗಳು ಪರಿಪೂರ್ಣತೆಯ ಹಾದಿಯಲ್ಲಿ ಸಾಗುವಂತೆ ಮಾಡಿದ್ದವು. ಬಹಳ ಮುಖ್ಯವಾಗಿ ಜ.ಸ್ಮಟ್ಸ್ ದಬ್ಬಾಳಿಕೆ ಕೊನೆಗೂ ಗಾಂಧಿಜಿಗೆ ಶರನಾಗುವುದು ಗಾಂಧಿ ಮನುಷ್ತ್ವದ ಗೆಲುವೇ ಆಗಿತ್ತು. ಥೋರೊ, ಟಾಲ್‍ಸ್ಟಾಯ್, ಗೋಖಲೆ, ಟ್ಯಾಗ್ಯೂರ ಅವರಂತಹ ವ್ಯಕ್ತತ್ವಗಳ ಸಹವಾಸ ಅಧ್ಯನಗಳು ಗಾಂಧಿ ಕಥನದಲ್ಲಿವೆ.

ಗಾಂಧಿ ಕಥನ ಹೆಜ್ಜೆ 1,2, ಹಾಗೂ 3 ಎಂಬ ವಿಭಾಗಗಳಲ್ಲಿ ನಾಗಭೂಷಣ ಕಟ್ಟಿಕೊಟ್ಟಿದ್ದಾರೆ. ಈ ಕುರಿತು ವಿವರವಾಗಿ ಬರೆಯುತ್ತಾ ಹೋದರೆ ನೂರು ಪುಟಗಳಷ್ಟಾಗಬಹುದು. ಎಲ್ಲ ಅತಿರೇಕಗಳನ್ನು ವ್ಯಕ್ತಿಗತ ಮಟ್ಟದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಅನುಭವಿಸಿದ ಗಾಂಧಿಜಿಯವರನ್ನು ಓದುವಾಗ ಒಮ್ಮೊಮ್ಮೆ ಜಿಗುಪ್ಸೆ ಆಗುವುದುಂಟು.

ಕುಟುಂಬದ ಬಗ್ಗೆ, ಉಪವಾಸದ ಅತಿರೇಕಗಳ ಬಗ್ಗೆ, ಹೋರಾಟಗಳ ಉತ್ತುಂಗಕ್ಕೆ ಏರಿದಾಗ ಗಕ್ಕನೆ ಬ್ರೆಕ್ ಹಾಕುವ ಗಾಂಧಿಜಿಯವರ ಬಗ್ಗೆ ಬೇಸರವೂ ಬರುತ್ತದೆ. ಆದರೆ ಸದಾ ತಮ್ಮನ್ನು ತಾವು ಮಿಕ್ಕುತ್ತ ಪಾರದರ್ಶಕ ಬದುಕಿನತ್ತ ಸಾಗುವ ರೀತಿ ತುಂಬ ಆಪ್ತ ಮತ್ತು ಅಪರೂಪ. ಅನೇಕ ಸಲ ಗಾಂಧಿ ನಮ್ಮ ಮಿತಿಗೆ ಸಿಗದೇ ಇರುತ್ತಾರೆ, ಏನೇ ಆದರೂ ಗಾಂಧಿಜಿಯವರನ್ನು ನಿರಾಕರಿಸಲಾಗುವುದಿಲ್ಲ.

ಪ್ರತಿ ಮನುಷ್ಯನೂ ಒಂದೇ ಎರಕದ ಉತ್ಪನ್ನ : ಭಗವಂತನ ಸೃಷ್ಠಿ ಹಾಗಾಗಿ ಯಾವೊಬ್ಬನನ್ನೂ ನಿರಾಕರಿಸುವುದೆಂದರೂ ಭಗವಂತಣರ್ಣಣೆ ನಿರಾಕರಿಸಿದಂತೆ. ಇಂತಹ ಮನಃ ಶುದ್ಧಿಯಿಂದಾಗಿಯೇ ಅವರು ಆರಂಭಿಸಿದ ವರ್ನ ನೀತಿ ವಿರುದ್ಧ ಹೋಟಾರಕ್ಕೆ ಬಿಳಿಯರೂ ಆಕರ್ಷಿತರಾಗಿದ್ದರು. ಚೆರ್ಚಿಲ್ ಮತ್ತು ಜ.ಮಟ್ಸ್ ಅವರಂತಹ ಪಕ್ಕಾ ವಿರೋಧಿಗಳನ್ನು ಗಾಂಧಿ ಅವಿಂಸೆ ಮತ್ತು ನೈತಿಕತೆಯಲ್ಲಿಯೇ ಎದುರಿಸಿ ಗೆಲ್ಲುತ್ತಾರೆ.

ಅಸ್ಪುಷ್ರ್ಯತೆ, ಸ್ವಾತಂತ್ರ್ಯ, ಸ್ವರಾಜ್ಯ, ಅಹಿಂಸೆ, ಸತ್ಯಾಗ್ರಹ ಇವೆಲ್ಲವುಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ, ಹಿಗ್ಗಿಸಿ ಅನುಸಂಧಾನಿಸುವ ಗಾಂಧಿ – ಜಾತಿಗೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿ, ಯಾವುದೋ ಕಾಲದ ಶಾಸ್ತ್ರಗಳ ಆಧಾರಗಳ ಮೇಲೆ ಜಾತಿಗೆ ಧರ್ಮದ ಸಮ್ಮತಿ ಇದೆ ಎಂಬ ವಾದ ಮನುಷ್ಯ ವಿವೇಚನಾ ಶಕ್ತಿಗೆ ವಿರುದ್ಧವಾದುದು ಎಂಬ ಗಾಂಧಿ ಉವಾಚ ಹೆಚ್ಚು ಚೆರ್ಚೆಯಾಗಬೇಕಾಗಿದೆ.

ಡ.ಎಸ್. ನಾಗಭೂಷಣ ಮಹಾತ್ಮರ ಬದುಕಿನ ಅತೀ ಸಣ್ಣ ಅನ್ನಬಹುದಾದ ಸಂಗತಿಗಳನ್ನು ದಾಖಲಿಸಿದ್ದಾರೆ. ಹತ್ತಾರು ಪೂರಕ ಗ್ರಂಥಗಳನ್ನು ಮತ್ತು ತಮ್ಮದೇಯಾದ ಸ್ವತಂತ್ರ ಚಿಂತನೆಗಳನ್ನು ಗಾಂಧಿ ಕಥನದಲ್ಲಿ ದಾಖಲಿಸಿದ್ದಾರೆ.ಎಲ್ಲಿಯೂ ಗಾಂಧಿಜಿಯವರು ಅತೀಮಾನವ, ದೇವಮಾನವನನ್ನಾಗಿಸದೆ ಅಪ್ಪಟ ನೆಲದ ಗಾಂಧಿಯನ್ನು ತಂದುಕೊಟ್ಟಿದ್ದಾರೆ. ಒಮ್ಮೆ ಓದಲೇ ಬೇಕಾದ ಗಾಂಧಿ ಕಥನ.

‍ಲೇಖಕರು Avadhi

2 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading