ಕರುಣಾಮಯಿದೇವರೆಲ್ಲಿದ್ದಾನೆ, ಹುಡುಕಿಕೊಡಿ ದಯವಿಟ್ಟು
ಯಾಕೋ ಮತ್ತೆ ಮತ್ತೆ ಆ ನಾಟಕ ನೆನಪಾಗ್ತಾಯಿದೆ.
—
ಫಜೀಲ ಯುದ್ಧ ಭೀಕರವಾಗಿತ್ತು. ಮೂರು ತಿಂಗಳು ನಡೀತು.ಇಡೀ ಮೊದಲ ವಾರವನ್ನ ಮೀರಾದ್ನ ಅಪ್ಪ ತನ್ನ ಹೆಂಡತೀನ್ನ ಹುಡುಕೋದ್ರಲ್ಲಿ ಕಳೆದ. ಈ ಕಾಣೆಯಾದ ಹೆಂಗಸರ ಬಗ್ಗೆ ಊರಲ್ಲಿ ಬೇಕಾದಷ್ಟು ಕತೆಗಳು ಹರಡಿದ್ವು. ಅವ್ರುನ್ನ ಸರ್ಬಿಯಾದ ಯಾವುದೋ ಒಂದು ಕ್ಯಾಂಪಲ್ಲಿ ಕೂಡಿ ಹಾಕಿದಾರೆ ಅಂತ. ಅವ್ರು ದಿನಾ ಸೈನಿಕರಿಗೆ ಅಡುಗೆ ಮಾಡಿ ಹಾಕ್ತಾಯಿದಾರೆ ಅಂತ. ಅವ್ರುನ್ನ ಒತ್ತೆಯಾಳಾಗಿ ಮಾಡಿ ಇಟ್ಕೊಂಡಿದಾರೆ ಅಂತ. ಅಲ್ಲಿ ಪ್ರತೀ ದಿನ ಈ ಹೆಣ್ಣುಮಕ್ಕಳ ಮೇಲೆ ನಡೀತಾಯಿದ್ದ ಅತ್ಯಾಚಾರಗಳು ಮಾತ್ರ ಯಾರಿಗೂ ಗೊತ್ತಿರಲಿಲ್ಲ.
ಯೂಕಾ ಅಣ್ಣ ಎಲ್ಲಾ ಕಡೆ ಹುಡುಕಿದ. ಯಾವುದಕ್ಕೂ ಹೆದರದೆ ಇಡೀ ಊರು ಸುತ್ತಿದ. ಅಮ್ಮ ಸಿಗಲೇಯಿಲ್ಲ. ಒಂದಿನ ಯಾರೋ ಹೇಳಿದ್ರು, ದುಡ್ಡು ಕೊಟ್ರೆ ಅವಳನ್ನು ಬಡಿಸಿಕೊಂಡು ಬರಬಹುದು ಅಂತ. ಅದು ಗೊತ್ತಾಗಿದ್ದೇ ಅವನು ಸರ್ಬಿಯಾದ ಆ ಗುಡ್ಡಗಾಡಿನ ಪ್ರದೇಶಕ್ಕೆ ಹೋಗಿ, ಅವರ ಮುಂದೆ ನಿಂತು ಎಷ್ಟಾಗತ್ತೆ ಅಂತ ಕೇಳಿದ. ಅವ್ರು ನಕ್ಕು ಮೈ ಹಣ್ಣಾಗೋ ಹಂಗೆ ಹೊಡೆದು ಕಳಿಸಿದ್ರು.
ಫಜೀಲ ಇಪ್ಪತ್ತು ಮೇ. ಮಧ್ಯಾಹ್ನದ ಊಟದ ಹೊತ್ತು. ಮಿರಾದ್ ಅಡುಗೇಮನೇಲಿದ್ದ. ಅವನ ಅಮ್ಮ ಹೋದ ಮೇಲಿಂದ ಅವನೇ ಅಡುಗೆ ಮಾಡ್ತಾಯಿದ್ದ. ತಂಗಿ ಯೆಲೆನಾ ಹೊರಗಡೆ ರಸ್ತೇಲಿ ಅಕ್ಕ ಪಕ್ಕದ ಮನೇ ಹುಡುಗರ ಆಡಿಕೊಂಡಿದ್ಲು. ಮನೇ ಹತ್ರಾನೇ ಆಡಿಕೊಂಡಿರೂ ಅಂತ ಅವಳಿಗೆ ಹೇಳಿದ್ದ ಮಿರಾದ್. ಆದ್ರೆ ಅವಳು ಬೆಕ್ಕಿನಮರಿಗಳನ್ನು ಆಟ್ಟಿಸಿಕೊಂಡು ಹೋಗಿ ಮನೆಯಿಂದ ಸ್ವಲ್ಪದೂರದಲ್ಲಿ ಆಟಾಡ್ತಾಯಿದ್ಲು. ಆವಾಗ್ಲೇ ಗುಂಡಿನ ಶಬ್ದ ಕೇಳ್ತು.
ಯೂಕಾ ಒಮ್ಮಿಗಿಲೇ ಮಿರಾದ್ಗೆ ಒಂದು ದೊಡ್ಡ ಬಾಂಬ್ ಸಿಡಿದಿದ್ದು ಕೇಳ್ತು. ಹೊರಗೆ ಓಡಿದ. ಯೆಲೆನಾ, ಒಳಗೆ ಬಾ ಅಂತ ಕಿರಿಚಿದ. ಸೆಲ್ಲರ್ಗೆ ಹೋಗೂ ಅಂತಕಿರಿಚಿದ. ಯೆಲೆನಾ ಮತ್ತೆ ಅವಳ ಫ್ರೆಂಡ್ಸ್ನೆಲ್ಲಾ ಅವರ ಅಮ್ಮಂದಿರು, ಅಕ್ಕಂದಿರು, ಅಣ್ಣಂದಿರು, ಅಜ್ಜಿಯಂದಿರು ಒಳಗೆ ಕರಕೊಂಡು ಬಂದ್ರು. ಗುಂಪಲ್ಲಿ ಯೆಲೆನಾ ಮಾತ್ರ ಕಾಣ್ತಾನೇಯಿರಲಿಲ್ಲ. ಮಿರಾದ್ರಸ್ತೆಗೆ ಹೋಗಿ ನೋಡಿದ. ಯೆಲೆನಾ ಅಲ್ಲಿ ದೂರದಲ್ಲಿ ಒಬ್ಬಳೇಯಿದ್ಲು. ಯೆಲೆನಾ ಬಾ ಅಂತ ಕೂಗಿದ.ಅವಳ ಕಡೆ ಓಡೋಕೆ ಶುರುಮಾಡಿದ.
ಫಜೀಲ ಎಷ್ಟು ಜೋರಾಗಿ ಓಡಕೆ ಸಾಧ್ಯವೋ ಅಷ್ಟು ಜೋರಾಗಿ ಓಡಿದ. ಇನ್ನೇನು ಒಂದು ನಲವತ್ತು ಅಡಿ ಅಷ್ಟೇ. ಇದ್ದಕ್ಕಿಂದ್ದಂಗೇ ಯೆಲೆನಾ ಹತ್ರ ಏನೋ ಒಂದು ಬಂದು ಬಿತ್ತು. ಅವಳಿಂದ ಒಂದು ನಾಕಡಿ ದೂರ ಬಿತ್ತು. ಅದನ್ನು ಮಿರಾದ್ ನೋಡಿದ. ಬೀಳುತ್ತಿದ್ದ ಹಂಗೇ ಢಂ ಅಂತ ಸಿಡೀತು. ಭಯಂಕರವಾಗಿ ಸಿಡೀತು. ಯೆಲೆನಾ ಅವನ ಕಡೆ ನೋಡಿದ್ಲು. ಏನೋ ಹೇಳೋಕೆ ಅಂತ ಬಾಯಿ ತೆಗೆದ್ಲು. ಮಾತೇ ಹೊರಡಲಿಲ್ಲ. ತನ್ನ ಹೊಟ್ಟೇನ್ನ ಗಟ್ಟಿಯಾಗಿ ಎರಡೂ ಕೈಗಳಿಂದ ಒತ್ತಿ ಹಿಡಕೊಂಡ್ಲು.
ಯೂಕಾ ಮಿರಾದ್ ಅಲ್ಲಾಡದೇ ನಿಂತಿದ್ದ. ತನ್ನತಂಗೀನ್ನೇ ನೋಡ್ತಾಯಿದ್ದ. ಅವಳು ಹೊಟ್ಟೇನ್ನ ಒತ್ತಿ ಹಿಡಿದಿದ್ದ ಅವಳ ಕೈ ಕೆಳಗೆ ಬಟ್ಟೆ ಬಣ್ಣ ಬದಲಾಗ್ತಾಯಿದ್ದು. ಕೆಂಪಾಗ್ತಾಯಿತ್ತು. ನಿಧಾನವಾಗಿ. ಯೆಲೆನಾ ಗಾಯಆಗಿದೆ ನಿಂಗೆ, ಹೊಟ್ಟೇ ಮೇಲೆ. ನೋವಾಗ್ತಾಯಿದೆಯಾ ತಡೀ ನಾನು ನೋಡ್ತೀನಿ ಒಂದು ಸಲ ಅಂತ ಕೂಗಿದ.
ಫಜೀಲ ಯೆಲೆನಾ ಏನೂ ಮಾತಾಡಲಿಲ್ಲ. ಅವನ ಕಡೇನೇ ನೋಡ್ತಾಯಿದ್ಲು. ನಿಧಾನವಾಗಿ ಕುಸಿದು ಬೀಳೋಕೆ ಶುರುಮಾಡಿದ್ಲು.
ಯೂಕಾ ಮಿರಾದ್ ಅವಳನ್ನು ಹಿಡೀಲಿಕ್ಕೆಓಡಿದ.ಅವನು ಅವಳನ್ನು ಮುಟ್ಟೋದ್ರೊಳಗೇ ಅವಳು ನೆಲದ ಮೇಲೆ ಬಿದ್ಲು.
ಫಜೀಲ ಯೆಲೆ ನಾ ಇನ್ನೂ ಎಚ್ಚರ ಇದೆಯಾಅಂತ ಕೇಳಿದ ಮಿರಾದ್. ಅವಳು ಉತ್ತರಕೊಡಲಿಲ್ಲ. ಕೊಡಲಿಕ್ಕೆಆಗಲಿಲ್ಲ. ಒಂದೇ ಸೆಕೆಂಡು, ಅವಳ ನಾಲಗೆ ದಪ್ಪಆಗಿಬಿಡ್ತು. ಉಸಿರು ಕಟ್ಟಿದರೆ ಆಗತ್ತಲ್ಲಾ ಹಾಗೆ. ಒಂದು ದೊಡ್ಡ ಉಸಿರು ಬಿಟ್ಲು. ಸತ್ತ ಕಣ್ಣುಗಳಿಂದ ಮಿರಾದ್ನ ನೋಡಿದಳು.
ಯೂಕಾ ಮಿರಾದ್ ನೋಡಿದ. ಅವಳ ಹೊಟ್ಟೆ ಹರಿದಿತ್ತು. ಹೊಟ್ಟೆತುಂಬಾ ಬಾಂಬಿನ ಕಬ್ಬಿಣದ ಚೂರುಗಳು. ಅವರಿಬ್ಬರ ಸುತ್ತ ಷೆಲ್ಲುಗಳು ಬೀಳುತ್ತಲೇಯಿದ್ದವು. ಸಿಡಿಯುತ್ತಲೇ ಇದ್ದವು. ಮಿರಾದ್ತನ್ನ ತಂಗಿಯ ಮುಖದ ಮೇಲೆ ಮುಖವಿಟ್ಟುಅತ್ತ. ಅತ್ತೇಅತ್ತ.
—
ಆಡ್ಡೆ ಬಾಂಟ್ನ ‘ಮಿರಾದ್ – ಎ ಬಾಯ್ ಫ್ರಂ ಬೋಸ್ನಿಯಾ’ ಅಂತ ಆ ನಾಟಕ. ಮಿರಾದ್ ಎಂಬ ಬೋಸ್ನಿಯಾದ ಹುಡುಗನಅತ್ತೆ ಮತ್ತು ಮಾಮ ಮಿರಾದನ ಪತ್ರಗಳನ್ನು ಓದುತ್ತಾ ಅವನ ಜೀವನವನ್ನುಕಟ್ಟಿಕೊಡುತ್ತಾರೆ. ಅರ್ಥವಿಲ್ಲದಯುದ್ಧದಿಂದ ನಾಶವಾಗುತ್ತಿರುವ ಬೋಸ್ನಿಯಾದಿಂದ ತಪ್ಪಿಸಿಕೊಂಡು ಹಾಲೆಂಡಿನಲ್ಲಿ ಬದುಕುತ್ತಿರುವ ಮಿರಾದನದುಒಂದುದುರಂತಕತೆ.ಇದುಒಂದು ನಾಟಕ.10 ವರ್ಷಕ್ಕೂ ಮೇಲ್ಪಟ್ಟ ಹುಡುಗರಿಗೆ ಮೀಸಲಾದ ನಾಟಕ.
—

ಗುಲ್ಜಾರ್ ಸಾಬ್ ಬರೆಯುತ್ತಾರೆ.
ಬೆಳಿಗ್ಗೆ ಬೆಳಿಗ್ಗೆ ಕನಸೊಂದು ಬಾಗಿಲು ತಟ್ಟಿದ್ದಕ್ಕೆ
ಬಾಗಿಲು ತೆಗೆದೆ, ನೋಡಿದೆ.
ಗಡಿಯಾಚೆಯಿಂದ ಕೆಲವರು ಗೆಳೆಯರು.
ನೋಡಲಿಕ್ಕೆ ಥೇಟ್ ಮನುಷ್ಯರಂತೇ, ನನ್ನಂತೇ.
ಹೇಳೀ ಕೇಳಿ ಗುರುತಿದ್ದ ಮುಖಗಳು.
ಕೈಕಾಲು ತೊಳೆದರು. ಅಂಗಳದಲ್ಲಿ ಚಾಪೆ ಹಾಸಿದೆ, ಕೂತರು.
ಒಲೆ ಹೊತ್ತಿಸಿ ಒಂದಿಷ್ಟು ರೊಟ್ಟಿ ಸುಟ್ಟೆ.
ಈ ನನ್ನ ಗೆಳೆಯರು ಚೀಲದಲ್ಲಿ ಒಂದಿಷ್ಟು ಬೆಲ್ಲ ತುಂಬಿಸಿ ತಂದಿದ್ದರು.
ಕಣ್ಣು ಬಿಟ್ಟು ನೋಡಿದಲ್ಲಿ ಮನೆಯಲ್ಲಿ ಯಾರಿಲ್ಲ.
ಮುಟ್ಟಿ ನೋಡಿದರೆ ಒಲೆ ಬಿಸಿ ಇನ್ನೂ ಆರಿರಲಿಲ್ಲ.
ತುಟಿಯ ಮೇಲಿನ ಬೆಲ್ಲದ ಸವಿ ಸುರುಳಿ ಹಾಗೇ ಇತ್ತು.
ಕನಸಿದ್ದಿರಬೇಕು.
ಕನಸೇ ಇರಬೇಕು.
ಕೇಳಿದ್ದೆ, ಗಡಿಯಂಚಿನಲ್ಲಿ ನಿನ್ನೆರಾತ್ರಿ ಗುಂಡಿನ ಸುರಿಮಳೆಯಾಗಿತ್ತೆಂದು.
ಕೇಳಿದ್ದೆ, ಗಡಿಯಾಚೆ ನಿನ್ನೆರಾತ್ರಿ ಕನಸುಗಳ ಕೊಲೆಯಾಗಿದೆಯೆಂದು.
—
ಒಂದು ತಾಯಿ ಬರೆದುಕೊಂಡಿದ್ದು ಹೀಗೆ.
`ಅವಳಿನ್ನೂ ಹುಟ್ಟೇ ಇಲ್ಲ
ಅವಳ ಪುಟ್ಟ ಪಾದದ ಗುರುತುಗಳು
ನನ್ನಒಡಲ ತುಂಬೆಲ್ಲಾ.
ಅಳಿಸುವುದಿಲ್ಲ, ಮಾಸುವುದಿಲ್ಲ.`
—
ದೇವರನ್ನು ಅನಾಥ ರಕ್ಷಕ ಅಂತೀವಿ. ಕರುಣಾಮಯಿ ಅಂತೀವಿ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ಅಂತೀವಿ. ಎಲ್ಲೆಲ್ಲೂ ಅವನೇ ಅಂತ ಬೊಗಳೆ ಬಿಡ್ತೀವಿ. ಈ ಮಕ್ಕಳ ಆಕ್ರಂದನ ಅವನ ಕಿವಿಗೆ ಬೀಳಲಿಲ್ಲವೇ?ಕರುಣಾಮಯಿ ಭಗವಂತ ಅಲ್ಲೆಲ್ಲೋ ಮೇಲೆ ಕೂತಿದ್ದಾನೆಅಂದ ಮೇಲೆ ಇಲ್ಲೇಕೆ ಇಂತ ಪೈಶಾಚಿಕ ಕೃತ್ಯಗಳು? ಆ ಮಕ್ಕಳನ್ನು ಸಾಯಲು ಹೇಗೆ ಬಿಟ್ಟ ಆ ಭಗವಂತ? ಡಿಸೆಂಬರ್ 16ರಂದು ಆ ಭಗವಂತನೇನು ರಜೆಯಲ್ಲಿದ್ದನೇ?
(ಸೌಜನ್ಯ : ಉದಯವಾಣಿ)






ಮೋಸ್ಟ್ಲಿ ಗರ್ಲ ಫ್ರೆಂಡ ಜೊತೇ ಟ್ರಿಪ್ ಹೋಗಿದ್ದಿರಬಹುದಾ,?
ಲೇಖನ ಅರ್ಥಪೂರ್ಣ. ಮನ ಕಲಕಿತು, ಚಿಂತನೆಗೆ ಹಚ್ಚಿತು.
heart touching….