ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!

ಡಿ ಎಸ್ ಚೌಗಲೆ

ಬತ್ತಿ ಹೋಗಿದೆ ನಿನ್ನೆದೆ
ಯಾಕೋ ಗೊತ್ತಿಲ್ಲ!

ಒಲವು ಜಿನುಗುವ ಜೇನಿಗೆ
ಆಸೆ ಹುಟ್ಟಿ ನಾಲಿಗೆ ಚಾಚಿದೆ
ಥೂ…

ಕೇವಲ ಭ್ರಮೆಯ ಬೇವು!
ಬೇವಿಗೂ ಔಷಧಿ ಗುಣವುಂಟಂತೆ
ನಿನ್ನ ತುಲನೆಯೂ
ಅದಕ್ಕೆ ಅವಮಾನ ವಿಷ ಪ್ರಮಾಣ!

ಕಾದಲಿಗೆ ಆಗದಿರಲಿ ಆಘಾತವಷ್ಟೆ
ಹೂಂ…ಪ್ರೀತಿಯ ನಶೆಯ
ನಂಬಿಕೆ ಹುಸಿಯಾದೀತು!

ರೂಹುಗಳಾಚೆ ಅಮೂರ್ತದಲಿ
ಶೋಧಿಸಿದೆ ನಿನ್ನ! ಸಂತೃಪ್ತ ಮನ

ಆದರೆ ಎದೆ ಭಾವಗಳ ಹಾದಿಗುಂಟ
ಮೋಹ(ಸ)ಗಳ ಬೀಜ ಮೊಳಕೆ ಒಡೆದಿತ್ತು
ಎಂದು ನಿಚ್ಚಳ ಮನದ ಗಾಭೆಗೆ
ಗೊತ್ತಾಗಲೇ ಇಲ್ಲ.

ನಮ್ಮ ಭಾವಯಾನಕೆ ಸಾಕ್ಷಿ ಹೇಳುವ
ಕಾಲ ಕೂಡಿ ಬಂದಾಗ
ಮುಖವಾಡ ಧಾರೆಯ ನೀ
ಹುನ್ನಾರಗಳ ಲೆಕ್ಕ
ಚುಕ್ತಾ ಮಾಡಿ ಬೆಲ್ಲವಾಗದೆ ಬೇವು ಬಿಟ್ಟು
ಪಲಾಯನ ಗೈದಿದ್ದೆ

Sketch Courtesy: Chikmath F V

‍ಲೇಖಕರು avadhi

February 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: