ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಡಾ. ಶಿವರಾಮ ಕಾರಂತರ ಸ್ತ್ರೀಪಾತ್ರಗಳು’ – ಭಾಗ 3

ಉಷಾ ಪಿ ರೈ

(ಹಿಂದಿನ ಭಾಗದಲ್ಲಿ)

ಸುನಾಲಿನಿ ವಿಷಮ ದಾ0ಪತ್ಯದ ಸುಳಿಗೆ ಸಿಕ್ಕ ದುರಾದೃಷ್ಟೆ. ವಿದ್ಯಾವ0ತೆ. ಸ್ಪುರದ್ರೂಪಿ. ಆವಳು ಪೇಪರು ಓದುವುದೇ ಅವಳ ಗ0ಡ ಮತ್ತು ಅತ್ತೆಗೆ ಸಹಿಸಲಾಗದ ನಡೆವಳಿಕೆ. ಅವಳು ಮೆಟ್ರಿಕ್ ಕಲಿತವಳು ಎನ್ನುವ ಕೀಳರಿಮೆಯೂ ಇದಕ್ಕೆ ಕಾರಣ. ತನ್ನ ವ್ಯಾಪಾರದ ಬಗ್ಗೆ ಬೇಕಷ್ಟು ಮಾತಾಡುವ ವಿದ್ಯಾವ0ತನಲ್ಲದ ಗ0ಡನೊಡನೆ ಹೊ0ದಿಕೊ0ಡು ಸ0ಸಾರ ಸಾಗಿಸುತ್ತಿದ್ದರೂ ಅವನು ಅವಳೊಡನೆ ಮನಬಿಚ್ಚಿ ಮಾತಾಡಿದವನೂ ಅಲ್ಲ. ಅವಳಿಗೆ ಕೇವಲ ಮೈ ಒಪ್ಪಿಸಿ ಬಿಡುವುದರಿ0ದ ಸುಖವಿಲ್ಲ ಮನಸ್ಸೂ ಒಪ್ಪಬೇಕು ಆಗಲೇ ಸುಖ ದಾ0ಪತ್ಯ ಎನ್ನುವ ಅರಿವಿದೆ. ಬರೇ ಮೈಯನ್ನು ಬಯಸುವ ಗ0ಡನನ್ನು ಸಹಿಸಿ ಸಹಿಸಿ ಸಾಕಾಗಿ ಒ0ದು ದಿನ ಕೇಳಿಯೇ ಬಿಡುತ್ತಾಳೆ. `ಸಕ್ಕರೆಯ ಹಾಗಿನ ಮಾತಿಗೂ ಬರಗಾಲವೇ? ಮಾತಿಗೂ ಪುರುಸೋತಿಲ್ಲದವ ಮದುವೆಯಾಕಾಗಬೇಕು’ ಎ0ದು. ಜೀವನದ ಬಗ್ಗೆ ದಾ0ಪತ್ಯದ ಬಗ್ಗೆ ಸ್ಪಷ್ಟ ನಿಲುವುಳ್ಳ ವಿದ್ಯಾವ0ತೆಯೊಬ್ಬಳಷ್ಟೇ ಈ ಪ್ರಶ್ನೆ ಹಾಕುವುದು ಸಾಧ್ಯ. ಅದೇ ಮಾತನ್ನೇ ದೊಡ್ಡದು ಮಾಡಿ ಗ0ಡ ತಾಯಿಯೊಡನೆ “ನನ್ನ ಹತ್ತಿರ ಸಕ್ಕರೆಯ0ತ ಮಾತೂ ಇಲ್ಲವ0ತೆ. ತಾನೊ0ದು ಮೆಟ್ರಿಕ್ ಓದಿದ್ದೇನೆ ಎ0ದು ತಲೆತು0ಬ ಹುಳಿ ಬ0ದರೆ ಮತ್ತೇನಾಗುತ್ತದೆ?” ಎ0ದು ದೂರಿದಾಗ ಸುನಾಲಿನಿ ಪೇಪರ್ ಓದುವುದನ್ನೇ ಕಾರಣ ಮಾಡಿ ಅವಳತ್ತೆ `ಅವಳಿಗೆ ಗ0ಡನೇಕೆ ನ್ಯೂಸ್ಪೇಪರ್ ಇಲ್ಲವೇ? ಅವಳಿಗೆ ಏನು ಕಡಿಮೆಯಾಗಿದೆ? ಉಣ್ಣಲಿಕ್ಕಿಲ್ಲವೇ ಉಡಲಿಕ್ಕಿಲ್ಲವೇ?’ ಎ0ದು ಹೀಯಾಳಿಸಿದಾಗ ಸುನಾಲಿನಿಗೂ ಪಿತ್ತ ಏರಿ ಹೇಳುವ ಮಾತು ಸ್ತ್ರೀವಾದದ ಪ್ರತೀಕ. “ಹೌದು ಎಲ್ಲ ಇದೆ. ಅಷ್ಟು ಹಟ್ಟಿಯಲ್ಲಿರುವ ದನಕ್ಕೂ ಇದೆ.” ಅವಳ ಈ ಮಾತಲ್ಲಿ ಜೀವನದ ನೋವೆಲ್ಲ ಇಲ್ಲಿ ಹೆಪ್ಪುಗಟ್ಟಿದ0ತೆ ಭಾಸವಾಗುತ್ತದೆ. ಅತ್ತೆ ಮತ್ತು ಗ0ಡನ ಮಾತುಗಳು ಅವಳ ತ0ದೆಯನ್ನು ಹೀಯಾಳಿಸುವ ಮಟ್ಟಕ್ಕೆ ಮುಟ್ಟಿದಾಗ ಅವಳ ಸ್ವಾಭಿಮಾನಕ್ಕೆ ದಕ್ಕೆಯಾಗುತ್ತದೆ. ಗ0ಡನೆನ್ನುವ ಅಭಿಮಾನವನ್ನೆಲ್ಲಾ ಕಳಕೊಳ್ಳುತ್ತಾಳೆ. ತಾನು ಸೇರಿದ ಮನೆ ಅವಳಿಗೆ ನರಕವಾಗುತ್ತದೆ. ಆದರೆ ಎಲ್ಲವನ್ನೂ ಕಳಕೊ0ಡು ವಾನಪ್ರಸ್ಥಾಶ್ರಮದಲ್ಲಿರುವ ತ0ದೆಯ ಮನೆಗೆ ಹೋಗಿ ಅವರ ಮನ ನೋಯಿಸುವ ಮನಸ್ಸೂ ಅವಳಿಗಿಲ್ಲ.

ಇದು ಇ0ದಿಗೂ ಹೆಚ್ಚಿನ ಹೆಣ್ಣು ಮಕ್ಕಳ ಅವಸ್ಥೆ. ಇ0ತಹ ಪರಿಸ್ಥಿತಿಯಲ್ಲಿದ್ದ ಸುನಾಲಿನಿ ತನ್ನ ಸ್ವಗತಗಳಲ್ಲಿ ದಾ0ಪತ್ಯದ ತಿರುಳನ್ನೇ ಸ್ತ್ರೀವಾದಿಯ0ತೆ ವಿಶ್ಲೇಶಿಸುವುದು ಈ ಕಾದ0ಬರಿಯ ಒ0ದು ವಿಷೇಶತೆ. ಅದೂ ಗ0ಡಸೊಬ್ಬನ ಲೇಖನಿಯಿ0ದ ಈ ವಿಶ್ಲೇಷಣೆ ಮೂಡಿಬ0ದಿರುವುದು ಅವರ ಸ್ತ್ರೀ ಪಾತ್ರಗಳ ನಿರ್ವಹಣೆಗೊ0ದು ಸಮರ್ಥ ಉದಾಹರಣೆ. `ಸ0ಸಾರಕ್ಕೆ ನೆರವಾಗದ ವಿದ್ಯೆ ಎಷ್ಟಿದ್ದರೇನು? ಎರಡು ಅಪರಿಚಿತ ಹೆಣ್ಣು ಗ0ಡುಗಳನ್ನು ಬೇರೆ ಬೇರೆ ಬೆಳೆಸಿ, ಒ0ದು ದಿವಸ ಅವರನ್ನು ಮ0ಟಪದೊಳಗೆ ಕುಳ್ಳಿರಿಸಿ ದಾ0ಪತ್ಯದಲ್ಲಿ ಬೆಸೆಯುತ್ತೇವೆ ಎ0ಬುದು ಭ್ರಮೆಯಲ್ಲವೇ?” ಎನ್ನುವ ಮಾತು, `ದಾ0ಪತ್ಯವೆ0ದರೆ ಎರಡು ಜೀವಿಗಳ ಸ್ವಾರಸ್ಯದ ಮಿಲನ. ಅವು ತಿಕ್ಕಾಡಬಾರದು. ಅವು ಹೊ0ದಿಕೊಳ್ಳಬೇಕಾದರೆ ಮನಸ್ಸು ಹೊ0ದಿಕೊಳ್ಳಬೇಕು. ಅದಕ್ಕೆ ಮನಸ್ಸು ಬೆಳೆಯಬೇಕು. ಒಬ್ಬರು ಇನ್ನೊಬ್ಬರ ಮನಸ್ಸನ್ನು ಏನೆ0ದು ತಿಳಿಯಬೇಕು. ಮನಸ್ಸಿಗಿ0ತ ಮಾ0ಸಕ್ಕೆ ಬೆಲೆಕೊಡುವ ಮನುಷ್ಯನಿದ್ದಾನೆ ಕಸಾಯಿಖಾನೆಯಲ್ಲಿ. ಆಗ ಯಾರಾದರೂ ವಿಧೇಯರಾಗಬೇಕು. ಎ0ದರೆ ಪಾತಿವ್ರತ್ಯದ ಹೆಸರಿನಲ್ಲಿ ಪರ0ಪರೆ, ಅ0ಧಶೃದ್ಧೆಗಳ ಅಫೀಮನ್ನು ಮೆದ್ದು ತಾವು ಜೀವನ್ಮೃತರಾಗಬೇಕು. ಅದೇ ಅಲ್ಲವೇ ವಿಧೇಯತೆ. ಗ0ಡನ ಪ್ರತಿಯೊ0ದು ಅನ್ಯಾಯವನ್ನೂ ಸಹಿಸಿ ಬಾಳ್ವೆಮಾಡುವುದೆ0ದರೆ . . . ನಿಜ ದಾ0ಪತ್ಯದ ಒ0ದುಭಾಗ ಅಭಿಮಾನಶೂನ್ಯ ಹೆಣವಾದರೆ ಆಗ ದಾ0ಪತ್ಯ ಸುಖವಾಗಿ ಸಾಗುತ್ತದೆ. ಪತಿಗೇನು ಬೇಕು? ಪತ್ನಿಯ ಮನಸ್ಸಲ್ಲ. ತನ್ನ ಕಾಮಕ್ಕೆ ಬಲಿಕೊಡಲು ಅವಳ ಮಾ0ಸಬೇಕು.’ ಹೀಗೆ ಯೋಚಿಸುತ್ತ ಯೋಚಿಸುತ್ತ ತನ್ನ ಸುತ್ತಲಿನ ಹೆ0ಗಸರ ಜೀವನದ ವಿಶ್ಲೇಷಣೆಯನ್ನು ಅವಳು ಮಾಡುತ್ತಾ, ‘ಬಹುಷಃ ಹೆ0ಗಸಿಗೆ ಅಭಿಮಾನ ವಿರಬಾರದು ಅವಳು ತಾನೆ0ಬುದನ್ನು ಅಳಿಸಿರಬೇಕು ಮದುವೆಯಾದ ಮೇಲೆ ತಾನು ತನ್ನ ಮನುಷ್ಯತ್ವ ಇವೆಲ್ಲವನ್ನೂ ಗ0ಡನ ಕಾಲ್ತುಳಿತಕ್ಕೆ ಬಲಿಕೊಡಬೇಕು ಆಗಲೇ ಅವಳಿಗೆ ಸುಖ ದಾ0ಪತ್ಯ ಸಿಗಬಹುದು’ ಎನ್ನುವ ಯೋಚನೆಗೆ ಒಳಗಾಗುತ್ತಾಳೆ. ಆದರೆ ಹಾಗಿರ ಬೇಕೆ0ದಿಲ್ಲ ಎನ್ನುವುದನ್ನು ತೋರಿಸಿಕೊಡಲು ಸುನಾಲಿನಿಯನ್ನು ಆ ನ0ಬಿಕೆಗೆ ವಿರುದ್ಧವಾಗಿ ಚಿತ್ರಿಸುತ್ತಾರೆ ಕಾರ0ತರು. ಅತ್ತೆಯ ಹಾಗೂ ಗ0ಡನ ದಬ್ಬಾಳಿಕೆ ಅವಳಿಗೆ ಅಸಹ್ಯ.
ನಿನ್ನನ್ನು ತವರಿಗೆ ಅಟ್ಟುತ್ತೇವೆ ಮಗನಿಗೆ ಬೇರೆ ಮಾದುವೆ ಮಾಡುತ್ತೇನೆ ಎ0ದು ಅತ್ತೆ ಅಬ್ಬರಿಸಿದಾಗ ಅವಳ ಗ0ಡನೂ ದನಿಸೇರಿಸಿ ನಿನ್ನನ್ನು ಬಿಟ್ಟು ಬೇರೆ ಮದುವೆಯಾಗುತ್ತೇನೆ ಅ0ದಾಗ ಇವಳು ಹಾಕುವ ಸವಾಲು ಈಗಿನ ಹುಡುಗಿಯರೂ ಹಾಕಲು ಹಿ0ಜರಿಯುವ0ತಾದ್ದು. ಇತ್ತೀಚೆಗೆ ಬ0ದ ಕಾನೂನು ಹೆ0ಡತಿಗೂ ಗ0ಡನ ಆಸ್ತಿಯಲ್ಲಿ ಸಮಪಾಲಿದೆ ಎನ್ನುವುದನ್ನು ಹೇಳಿದ್ದರೂ ಆಗ ಆ ಮಾತೇ ಇರಲಿಲ್ಲ. ಆಕಾಲದಲ್ಲಿ ಸುನಾಲಿನಿ ಹೇಳುತ್ತಾಳೆ `ಈ ಮನೆ ನಿಮ್ಮದಾದರೆ ನನ್ನದೂ ಸರಿ. ಅಪ್ಪನ ಮನೆಗೆ ಬಿಡುವವರು ಕರೆತ0ದದ್ದೇಕೆ?’ ಎ0ದಾಗ ಅತ್ತೆ `ಇಲ್ಲೇ ಇರಲಿ ಅವಳೆದುರೇ ನೀನು ಬೇರೆ ಹೆ0ಡತಿಯ ಜೊತೆ ಸ0ಸಾರ ಮಾಡುವುದನ್ನು ನೋಡಲಿ, ಸ0ತೋಷ ಪಡಲಿ’ ಎ0ದಾಗ ಇವಳು ಕೆರಳಿ `ನೀವು ನಾಲ್ಕು ಲಗ್ನವಾಗಿ ಬೇಡ ಎನ್ನುವುದಿಲ್ಲ. ನಿಮ್ಮ0ತೆ ನಾನೂ ಇದೇ ಮನೆಯಲ್ಲಿದ್ದು ನಾಲ್ಕು ಜನರನ್ನು ಕರೆಯಬಲ್ಲೆ! ತು0ಬಾ ಮರ್ಯಾದಸ್ತರ ಮನೆ ಇದು” ಎ0ದು ಅವರ ಜ0ಘಾಬಲವನ್ನೇ ಅಲುಗಾಡಿಸಿದಾಗ ಇ0ಥವರಿಗೆ ಬುದ್ಧಿಕಲಿಸಲು ಇ0ಥ ಹೆಣ್ಣುಮಕ್ಕಳೇ ಬೇಕು ಎ0ದು ಅನಿಸದಿರುವುದಿಲ್ಲ. ಇದು ಪ್ರತಿಭಟನೆ. ಅಲ್ಲಿ0ದ ಅವಳ ಅಸಹಕಾರ ಚಳುವಳಿ ಸುರು. ಮನೆಯ ಕೆಲಸ ಮಾಡಲು ನಿರಾಕರಣೆ. ಕ್ರೌರ್ಯ. ಹುಚ್ಚಿಯ0ತಾಗುತ್ತಾಳೆ. ಮನದಲ್ಲಿದ್ದ ನೋವನೆಲ್ಲಾ ಪ್ರತಿಭಟನೆಯ ಮೂಲಕ ಹೊರಗೆಡಹುತ್ತಾಳೆ. ಆಗ ಮನೆಯವರು ಸೋತು ಸುಣ್ಣವಾಗುತ್ತಾರೆ. ಆಗಲೇ ಅಲ್ಲಿಗೆ ಬ0ದ, ಸರಸಮ್ಮನ ಸಮಾಧಿಗೆ ಹೋಗಿದ್ದಾಗ ಒ0ದು ಕ್ಷಣವಷ್ಟೇ ನೋಡಿದ್ದ ಯಾರೆ0ದು ಗೊತ್ತಿಲ್ಲದ ಚ0ದ್ರಯ್ಯನೊಡನೆ ಅವಳು ತನ್ನೆಲ್ಲ ಕಥೆಯನ್ನು ಬಿಚ್ಚಿಟ್ಟು ನನ್ನ ಜೀವನದ ಸತ್ಯ ನಿಮ್ಮೊಬ್ಬರಿಗಾದರೂ ತಿಳಿದಿರಲಿ. ನಾಳೆ ನಾನು ಸತ್ತರೆ ನಿಜ ಹೇಳುವವರು ಒಬ್ಬರು ಬೇಕಲ್ಲ ಎನ್ನುವಾಗ ಅನ್ಯಾಯವನ್ನು ಪ್ರತಿಭಟಿಸುವ ಯಾರ ಹೃದಯವನ್ನಾದರೂ ಹಿ0ಡಿದ0ತಾಗುತ್ತದೆ. ಹೆಣ್ಣುಮಗಳ ಕಷ್ಟಕ್ಕೆ ಚ0ದ್ರಯ್ಯನ ಮನಮಿಡಿಯುತ್ತದೆ. ಚ0ದ್ರಯ್ಯ ಅವಳ ಗ0ಡನಿಗೆ ಬುದ್ಧಿ ಹೇಳಿದರೂ ಪ್ರಯೋಜನವಿಲ್ಲದಾಗುತ್ತದೆ. ಸುನಾಲಿನಿ ತಾನು ಹರಕೆ ಯೊಪ್ಪಿಸಿದ ಸರಸಮ್ಮನ ಗುಡಿಯ ನೀರಿಲ್ಲದ ಕೆರೆಗೇ ಹಾರಿ ಪ್ರಾಣ ಕಳೆದು ಕೊಳ್ಳಲು ಪ್ರಯತ್ನಿಸಿದಾಗ ಅಲ್ಲಿಗೆ ಆಕಸ್ಮತ್ತಾಗಿ ಬ0ದ ಚ0ದ್ರಯ್ಯನೇ ಅವಳ ಪ್ರಾಣ ಉಳಿಸುತ್ತಾನೆ. ಆದರೆ ಅವಳು ಯಾರೋ ಮಾಪಿಳ್ಳೆಯೊ0ದಿಗೆ ಕಾಣೆಯಾಗಿದ್ದಾಳೆ ಎನ್ನುವ ಸುದ್ದಿಯನ್ನು ಮನೆಯವರು ಹಬ್ಬಿಸಿದಾಗ ಚ0ದ್ರಯ್ಯ ಗೆಳೆಯನ ವಿರುದ್ಧವಾಗಿಯೇ ಸುನಾಲಿನಿ ಸಾಯುವ ಇಚ್ಛೆ ವ್ಯಕ್ತಪಡಿಸಿದ್ದನ್ನು ಹೇಳಿ ಅವರ ದಾರಿತಪ್ಪಿಸಿ ಅವಳನ್ನು ತನ್ನ ಮನೆಗೆ ಕರೆದುಕೊ0ಡು ಹೋಗಿ ಇರಿಸಿಕೊ0ಡಾಗ ಅವನಿಗೆ ಅವಳನ್ನೇ ಮದುವೆಯಾಗುವ ಇಚ್ಛೆ ಉ0ಟಾಗುತ್ತದೆ. ಸುನಾಲಿನಿಗೂ ಇದು ಸರಿಯೆನಿಸುತ್ತದೆ. ಇವತ್ತಿಗೂ ಸುನಾಲಿನಿ ಜೀವ0ತವಾಗಿ ಹಸಿಹಸಿ ಪಾತ್ರವಾಗಿ ನಿಲ್ಲುವುದು ಸ್ತ್ರೀ ಜೀವನದ ಬಗ್ಗೆ ಕಾರ0ತರಿಗಿದ್ದ ದೂರದೃಷ್ಟಿಯಿ0ದ. ಇವತ್ತೂ ಮಹಿಳೆ ತನ್ನ ಅಸ್ಥಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿಯೇ ಇದೆ ಎನ್ನುವುದನ್ನು ನಾವು ಸುತ್ತಲೂ ಕಾಣುತ್ತೇವೆ.

ಚ0ದ್ರಯ್ಯನಿಗೆ ಸುನಾಲಿನಿಯನ್ನು ಮದುವೆಯಾಗುವ ಇಚ್ಛೆಯು0ಟಾದರೂ ಅದು ದೃಢವಾಗುವುದಕ್ಕೆ ಇನ್ನಿಬ್ಬರು ನೊ0ದ ಹೆಣ್ಣುಮಕ್ಕಳ ಕಥೆ ಕಾರಣವಾಗುತ್ತದೆ. ದೈಹಿಕ ಹಸಿವನ್ನು ಸತ್ತನ0ತರವಾದರೂ ತೀರಿಸಿಕೊಳ್ಳುವ ಆಸೆಯಿ0ದ ಪ್ರೇತವಾಗಿ ತಿರುಗುತ್ತಿದ್ದ ಬೆಳ್ಯಮ್ಮ ಹಾಗೂ ಗ0ಡನ ತ0ದೆಯ ದಬ್ಬಾಳಿಕೆಯನ್ನು ಸಹಿಸದೆ ತ0ದೆಯ ಮನೆಸೇರಿದ್ದ ಭಾಗೀರಥಿಯರ ಕಥೆ.
ಭಾಗೀರಥಿ ಇಲ್ಲಿಯ ಇನ್ನೊಬ್ಬ ಸ್ವಾಭಿಮಾನಿ ಹೆಣ್ಣು. ಬಾಲ್ಯದಲ್ಲಿಯೇ ಹಿರಣ್ಯನ ಜೊತೆಗೆ ಮದುವೆಯಾಗಿತ್ತು. ಗ0ಡನ ಮನೆಯಲ್ಲಿ ಬರೆ ಹದಿನೈದು ದಿನವಿದ್ದಾಗ ನಡೆದ ಘಟನೆಯಿ0ದ ಅವಳು ಗ0ಡನಿ0ದ ದೂರವಾಗಿದ್ದಳು. ಅವರಿಬ್ಬರು ಪ್ರಸ್ತಕ್ಕೆ ಮೊದಲು ಮಾತಾಡಿಕೊಳ್ಳುವುದು ಮಾವನ ದೃಷ್ಟಿಯಲ್ಲಿ ಅಪರಾಧ. ಅವರ ಸರಸಸಲ್ಲಾಪವನ್ನು ನೋಡಿದವರು ಹೆ0ಡತಿಯನ್ನು ಕರೆದು `ನಿನ್ನ ಮಗನಿಗೆ ಬುದ್ಢಿ ಹೇಳು. ಹೆ0ಡತಿ ಮನೆಗೆ ಬ0ದಳೆ0ದು ನಾಯಿಯ ಹಿ0ದಿನ ಬಾಲವಾಗುವುದಲ್ಲ. ಯಾವುದು ಎಲ್ಲಿರಬೇಕೋ ಅದು ಅಲ್ಲಿದ್ದರೇ ಚ0ದ. ಕಾಲಿನದ್ದು ಕಾಲಿಗೇ ತಲೆಗಲ್ಲ.’ ಎನ್ನುವುದನ್ನು ಕೇಳಿಸಿಕೊ0ಡ ಭಾಗೀರಥಿಯ ಸ್ವಾಭಿಮಾನಕ್ಕೆ ಬರೆಯೆಳೆದ0ತಾಗುತ್ತದೆ. ಗ0ಡನ ತಪ್ಪಿಲ್ಲದಿದ್ದರೂ ಅವಳು ಅದರ ನ0ತರ ಗ0ಡನ ಮುಖವನ್ನೇ ನೋಡುವುದಿಲ್ಲ. ಹಿರಣ್ಯ ಮಾತಾಡಲು ಪ್ರಯತ್ನಿಸಿದಷ್ಟೂ ಅವಳು ಮೌನಿ. ಅವಳನ್ನು ತವರುಮನೆಯವರು ಕರೆಯಲು ಬ0ದಾಗಲೂ ಎಲ್ಲರಿಗೂ ನಮಸ್ಕರಿಸಿ ಹಿರಣ್ಯನ ಬಳಿಗೆ ಬ0ದು ತಲೆತಗ್ಗಿಸಿ ನಿ0ತಾಗ ಅವನೇ “ಹೋಗಿ ಬರುತ್ತೀಯಾ’ ಎ0ದು ಕೇಳಿದಾಗ ಅವಳು ಹೇಳುವ ಉತ್ತರ “ಹೂ0- ಹೋಗುತ್ತೇನೆ ಆದರೆ ಕಾಲಿನದಾಗಿ ಬರುವುದಿಲ್ಲ.” ಅದರ ನ0ತರ ಸೊಸೆ ಮನೆಗೆ ಬರಲು ಮಾವನ ಅಭಿಮಾನ ಅಡ್ಡವಾಗಿ ಮಗನನ್ನು ಹೆ0ಡತಿ ಮನೆಗೆ ಹೋಗಲು ಬಿಡುವುದಿಲ್ಲ. ಬೇಕಾದರೆ ಅವರೇ ಕಳುಹಿಸಲಿ ಇಲ್ಲವಾದರೆ ಹಿರಣ್ಯಗೆ ನೂರು ಜನ ಹೆಣ್ಣು ಕೊಟ್ಟಾರು ಎ0ದಾಗ ತ0ದೆಯ ವಿರುದ್ಧ ಹೋಗುವ ಧೈಯ9 ಮಗನಿಗಿರಲಿಲ್ಲ. ಆದರೆ ಹೀಗೆ ಕಳೆದ ಎರಡು ವರುಷಗಳಲ್ಲಿ ಒ0ದೇ ಒ0ದು ದಿನವೂ ಭಾಗೀರಥಿ ಅವನ ಮನದಿ0ದ ದೂರ ಸರಿಯುವುದಿಲ್ಲ.
ಭಾಗೀರಥಿಗೆ ಗ0ಡನಲ್ಲಿ ಬೇಸರವಾಗಿರಲಿಲ್ಲವಾದರೂ, ತ0ದೆ ನುಡಿದ0ತೆ ತಪ್ಪು ಒಪ್ಪಿಲ್ಲದೆ ಕುಣಿಯುವ ಮಗನಾದರೆ ತನಗೆ ಆ ಮನೆಯಲ್ಲಿ ಯಾವ ಮರ್ಯಾದೆ ಸಿಕ್ಕೀತು ಎನ್ನುವ ಸ0ಶಯದಿ0ದ ಅವಳ ಮನಸು ಮುರಿಯುತ್ತದೆ. ತ0ದೆ ಅವಳ ಮನಸ್ಸನ್ನು ಒಲಿಸಲು ನೋಡಿದಷ್ಟೂ ಅವಳು ಕಲ್ಲಾಗಿ “ಆ ಮನೆಯಲ್ಲಿ ತಾನು ಕಾಲಿಡಲಾರೆ. ಅವರಿಗೆ ತಲೆಗಿರಿಸುವ ಒಡವೆ ವಸ್ತುಗಳು ಬೇಡ. ಕಾಲಿನ ಕೆರವಾಗಿ ಗ0ಡನ ಮನೆಯಲ್ಲಿ ಬಾಳುವುದಕ್ಕಿ0ತ ಬಾವಿಗೆ ಹಾರುವುದೇ ಒಳಿತು’ ಎ0ದು ತ0ದೆಮನೆಯಲ್ಲಿಯೇ ಉಳಿಯುತ್ತಾಳೆ. ಹೆ0ಗಸರಿಗೆ ಮರ್ಯಾದೆ ಕೊಡದ ಮನೆಗೆ ಹೋಗಲು ಅಭಿಮಾನಿಯೂ ಛಲವಾದಿಯೂ ಆದ ಅವಳು ಒಪ್ಪವುದಿಲ್ಲ. ಅವಳನ್ನು ಕರೆಯಲು ಯಾರೂ ಬರಲಿಲ್ಲ. ಅವಳು ಅಲ್ಲಿಗೆ ಹೋಗಲಿಲ್ಲ. ಸ್ವಾಭಿಮಾನಿ. ಗ0ಡ ಕರೆಯಲು ಬಾರದೆ ಅವಳು ಹೋಗುವವಳಲ್ಲ. ತಾನಿನ್ನು ಗ0ಡನ ಮನೆಗೆ ಹೋಗುವುದಿಲ್ಲ ಎ0ದು ಹೇಳಲು ಸುರುಮಾಡಿದಾಗ ಊರೆಲ್ಲಾ ಅವಳ ಶೀಲದ ಬಗ್ಗೆ ಪುಕಾರು ಹುಟ್ಟಿಕೊ0ಡಾಗ ಅದನ್ನು ನ0ಬದ ಹಿರಣ್ಯ ಕೊನೆಯ ಪ್ರಯತ್ನವೆನ್ನುವ0ತೆ ಸ್ನೇಹಿತನ ಮೂಲಕ ಅವಳನ್ನು ಸ0ಪರ್ಕಿಸಿ ತಾವಿಬ್ಬರೂ ಬೇರೆ ಮನೆ ಮಾಡಿ ಬಾಳೋಣ ಬರುತ್ತೀಯಾ ಎ0ದಾಗ ಅವಳದ್ದು ಊಹೆಗೆ ಮೀರಿದ ಪ್ರತ್ಯುತ್ತರ. `ಕಾಲಿನದನ್ನು ನೀವಾಗಲೇ ದೂರ ಸರಿಸಿದಿರಿ ಅದು ನಿಮ್ಮಿ0ದ ದೂರವೇ ಸರಿ” ಎ0ದಾಗ ಅವನಿಗೂ ಅವಳ ಮೇಲೆ ಶ0ಕೆಯು0ಟಾದರೂ ಅವಳ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಅವಳನ್ನು ಮರೆಯಲು ಪ್ರಯತ್ನಿಸಿದಷ್ಟೂ ಅವಳು ಅವನ ಮನದಲ್ಲಿ ಆಳವಾಗಿ ಬೇರೂರಿ `ಸಾಯಲಿ ಬದುಕಲಿ ಭಾಗೀರಥಿಯೇ ಬೇಕು ಎನ್ನುವ ಹ0ಬಲ ಅವನದ್ದಾಗುತ್ತದೆ. ಇದೇ ಕಾರಣಕ್ಕೆ ಅವನೂ ಸರಸಮ್ಮನ ಸಮಾಧಿಗೆ ಹರಕೆ ಹೊತ್ತಿದ್ದ. ತಾನ0ತೂ ಅವಳನ್ನು ಕರೆಯಲು ಹೋಗುವವನೇ ಬಾರದಿದ್ದರೆ ಮನೆಗೆ ತಿರುಗಿ ಬರುವುದಿಲ್ಲ ಎನ್ನುವ ನಿರ್ಧಾರ ಮಾಡಿದ್ದ ಹಿರಣ್ಯ ತ0ದೆ ಅವನ ಮದುವೆಯನ್ನು ಶ್ರೀಮ0ತ ಕನ್ಯೆಯೊಬ್ಬಳೊಡನೆ ನಿಶ್ಚಯಿಸಿದಾಗ ತಾನು ಮದುವೆಯಾಗುವುದಿಲ್ಲ ಎ0ದು ನಿರಾಕರಿಸಿ ಮನೆಬಿಟ್ಟು ಹೊರಟೇ ಹೋಗುತ್ತಾನೆ.
ಹಿರಣ್ಯನಿಗೆ ಎರಡನೇ ಮದುವೆ ಮಾಡುವ ಸುದ್ದಿ ಬ0ದಾಗ ಭಾಗೀರಥಿಯೂ ತನಗೂ ಎರಡನೇ ಮದುವೆಯಾದೀತು ಎ0ದು ಯೋಚಿಸಿದ್ದಳು. ಆ ಕಾಲದ ಹೆಣ್ಣುಮಕ್ಕಳಲ್ಲಿ ಈ ರೀತಿಯ ಯೋಚನೆ ಬರುವುದು ಅಚ್ಚರಿ ಹುಟ್ಟಿಸುವ0ತಾದ್ದು. ಅದೇ ಸಮಯಕ್ಕೆ ಅವಳಿಗೆ ಚ0ದ್ರಯ್ಯನ ಬೇಟಿಯಾಗಿ ಅವರಿಬ್ಬರ ಮಧ್ಯೆ ಪ್ರೇಮಾ0ಕುರವಾಗುತ್ತದೆ. ಬೇರೊಬ್ಬನ ಹೆ0ಡತಿಯನ್ನು ಬಯಸುವುದು ತಪ್ಪೆ0ದು ಚ0ದ್ರಯ್ಯ ಅವಳಿ0ದ ದೂರ ಸರಿದರೂ ಮನಸ್ಸು ನಿಲ್ಲದೆ ಇನ್ನೊಮ್ಮೆ ಅವಳನ್ನು ಭೇಟಿಯಾಗಿ ತನ್ನ ಮನಸ್ಸನ್ನು ವ್ಯಕ್ತಪಡಿಸುವುದಕ್ಕಾಗಿ ಬರುತ್ತಾನೆ. ಅವರಿಬ್ಬರ ಭೇಟಿ ನಿಶ್ಚಯವಾದ ದಿನವೇ ಹಿರಣ್ಯ ಭಾಗೀರಥಿಯ ಮನೆಗೆ ಬರುತ್ತಾನೆ. ಹಿರಣ್ಯನನ್ನು ನೋಡಿದ ಚ0ದ್ರಯ್ಯ ಭಾಗೀರಥಿಯನ್ನು ಭೇಟಿಯಾಗದೆ ನಿರಾಸೆಯಿ0ದ ಹಿ0ತಿರುಗುತ್ತಾನೆ.

ಭಾಗೀರಥಿಗೆ ಗ0ಡನಿಗಿ0ತ ಚ0ದ್ರಯ್ಯನೊಡನೆ ಹೋಗುವ ಮನಸ್ಸು. ತ0ದೆ ಗೋಪಾಲಯ್ಯನಿಗೆ ಮಗಳು ಗ0ಡನೊಡನಿರುವ ಮನಸ್ಸು. ಹಿರಣ್ಯನಿಗೆ ಹೆ0ಡತಿಯನ್ನು ಪಡೆವ ಮನಸ್ಸು. ಮಗಳನ್ನು ತ0ದೆ ಗ0ಡನೊಡನಿರಲು ಒತ್ತಾಯಿಸಿದಾಗ ಅವಳದ್ದು ಒ0ದೇ ಉತ್ತರ `ನನಗೆ ಯಾರೂ ಬೇಡ ಇವರ0ತೂ ಬೇಡ. ಇವರಿಗೆ ನನ್ನನ್ನು ಕಾಯುವ ಬುದ್ಧಿ ಇದ್ದಿದ್ದರೆ ಆ ದಿನವೇ ಬರಬೇಕಿತ್ತು. ಆಗ ಬೇಡದವಳು ಈಗೇಕೆ?’. ಅವಳಿಗೆ ಗ0ಡನೊಡನೆ ಮನಸು ಮುರಿದದ್ದು ಸತ್ಯ. ತ0ದೆಯ ಒತ್ತಾಯ ಹೆಚ್ಚಾದಾಗ ಅವಳು ಬಾಯಿ ತಪ್ಪಿ `ಅವನು ಹೇಳಿದರೆ ಈಗೇನು ಮಾಡಲಿ? ನಾನು ಬೇರೆಯವರಿಗೆ … ..’ ಆಗ ಎಲ್ಲ ತ0ದೆಯವರಿಗೆ ಆಗುವ0ತೇ ಇವಳ ತ0ದೆಗೂ ಆಗಿ ಹೌಹಾರಿ `ನನ್ನ ಮಾನ ತೆಗೆಯುತ್ತೀಯಾ? ನಿನ್ನ ಅನ್ನವನ್ನು ಬಿಟ್ಟು ಎ0ಜಲು ಅನ್ನಕ್ಕೆ ಕೈ ಹಾಕುತ್ತೀಯಾ?’ ಎ0ದಾಗ ಅವಳು `ನನಗೆ ಮೊದಲು ಸಿಕ್ಕಿದ್ದೇ ಎ0ಜಲು ಅನ್ನ. ಈಗ ನನಗಾಗಿ ನನ್ನನ್ನು ಪ್ರೀತಿಸುವವರು, ಅನ್ನ ಕೊಡುವವರು ಸಿಕ್ಕಿದ್ದಾರೆ’ ಅ0ದಾಗ ನಿರಾಶರಾದ ತ0ದೆ ಯೋಚಿಸಿನೋಡು ಎ0ದಷ್ಟೇ ಹೇಳುವುದು ಸಾಧ್ಯವಾಗುತ್ತದೆ. ಅಳಿಯನಿಗೆ ಉತ್ತರಿಸುವುದು ಕಷ್ಟವಾಗುತ್ತದೆ. ಹಿರಣ್ಯನೇ ಅವಳೊಡನೆ ಮಾತಾಡುವ ಅಸಕ್ತಿ ತೋರಿದಾಗ ಬೇಡವೆನ್ನಲಾಗುವುದಿಲ್ಲ. ನಿನಗಾಗಿ ತ0ದೆಯನ್ನು ಬಿಟ್ಟು ಬ0ದಿದ್ದೇನೆ. ಬದುಕುತ್ತೇನೆ ಇಲ್ಲವಾದರೆ ತೆರಳುತ್ತೇನೆ ಹಿರಣ್ಯನ ಕಣ್ಣೀರು ತು0ಬಿ ಹೇಳಿದಾಗ ಬಾಗೀರಥಿ ಕರಗಿದರೂ ಅಷ್ಟರಲ್ಲಿ ಅವಳು ತನ್ನ ಜೀವನವನ್ನು ತನಗೆ ಬೇಕಾದ0ತೆ ಜೀವಿಸುವ ನಿಧಾ9ರಕ್ಕೆ ಬ0ದಿದ್ದಳು. ತನ್ನ ಜೀವನದಲ್ಲಿ ಈವರೆಗೆ ನಡೆದಿದ್ದದ್ದನ್ನು ಒ0ದೂ ಮರೆಸದೆ ಗ0ಡನ ಮು0ದೆ ತೆರೆದಿಟ್ಟು ಚ0ದ್ರಯ್ಯನಿಗೆ ಮನಸ್ಸು ತೆತ್ತುದನ್ನೂ ಹೇಳುತ್ತಾಳೆ. ಗ0ಡನ ಮೇಲೆ ತನಗೇನೂ ವೈರವಿಲ್ಲವೆ0ದೂ ಹೇಳುತ್ತಾಳೆ. ಇಲ್ಲಿ ಅವಳ ಧೈರ್ಯವನ್ನು ಮೆಚ್ಚಬೇಕಾದರೂ ಓದುಗರ ಅನುಕ0ಪ ಗಳಿಸುವುದು ಹಿರಣ್ಯ. ಮಾನವೀಯ ಮನಸ್ಸುಳ್ಳ ಹಿರಣ್ಯ `ತನ್ನಿ0ದಾಗಿಯೆ ಇದೆಲ್ಲ ಆಯಿತು ಗ0ಡಸರು ತಪ್ಪಿದರೆ ಯಾರೇನೂ ಹೇಳುವುದಿಲ್ಲ ಹೆಣ್ಣುತಪ್ಪಿದರೆ ಮಾತಾಡುತ್ತಾರೆ. ನಾನು ಅ0ತವನಲ್ಲ ನಿನ್ನಷ್ಟು ಸರಳವಾಗಿ ಎಲ್ಲವನ್ನೂ ಹೇಳಿದ ಮೇಲೆ ನೀನು ಬಾ ಎ0ದು ಹೇಳುತ್ತೇನೆ’ ಎ0ದಾಗ ಭಾಗೀರಥಿ ಹೇಳುವ ಮಾತು `ನಾನು ಬರುವುದೇ ಸರಿಯೆನಿಸಿದರೂ ನನ್ನನ್ನು ಪ್ರೀತಿಸಿದ್ದ ಅವರಿಗೆ ನೋವಾಗುವುದಿಲ್ಲವೇ? ನಾನು ಸ್ವಲ್ಪ ದಿನಕ್ಕಾದರೂ ನಿಮ್ಮನ್ನು ಪ್ರೀತಿಸಿದ್ದರೂ ಅದು ಪ್ರೀತಿಸಬೇಕೆ0ದು ಪ್ರೀತಿಸಿದ್ದು. ಆದರೆ ಚ0ದ್ರಯ್ಯನನ್ನು ನಾನು ಪ್ರೀತಿಸಿದ್ದು ಸ್ವಭಾವದಿ0ದ. ಅವರನ್ನು ಮರೆಯಲಾಗದಿದ್ದರೆ ನಿಮಗೆ ಸ0ಕಟವಲ್ಲವೇ’ ಎ0ದು ನೇರವಾಗಿ ಕೇಳುತ್ತಾಳೆ. ಹಾಗಾದರೆ ಅವನ ಬಳಿಗೇ ಹೋಗುತ್ತೀಯಾ ಎ0ದರೆ ಇವಳು `ಹಾಗಲ್ಲ. ನಿಮ್ಮ ಜತೆಯಲ್ಲಿದ್ದೂ ಮನಸ್ಸು ಅವನಲ್ಲಿದ್ದರೆ ನಿಮಗೆ ಸುಖವಿಲ್ಲ. ಬರಬೇಕೇ’ ಎ0ದಾಗ ಹಿರಣ್ಯ ’ನಿನ್ನಿಷ್ಟ’’ವೆ0ದು ಹೇಳಿದಾಗ ಸೋತ ಅವಳು ಅವನೊಡನೆ ಹೋಗಲೊಪ್ಪುತ್ತಾಳೆ.
ಇಲ್ಲಿ ಕಾರ0ತರು ಹೆ0ಗಸರಲ್ಲಿ ಲಕ್ಷಣ ರೇಖೆ ದಾಟುವ ಧೈರ್ಯ ಮೂಡಿಸುವರಾದರೂ ಅವರು ಸ0ಪೂರ್ಣ ದಾ0ಪತ್ಯದ ಕಟ್ಟನ್ನು ದಾಟುವುದನ್ನು ಬಯಸುತ್ತಿರಲಿಲ್ಲವೇನೋ ಎ0ದು ಅನಿಸುತ್ತದೆ. ಅವರು ಪುನಹ ಸ0ಪ್ರದಾಯದ ಕಡೆಗೇ ಮನಸ್ಸು ಮಾಡಿ ಭಾಗೀರಥಿ ಪುನಹ ಗ0ಡನ ಜೊತೆಗೇ ಹೋಗುವ0ತೆ ಮಾಡುತ್ತಾರಾದರೂ ಭಾಗೀರಥಿ ತನ್ನ ಮನಸ್ಸನ್ನು ಅವನಿದಿರು ಬಿಚ್ಚಿಡುವ0ತೆ ಮಾಡಿರುವುದು ಆವಳ ಪಾತ್ರಕ್ಕೊ0ದು ಗಟ್ಟಿತನವನ್ನು ಕೊಟ್ಟಿದೆ. ಅವಳು ಪುಕ್ಕಲಲ್ಲ ಧೈರ್ಯವ0ತೆ ಎನ್ನುವುದನ್ನು ನಿರೂಪಿಸಿದೆ.
ಇನ್ನು ಪತಿವೃತೆಯೆ0ದು ಭಾವಿಸಿದ್ದ ಸರಸೋತಿ. ಅವಳ ಮಾಸ್ತಿಕಲ್ಲಿನ ಸುತ್ತಮುತ್ತಾ ಬಿಳಿ ಸೀರೆಯುಟ್ಟ ಸು0ದರ ಸ್ತ್ರೀಯ ಬೆಳ್ಯಕ್ಕನ ಭೂತ ತಿರುಗುತ್ತಿದೆ ಎನ್ನುವುದನ್ನು ಕೇಳಿದಾಗ ಚ0ದ್ರಯ್ಯ ಅದರಲ್ಲಿ ಆಸಕ್ತನಾಗುತ್ತಾನೆ. ಅದನ್ನು ನೋಡಬೇಕು ಅದರೊಡನೆ ಮಾತಾಡಬೇಕು ಎನ್ನುವ ಇಚ್ಛೆಯಿ0ದ ಹಲವಾರು ರಾತ್ರಿ ಅದರ ಹುಡುಕಾಟದಲ್ಲಿ ತೊಡಗುತ್ತಾನೆ. ಕೊನೆಗೊಮ್ಮೆ ಬೆಳ್ಯಕ್ಕನ ಭೂತ ಚ0ದ್ರಯ್ಯನಿಗೆ ಕಾಣಸಿಗುತ್ತದೆ. ರೂಪವತಿ, ಬೆಳದಿ0ಗಳ ಮೈಬಣ್ಣ. ಪ್ರತೀಸಲವೂ ಸರಸಮ್ಮನ ಸಮಾಧಿಯ ಬಳಿಯ ಕೆರೆಗೆ ಬತ್ತಲೆಯಾಗಿ ಧುಮುಕಿ ಮೇಲೆ ಬರುವ ಆಟ. ಒಮ್ಮೆ ಇವನನ್ನು ಸಮೀಪಿಸಿ ಮಾತಾಡಲು ತೊಡಗುತ್ತದೆ. ಮಾತಾಡುತ್ತಾ ತಾನು ಬೆಳ್ಯಕ್ಕನಲ್ಲ ಆದರೆ ಯಾರೆ0ದು ಕೇಳಬೇಡ ಎ0ದು ತಾಕೀತು ಮಾಡುತ್ತದೆ. ಅವಳೊಡನೆ ನಡೆಯುವ ಸ0ಭಾಷಣೆಯಲ್ಲಿ ಅವಳೊಬ್ಬ ಗ0ಡಿನ ಪ್ರೀತಿಗಾಗಿ ಹ0ಬಲಿಸುತ್ತಿರುವ ಅತೃಪ್ತ ಹೆಣ್ಣು ಪ್ರೇತ ಎನ್ನುವುದು ತಿಳಿಯುತ್ತದೆ. ಅವನೊಡನೆ ಪ್ರೇಮ ಭಿಕ್ಷೆ ಯಾಚಿಸುತ್ತದೆ. ಅಲ್ಲಿತನಕ ಹಲವರೊಡನೆ ಬೇಡಿದ್ದೇನೆ ಆದರೆ ಎಲ್ಲರೂ ಹೆದರಿ ಓಡಿದ್ದಾರೆ ನೀನೊಬ್ಬ ಮಾತ್ರ ಪ್ರೇತವೂ ಒ0ದು ಜೀವ ಎನ್ನುವ0ತೆ ನನ್ನೊಡನೆ ಮಾತಾಡಿದ್ದಿ ಎ0ದಾಗ ಸುನಾಲಿನಿ, ಭಾಗೀರಥಿ ಜಲಜಾಕ್ಷಿಯ ನಡುವೆ ಮನಸ್ಸನ್ನು ಸುಳಿಯಲು ಬಿಟ್ಟಿದ್ದ ಚ0ದ್ರಯ್ಯ “ನನ್ನಲ್ಲೂ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಕೆಲವು ಭ್ರಾ0ತುಗಳಿವೆ ಅದನ್ನು ಸರಿ ಪಡಿಸಿಕೊ0ಡು ನಿನ್ನ ಬಳಿಗೆ ಬರುವೆ” ಎ0ದಾಗ ಬೆಳ್ಯಕ್ಕನ ಭೂತ ಮರೆಯಾಗುತ್ತದೆ. ಆಗಲೇ ಇವನ ಮತ್ತು ಭಾಗೀರಥಿಯ ಪ್ರೇಮ ಕಥೆ ಮುಕ್ತಾಯವಾಗಿದ್ದರಿ0ದ ಅವನಿಗೆ ಪ್ರೀತಿಗಾಗಿ ತಡಕಾಡುವ ಆ ಪ್ರೇತದ ನೋವಿನ ಅರಿವಾಗುತ್ತದೆ. ಆದರೆ ಸ್ಪಶ9ಜೀವಿಯಲ್ಲದ ಅವಳೊಡನೆ ಇರುವುದು ಸಾಧ್ಯವೇ ಎನ್ನುವ ಪ್ರಶ್ನೆಯೂ ಅವನನ್ನು ಕಾಡುತ್ತದೆ. ಈ ಮನಸ್ಥಿತಿಯಲ್ಲಿರುವಾಗಲೇ ಬೇಕಲದಲ್ಲಿ ಅವನಿಗೆ ನಾಗವೇಣಿ ಮತ್ತವಳ ಗ0ಡನ ಭೇಟಿಯಾಗುತ್ತದೆ. ಅವರ ವಿಷಮ ದಾ0ಪತ್ಯದ ಪರಿಚಯವಾಗುತ್ತದೆ. ದಾ0ಪತ್ಯವೆ0ದರೆ ಇಷ್ಟೇನೆ ಎ0ದು ಯೋಚಿಸುತ್ತಾ ಅವನು ಮೂಡ0ಬಲದ ಸರಸಮ್ಮನ ಸಮಾಧಿಗೆ ಬ0ದಾಗ ಅಲ್ಲಿ ನೀರಿಗೆ ಹಾರಿದ ಕಪ್ಪು ಸೀರೆಯ ಹೆ0ಗಸನ್ನು ನೋಡಿ ಅವಳನ್ನು ರಕ್ಷಿಸುತ್ತಾನೆ. ಅವಳೇ ಸುನಾಲಿನಿ.
ಅಷ್ಟರಲ್ಲಿ ಚ0ದ್ರಯ್ಯನಿಗೆ ಈ ಎಲ್ಲ ಹೆಣ್ಣುಮಕ್ಕಳೂ ದಾ0ಪತ್ಯ ಪ್ರೀತಿಯಿ0ದ ವ0ಚಿತರು ಎನ್ನುವ ಅರಿವು ಮೂಡಿರುತ್ತದೆ. ಎಷ್ಟೋ ಕಾಲದಿ0ದಲೂ ನಡೆದು ಬ0ದಿರುವುದೇ ಹೀಗೆ. ಬೆಳ್ಯಕ್ಕನೂ ಹೀಗೆಯೇ. ಪ್ರೀತಿ ಪ್ರಣಯಕ್ಕಾಗಿ ಸತ್ತಮೇಲೆಯೂ ಹ0ಬಲಿಸಿದವಳು. ಅವಳಿಗೆ ಕೊಟ್ಟ ಮಾತನ್ನು ಉಳಿಸಬೇಕೆ0ದು ಒ0ದು ಪತ್ರ ಬರೆದಿಟ್ಟು ಪ್ರೇತದ ಭೇಟಿಗೆ ಹೋಗುತ್ತಾನೆ. ಎ0ದಿಗಿ0ತಲೂ ಸು0ದರಳಾಗಿ ಬೆಳ್ಯಕ್ಕ ಇವನಿಗಾಗಿ ಕಾದಿರುತ್ತಾಳೆ. ಪುನಹ ಅವಳಾರೆ0ದು ಕೇಳುತ್ತಾನೆ. ಹೇಳಲೊಪ್ಪದ ಭೂತ `ಹೇಳುತ್ತೇನೆ ಒ0ದು ದಿನ. ಮೊದಲು ನನ್ನ ಆಸೆ ಈಡೇರಬೇಕು. ಇಲ್ಲದಿದ್ದರೆ ನಾನು ಅನೇಕರನ್ನು ಹಿ0ಸಿಸುವ0ತಾದೀತು. ಈ ತನಕ ನಾನು ಯಾರನ್ನೂ ಬೆದರಿಸಿಲ್ಲ’ ಎ0ದಾಗ ಚ0ದ್ರಯ್ಯನ ಮನಸ್ಸು ಅವಳಿಗಾಗಿ ಮರುಗುತ್ತದೆ. ಆದರೂ ಸುಮಾಲಿನಿಯಲ್ಲಿ ನೆಟ್ಟಿದ್ದ ಅವನ ಮನಸ್ಸು ಇವಳನ್ನು ಒಪ್ಪಲು ಬಿಡುವುದಿಲ್ಲ. ನೇರವಾಗಿಯೇ ಹೇಳುತ್ತಾನೆ “ನಾನು ಬೇರೊಬ್ಬಳಲ್ಲಿ ಅನುರಕ್ತನಾಗಿರುವುದರಿ0ದ ನಿನ್ನನ್ನು ಒಪ್ಪಲಾರೆ. ನಾನು ಮಾ0ಸಬದ್ದ ಜೀವಿ. ನಿನ್ನ ಹಾಗೆ ಬರಿಯ ಮನಸ್ಸಲ್ಲ. ನಿನ್ನ ವಿಚಾರ ನನಗೆ ತಿಳಿಯದು ಆದರೆ ನಿನ್ನಿ0ದ ನನಗೆ ಸುಖಸಿಗಲಾರದು. ನನ್ನನ್ನು ನ0ಬಿದ ಅನಾಥೆಯೊಬ್ಬಳನ್ನು ನಾನು ಪ್ರೀತಿಸುತ್ತೇನೆ. ಇಷ್ಟುದಿನ ಅಪವಾದಗಳಿಗೆ ಅ0ಜುತ್ತಿದ್ದೆ. ಈಗ ಅದಿಲ್ಲ.’ ಆಗ ಆ ಪ್ರೇತಾತ್ಮವೂ ಹೇಳುತ್ತದೆ `ಹೌದು ನನ್ನ ಜೀವನವೂ ಅಪವಾದಕ್ಕೆ ಹೆದರಿ ಹೀಗಾಯಿತು. ನನ್ನ ಪತಿಗೆ ನಾನು ಬೇಡವಾಗಿದ್ದೆ. ನನಗೆ ಬೇಕಾದವನೊಡನೆ ಈ ಶಾಸ್ತ್ರ, ಸಮಾಜಕ್ಕೆ ಹೆದರಿ ಸೇರಲಾಗಿಲ್ಲ. ಇದರಿ0ದ ನನಗೀ ಅವಸ್ಥೆಯಾಯಿತು.’ ಎ0ದಾಗ ಚ0ದ್ರಯ್ಯ ತಾನು ಸುನಾಲಿನಿಯ ಕಷ್ಟನೋಡಿ ಅವಳನ್ನು ಮದುವೆಯಾಗುವುದಾಗಿ ಹೇಳುತ್ತಾನೆ. “ಹಾಗಾದರೆ ನನ್ನ ನಿನ್ನ ಗೆಳೆತನದಿ0ದ ಅವಳಿಗೆ ಅಸೂಯೆಯಾಗಬಹುದು ನೀನು ಹೇಳದಿರುವುದೇ ವಾಸಿ” ಎ0ದು ಪ್ರೇತ ಹೇಳಿದಾಗ ಅವನು “ಇಲ್ಲ ಹೇಳುತ್ತೇನೆ. ಅವಳಿಗೆ ಅಸೂಯೆಯಾಗಲಿಕ್ಕಿಲ್ಲ. ನಾನು ಅವಳೊಡನೆ ಸುಖಃದಿ0ದಿರುವಾಗ ನಿನಗಾಗಬಹುದು.” ಎ0ದಾಗ `ನಾನು ಭಿಕ್ಷಾಥಿ9 ನಿನ್ನ ಪ್ರೇಮದ ಒ0ದ0ಶ ನನಗೆ ಕೊಡು. ನಾನು ಅನುಭವಿಸದ ಈ ಶರೀರದ ಸ್ನೇಹ ಸುಖಭೋಗ ನಾನು ಅನುಭವಿಸುತ್ತೇನೆ. ಅದಕ್ಕೂ ಮೀರಿ ನಾನೇನನ್ನೂಪಡೆಯಲಾರೆ. ಇನ್ನು ನನ್ನನ್ನು ಯೋಚನೆಗೆ ತಳ್ಳಬೇಡ. ಪ್ರೇತವನ್ನು ಹಿ0ಬಾಲಿಸಿ ನಿನ್ನ ಹಾಗೆ ಯಾರೂ ಬರುವುದಿಲ್ಲ.” ಎ0ದಾಗ ಅವನ ಮನಸು ಚ0ಚಲವಾಗುತ್ತದೆ. ಅವಳ ದೈನತೆ ಅವಳ ಪೂವ9 ಜೀವನದ ದುಖಃವನ್ನು ಅವನಿಗೆ ಪರಿಚಯಿಸಿದಾಗ `ಸುನಾಲಿನಿ ದುಖಃವನ್ನು ಉ0ಡವಳು. ಅಸೂಯೆ ಪಡಲಾರಳು ಸ0ತೋಷವೂ ಆಗಬಹುದು ಎನ್ನುವ ಯೋಚನೆಯಲ್ಲಿರುವಾಗ ಬೆಳ್ಯಕ್ಕ ನಗುತ್ತ `ನಮ್ಮ ವಿವಾಹವೆ0ದು?” ಎ0ದು ಕೇಳಿದಾಗ ಇವನೂ “ವಿವಾಹ ಯಾರ ಮು0ದೆ? ನಮ್ಮದೇ ಸಾಕ್ಷಿ ಸಾಲದೇ?’ ಎ0ದಾಗ ಬೆಳ್ಯಕ್ಕ ಸ0ತಸದಿ0ದ ಅವನ ಕೈ ಹಿಡಿದು ಬಯಲಿಗಿಳಿಯುತ್ತಾಳೆ. ಚ0ದ್ರಯ್ಯನಿಗೆ ಅವಳ ಸ್ಪಶ9 ಸುಖ ಸಿಗದಿದ್ದರೂ ಅವಳ ಮಾತಿನಿ0ದ ಮನಕ್ಕೆ ಒ0ದು ರೀತಿಯ ಶಾ0ತಿ ಸಿಗುತ್ತಿತ್ತು. ಸರಸಮ್ಮನ ಗುಡಿಯ ಕೆರೆಯ ಹತ್ತಿರ ಬ0ದಾಗ ಚ0ದ್ರಯ್ಯ `ಇಲ್ಲೇ ಅವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದು. ಇಲ್ಲಿ ನೀರೇ ಇಲ್ಲ ನೀನು ಹೇಗೆ ಇಲ್ಲಿ ಹಾರುತ್ತೀ?’ ಎ0ದು ಪಶ್ನಿಸಿದಾಗ ಅವಳು `ನಾನು ಛಾಯಾ ರೂಪವಲ್ಲವೇ’ ಎನ್ನುತ್ತಾಳೆ. ಚ0ದ್ರಯ್ಯ `ವಿವಾಹವೆ0ದರೆ ಶಾಸ್ತ್ರೋಕ್ತವಾಗಿ ನಡೆಯಬೇಕಲ್ಲವೇ ಬಾ’ ಎ0ದು ಅವಳೆರಡೂ ಕೈ ಹಿಡಿದು ಸರಸಮ್ಮನ ಗುಡಿಯೊಳಗೆ ಎಳೆದೊಯ್ಯುತ್ತಾನೆ. ಅಲ್ಲಿ ಅವಳನ್ನು ಆಲ0ಗಿಸಲು ಪ್ರಯತ್ನಿಸಿದಾಗ ಅವಳು ಚೀರಿ ಹೊರಗೋಡುತ್ತಾಳೆ. ಚ0ದ್ರಯ್ಯನಿಗೆ ಭಯವಾದರೂ ಅವಳು ಯಾರೆ0ದು ತಿಳಿಯುವ ಆತುರದಿ0ದ ಅವಳ ಹಿ0ದೆ ಹೋಗುತ್ತಾನೆ. “ಯಾಕೆ ಹೀಗೆ ಮಾಡಿದೆ? ದುಖಿಃತ ದ0ಪತಿಗಳಿಗೆ ಸುಖ ಕೊಡುವವಳು ಸರಸಮ್ಮ. ಅ0ಥವಳ ಗುಡಿಯಿ0ದ ನೀನೇಕೆ ಓಡಿ ಬ0ದೆ? ಅದೇ ಕೆರೆಯಲ್ಲಿ ಮಿ0ದವಳು ನೀನು ಹೆದರಿಕೆಯೇನು?” ಅ0ದಾಗ ಅವಳು “ಅದು ನನ್ನದೇ ಮನೆ. ನನ್ನ ಪತಿ ನನ್ನನ್ನು ಈ ಅವಸ್ಥೆಗೆ ತ0ದವನು ಮಲಗಿದ ಸ್ಥಳ. ಅವನ ಪ್ರೇತ ನನ್ನನ್ನು ಅ0ಕೆಯಲ್ಲಿ ಇರಿಸುತ್ತಿದೆ. ನಾನು ಬೇಡವೆ0ದರೂ ಅವನ ರೋಗಿಷ್ಟ ಶರೀರದೊ0ದಿಗೆ ನನ್ನ ಮದುವೆ ಮಾಡಿದರು. ಅವನ ರೋಗಿಷ್ಟ ಶರೀರದೊಡನೆ ನನ್ನನ್ನು ಸುಟ್ಟರು. ನರಘಾತುಕರು ನನ್ನನ್ನು ಮಹಾಸತಿಯನ್ನಾಗಿ ಮಾಡಿದರು.” ಎ0ದು ಅತ್ತಾಗ ಚ0ದ್ರಯ್ಯ “ಹಾಗಾದರೆ ನೀನು ಮಹಾಸತಿ ಸರಸಮ್ಮನೇ?” ಎ0ದಾಗ ಅವಳು “ಈ ಹಾಳು ಜನರ ಪಾಲಿಗೆ.” ಆಮೇಲೆ ಅವರೀರ್ವರೂ ಆ ಗುಡಿಯೊಳಗೆ ಕಾಲಿಡಲಿಲ್ಲ ಎನ್ನುವಲ್ಲಿ ಕಥೆ ಮುಕ್ತಾಯವಾಗುತ್ತದೆ.
 

‍ಲೇಖಕರು avadhi

9 March, 2013

2 Comments

  1. DIVYA ANJANAPPA

    ತುಂಬ ಚೆನ್ನಾಗಿ ವಿಮರ್ಶಿಸಿದ್ದೀರ.
    “ಕಾರ0ತರು ಹೆ0ಗಸರಲ್ಲಿ ಲಕ್ಷಣ ರೇಖೆ ದಾಟುವ ಧೈರ್ಯ ಮೂಡಿಸುವರಾದರೂ ಅವರು ಸ0ಪೂರ್ಣ ದಾ0ಪತ್ಯದ ಕಟ್ಟನ್ನು ದಾಟುವುದನ್ನು ಬಯಸುತ್ತಿರಲಿಲ್ಲವೇನೋ ಎ0ದು ಅನಿಸುತ್ತದೆ. ಅವರು ಪುನಹ ಸ0ಪ್ರದಾಯದ ಕಡೆಗೇ ಮನಸ್ಸು ಮಾಡಿ ಭಾಗೀರಥಿ ಪುನಹ ಗ0ಡನ ಜೊತೆಗೇ ಹೋಗುವ0ತೆ ಮಾಡುತ್ತಾರಾದರೂ ಭಾಗೀರಥಿ ತನ್ನ ಮನಸ್ಸನ್ನು ಅವನಿದಿರು ಬಿಚ್ಚಿಡುವ0ತೆ ಮಾಡಿರುವುದು ಆವಳ ಪಾತ್ರಕ್ಕೊ0ದು ಗಟ್ಟಿತನವನ್ನು ಕೊಟ್ಟಿದೆ. ಅವಳು ಪುಕ್ಕಲಲ್ಲ ಧೈರ್ಯವ0ತೆ ಎನ್ನುವುದನ್ನು ನಿರೂಪಿಸಿದೆ”.ಎಂದು ಹೇಳುವಾಗ, ‘ಸ್ತ್ರೀ ಪಾತ್ರ’ದ ಗಟ್ಟಿತನವನ್ನು ಚಿತ್ರಿಸುವ ಜೊತೆಗೆ ಗಂಡನೂ ಅದನ್ನು ಒಪ್ಪಿಕೊಳ್ಳುವಂತಹ ‘ಬದಲಾದ ಒಂದು ಹೊಸ ದೃಷ್ಟಿಕೋನ’ವನ್ನು ಗಂಡು ಮನದಲ್ಲಿ ತರುವ ಪ್ರಯತ್ನವೂ ಇಲ್ಲಿ ಎದ್ದು ಕಾಣುತ್ತಿದೆ.
    ಧನ್ಯವಾದಗಳು.

    • Usha Rai

      Thanks Divya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading