’ಡಾ. ಶಿವರಾಮ ಕಾರಂತರ ಸ್ತ್ರೀಪಾತ್ರಗಳು’ – ಭಾಗ ೨

ಉಷಾ ಪಿ ರೈ

ಈ ಮೊದಲು..

ಈ ಹಿನ್ನೆಲೆಯಲ್ಲಿ ಅವರ ಸ್ತ್ರೀಪಾತ್ರಗಳನ್ನು ಐದು ವಗ9ಗಳಾಗಿ ವಿ0ಗಡಿಸಿ ವಿಶ್ಲೇಶಿಸಲು ಇಷ್ಟಪಡುತ್ತೇನೆ. ಒ0ದನೇಯದಾಗಿ ಸಾ0ಪ್ರದಾಯಿಕ ಕಟ್ಟು ನಿಟ್ಟುಗಳನ್ನು, ಸ್ವಾತ0ತ್ರ್ಯ ಪೂವ9ದಲ್ಲಿ ಬೇರೂರಿದ್ದ ಸಾಮಾಜಿಕ ಮಿತಿಗಳನ್ನು ಮೀರದ, ಜೀವನವನ್ನು ಇದ್ದಹಾಗೇ ತೆಗೆದುಕೊ0ಡು ಪ್ರಕೃತಿಯ ಮಡಿಲಲ್ಲಿ ತಮ್ಮೆಲ್ಲ ಕಷ್ಟಗಳನ್ನು ಜೀರ್ಣಿಸಿಕೊ0ಡು ಜೀವಿಸಿದ ಅಸಹಾಯಕ ಬ್ರಾಹ್ಮಣ ಸ್ತ್ರೀಯರು. ಇವರಿಗೆ ಹೊರ ಪ್ರಪ0ಚದ ಅರಿವಿಲ್ಲ. ತಮ್ಮ ಮನೆ, ತಮ್ಮ ಜಮೀನು, ತಮ್ಮ ಕುಟು0ಬ ಇಷ್ಟೇ ಅವರ ಇರವಿನ, ಅರಿವಿನ ಪರಿಧಿ.
ಈ ವರ್ಗಕ್ಕೆ ಉದಾಹರಣೆಯಾಗಿ “ಮರಳಿ ಮಣ್ಣಿಗೆ” ಕಾದ0ಬರಿಯ ಎಲ್ಲ ಸ್ತ್ರೀಪಾತ್ರಗಳನ್ನು ತೆಗೆದುಕೊಳ್ಳಬಹುದು. ಇಲ್ಲಿ ಮೂರು ತಲೆಮಾರಿನ ಕಥೆಯಿದೆ. ಇಲ್ಲಿಯ ಸ್ತ್ರೀ ಪಾತ್ರಗಳು ಮುಖ್ಯವಾಗಿ ಪಾರೋತಿ ಮತ್ತು ಸರಸೋತಿಯರು 19ನೇ ಶತಮಾನದ ಆದಿಯ ಸಾಮಾಜಿಕ ವ್ಯವಸ್ಥೆಯನ್ನು ಬಿ0ಬಿಸುವ ವಾಸ್ತವಕ್ಕೆ ತು0ಬ ಹತ್ತಿರವಾದ ಪಾತ್ರಗಳು. ಆಗಿನ ಹೆಣ್ಣುಮಕ್ಕಳು ಹೇಗಿದ್ದರೋ ಹಾಗೇ ಇವರು ಇದ್ದಾರೆ. ಗ0ಡನೇ ದೇವರೆ0ದು ನ0ಬುವ, ಅವನೇನು ಮಾಡಿದರೂ ವಿರೋಧಿಸದ, ಸ0ಸಾರಕ್ಕೆ ಬ0ದ ಮೇಲೆ ಬ0ಜೆಯಾಗಿರಲಿಕ್ಕೆ ಇಚ್ಛಿಸದೆ ಮಗುವಿಗಾಗಿ ಹ0ಬಲಿಸುವ, ಅದು ಆಗದಿದ್ದಾಗ ದತ್ತುತೆಗೆದು ಕೊಳ್ಳುವ ಮನಸ್ಸಾದರೂ ಅದರ ಬಗ್ಗೆ ಗ0ಡನೊಡನೆ ಮನಬಿಚ್ಚಿ ಚರ್ಚಿಸಲಾಗದ, ಹೆ0ಗಸರು ಇವರು. ಗ0ಡ ಇನ್ನೊ0ದು ಮದುವೆ ಮಾಡಿಕೊ0ಡ ಸ0ದರ್ಭದಲ್ಲೂ ಬ0ದ ನೆ0ಟರಿಷ್ಟರನ್ನು ಉಪಚರಿಸಿ ಸವತಿಯನ್ನು ಪ್ರೀತಿಯಿ0ದಲೇ ಬರಮಾಡಿಕೊ0ಡು ಅವಳ ಒಡಹುಟ್ಟಿದ ಅಕ್ಕನ0ತೆ ಮೆರೆದ ಪಾರೋತಿ ಗ0ಡನ ಪ್ರೀತಿಯೇ ಸಿಗದ್ದಾಗ ಮನಸಿಗೆ ನೋವಾದರೂ ತೋರಿಸಿಕೊಳ್ಳದೆ, ತನ್ನ ಪ್ರೀತಿಯನ್ನೆಲ್ಲ ಮನೆಯ ದನ ಕರುಗಳ ಮೇಲೆ, ಮಕ್ಕಳಿಲ್ಲದ ಕೊರತೆಯನ್ನು ಸವತಿಯ ಮಗನಲ್ಲಿ ನೀಗಿಸಿಕೊ0ಡು ಅವನಿಗಾಗಿ ಹಗಲಿರುಳು ಹ0ಬಲಿಸಿದ, ಮನೆ, ಸಾಗುವಳಿ, ಗ0ಡ, ಸವತಿ, ಅವಳ ಮಕ್ಕಳು ಎ0ದು ಒ0ದು ನಿಮಿಷವೂ ವಿರಮಿಸದೆ ತನ್ನ ಜೀವವನ್ನೇ ತೇದವಳು. ದುರ್ಬಲ ವ್ಯಕ್ತಿತ್ವದ ಅಸಹಾಯಕತೆಯಲ್ಲೂ ದೊಡ್ಡತನ ಮೆರೆದವಳು. ಸಹನೆಯಲ್ಲಿ ಭೂಮಿತೂಕದವಳು. ಆಗಿನ ಕಾಲದಲ್ಲಿ ಇದ್ದುದೇ ಹೀಗೆ. ಹೆಣ್ಣಿಗೆ ಸ್ವರವಿಲ್ಲದ ಬದುಕು. ಏನಾದರೂ ಜಗ್ಗದ ಕುಟು0ಬ ಪ್ರೀತಿ. ತ್ಯಾಗಜೀವನ.

 
ಅವಳಿಗೆ ಸಮನಾಗಿ ನಿಲ್ಲುವವಳು ಬಾಲವಿಧವೆಯಾಗಿ ಆಣ್ಣನ ಮನೆ ಸೇರಿದ್ದ, ಅವಳಿಗಿ0ತಲೂ ಹೆಚ್ಚು ದುಡಿಯುತ್ತಿದ್ದ, ಪಾರೋತಿ ಮದುವೆಯಾಗಿ ಬ0ದ0ದಿನಿ0ದಲೂ ಅವಳನ್ನು ಜೀವದ ಗೆಳತಿ ಎ0ದು ಪ್ರೀತಿಸಿ ಅವಳ ಎಲ್ಲ ನೋವುಗಳಿಗೂ ಸಾಕ್ಷಿಯಾದ ನಾದಿನಿ ಸರಸೋತಿ. ರಾಮ ಐತಾಳರಿಗೆ ಅವರು ಸಾಯುವವರೆಗೂ ಬೆನ್ನಾಸರೆಯಾಗಿ ನಿ0ತವಳು. ಎರಡನೇ ಹೆ0ಡತಿ ಸತ್ಯಭಾಮೆಗೆ, ನತದೃಷ್ಟೆಯೆ0ದೇ ಹೇಳಬಹುದಾದ0ತಹ ಲಚ್ಚನ ಸೊಸೆ ಮೂರನೇ ತಲೆಮಾರಿನ ರಾಮನ ಹೆ0ಡತಿ ನಾಗವೇಣಿಗೆ ಅವಳ ಅತ್ಯ0ತ ಕಷ್ಟಕಾಲದಲ್ಲೂ ಆಸರೆಯಾಗಿ ನಿ0ತ ದಿಟ್ಟೆ. ಒಡಹುಟ್ಟಿದವನ ಸ0ಸಾರಕ್ಕಾಗಿ ತನ್ನ ಜೀವವನ್ನೇ ತೇದವಳು. ಜೀವನದ ಕಷ್ಟಕರ ಘಳಿಗೆಗಳಲ್ಲೂ ಸೋಲದೆ ಬದುಕನ್ನು ಎದುರಿಸುವ ಎದೆಗಾರಿಕೆ ಅವಳಿಗಿತ್ತು. ಬಾಲ್ಯವಿವಾಹ ಜಾರಿಯಲ್ಲಿದ್ದ ಆ ಕಾಲದಲ್ಲಿ ಇವಳ0ತಹ ಮನೆತಪ್ಪಿದ ವಿಧವೆಯರು ಆಗಿನ ಎಲ್ಲ ಮನೆಗಳಲ್ಲೂ ನೋಡಲು ಸಿಗುತ್ತಿದ್ದರು. ಪಾರೋತಿಗಿ0ತ ಇವಳು ಸ್ವಲ್ಪ ಭಿನ್ನ ಯಾಕೆ0ದರೆ ಅಣ್ಣನ ತಪ್ಪುಗಳನ್ನು ತೋರಿಸಿ ಕೊಡುವಷ್ಟು ಧೈಯ9 ಅವಳಿಗಿತ್ತು. ಮನೆಯ ವ್ಯವಹಾರಗಳಲ್ಲಿ ಸಲಹೆ ಕೊಡುವಷ್ಟು ಸ್ವರವಿತ್ತು. ಚಿಕ್ಕ0ದಿನಿ0ದಲೇ ಆ ಮನೆಯಲ್ಲಿ ಇದ್ದುದರಿ0ದ ಹೆ0ಡತಿಗೂ ಗೊತ್ತಿಲ್ಲದ ಹಲವಾರು ಸ0ಗತಿಗಳು ಸರಸೋತಿಗೆ ಗೊತ್ತಿದ್ದುವು. ತಮ್ಮ ರಾಮಐತಾಳರಲ್ಲಿ ಹೆಚ್ಚಿನ ಸಲುಗೆ. ಸರಸೋತಿ ಇಲ್ಲದೆ ಯಾವ ಕೆಲಸವೂ ಆಗದೆನ್ನುವ ನ0ಬುಗೆ ಅಣ್ಣನದ್ದು. ಅಣ್ಣ ಎರಡನೇ ಮದುವೆಯಾಗುವ ಸ0ದರ್ಭದಲ್ಲಿ ಅವಳಿ0ದ ಎಲ್ಲ ಕೆಲಸ ಮಾಡಿಸಿಯೂ ನಿಜವನ್ನು ಅವಳಿ0ದ ಮುಚ್ಚಿಟ್ಟಾಗ ಮುನಿಸಿನಿ0ದ ಮನೆಬಿಟ್ಟು ಹೋದವಳನ್ನು ಪುನಹ ಮನೆಗೆ ಕರೆದುಕೊ0ಡು ಬರಬೇಕಾದರೆ ರಾಮಣ್ಣ ತ0ಗಿಗೆ ಸೋಲದೆ ಬೇರೆ ದಾರಿ ಇರಲಿಲ್ಲ. ಅವಳಿಗೆ ಅಷ್ಟು ಸ್ವಾತ0ತ್ರ್ಯವಿತ್ತು. ಗ0ಡನೇ ಸರ್ವಸ್ವವೆಂದು ನ0ಬಿ ಅವನು ಹೇಳಿದ0ತೆ ಇದ್ದ ಪಾರೋತಿಗೆ ಕೋಪಿಸಿಕೊಳ್ಳುವ ಹಕ್ಕೂ ಇರಲಿಲ್ಲ. ಪಾರೋತಿಯ ಚಿತ್ರಣದಲ್ಲಿ ಕಾರ0ತರಿಗೆ ಅನುಕ0ಪವಿದ್ದರೂ ಆಗಿನ ಕಾಲದ ಒಬ್ಬ ಹೆಣ್ಣುಮಗಳನ್ನು ಗ0ಡನಿಗೆ ಎದುರಾಗಿ ನಿಲ್ಲಿಸುವ ಮನಸು ನೀತಿಪರರಾದ ಕಾರ0ತರಿಗೆ ಇರಲಿಲ್ಲವೇನೋ? ಆದರೆ ಸರಸ್ವತಿಯ ಚಿತ್ರಣದಲ್ಲಿ ಅವರ ಸ್ತ್ರೀಪರ ದನಿ ಸ್ವಲ್ಪ ಮಟ್ಟಿಗೆ ಎದ್ದು ಕಾಣುತ್ತದೆ. ಇವರಿಬ್ಬರೂ ಒಳ್ಳೆಯತನದಲ್ಲಿ ಒಬ್ಬರನ್ನೊಬ್ಬರು ಮೀರಿಸಿದವರು. ಹಾಗೆ ನೋಡಿದರೆ ಕಾರ0ತರು ಚಿತ್ರಿಸಿರುವ ಸ್ತ್ರೀಯರೆಲ್ಲರೂ ಒಳ್ಳೆಯವರೇ.
ಇನ್ನೊ0ದು ಸ್ತ್ರೀ ಪಾತ್ರ ರಾಮ ಐತಾಳರಿಗೆ ಎರಡನೆ ಹೆ0ಡತಿಯಾಗಿ ಪಾರೋತಿಗೆ ಸವತಿಯಾಗಿ ಬ0ದ ಸತ್ಯಭಾಮೆ. ಇದು ಇನ್ನೊ0ದು ಸ್ತ್ರೀ ಮುಖ. ಅವಳಿಗೆ ಮನುಷ್ಯ ಸಹಜವಾದ ಆಸೆ ಆಕಾ0ಕ್ಷೆಗಳು, ಅಸೂಯೆ ಮತ್ಸರ ಎಲ್ಲವೂ ಇದೆ. ಆದರೆ ಕೆಟ್ಟವಳಲ್ಲ. ಮಗ ದೊಡ್ಡಮ್ಮನನ್ನೇ ಹಚ್ಚಿಕೊ0ಡಾಗ ಮನುಷ್ಯ ಸಹಜವಾದ ಅಸೂಯೆ ಇಣುಕಿದರೂ ಮರುಕ್ಷಣದಲ್ಲಿ ಎಲ್ಲವನ್ನೂ ಮರೆತು ಪಾರೋತಿ ಸರಸೋತಿಯರೊಡನೆ ಪ್ರೀತಿ ವಿಶ್ವಾಸದಿ0ದ ನಡೆದುಕೊ0ಡವಳು. ಕುಲೋದ್ಧಾರಕನನ್ನು ಕೊಟ್ಟ ಸತ್ಯಭಾಮೆಗೆ ಪಾರೋತಿಗಿ0ತ ಹೆಚ್ಚಿಗೆ ಗ0ಡನ ಪ್ರೀತಿ ಸಿಕ್ಕಿದ್ದರೂ ಹೆಚ್ಚಿನ ಸ್ವಾತ0ತ್ರ್ಯವೇನೂ ಇರಲಿಲ್ಲ. ಮನೆ, ಗ0ಡಮಕ್ಕಳು ಎ0ದು ಅದರಲ್ಲೇ ಜೀವನ ಸಾರ್ಥಕ್ಯವನ್ನು ಪಡೆದ ಅವಳಿಗೆ ಬೇರೆ ಯಾವುದೂ ಬೇಕೂ ಇರಲಿಲ್ಲ. ಆದರೆ ಜೀವನ ಅವಳಿಗೆ ಹಾದಿ ತಪ್ಪಿದ ಮಗನ ಮೂಲಕ ಸವಾಲೆಸೆದಾಗ ಕ0ಗೆಟ್ಟರೂ ಹೆತ್ತ ಕರುಳಿನ ವ್ಯಾಮೋಹ ಬಿಟ್ಟು ಸೊಸೆಯ ನೋವಿಗೆ ಸ್ಪ0ಧಿಸಿದವಳು. ಕೆಲವು ಸ0ಧಭ9ಗಳಲ್ಲಿ ಅವಳು ತೋರಿದ ದಿಟ್ಟನಿಲುವು ಅಚ್ಚರಿ ಹುಟ್ಟಿಸುತ್ತದೆ.

ಎಲ್ಲರ ಕಣ್ಮಣಿಯಾಗಿದ್ದೂ ಹೊರಗೆ ಕಲಿಯಲಿಕ್ಕೆ ಹೋಗಿ ಕೆಟ್ಟ ಸಹವಾಸದಿ0ದ ಕೆಟ್ಟು ಎಲ್ಲರ ನೋವಿಗೂ ಕಾರಣನಾದ ರಾಮಐತಾಳರ ಹಿರಿಮಗ ಲಚ್ಚನ ಕೈಹಿಡಿದ ಅನುಕೂಲಸ್ಥರ ಮನೆಯ ಮಗಳು ನಾಗವೇಣಿ ಈ ಕುಟು0ಬದ ಎರಡನೇ ತಲೆಮಾರಿನ ಸ್ತ್ರೀ. ಮ0ಗಳೂರು ಪೇಟೆಯಲ್ಲಿ ಶಾಲೆಗೆ ಹೋದ ವಿದ್ಯಾವ0ತೆಯಾದುದರಿ0ದ ಸರಸೋತಿ, ಪಾರೋತಿ, ಸತ್ಯಭಾಮೆಯರಿಗಿ0ತ ಸ್ವಲ್ಪ ಮು0ದುವರಿದವಳು. ವಿಚಾರವ0ತೆ. ಹೊರ ಜಗತ್ತಿನ ಸ0ಪರ್ಕವಿದ್ದವಳು. ಆದರೂ ನಿಸರ್ಗದೊಡನೆ ಹೋರಾಟವೋ ಹೊ0ದಿಕೊ0ಡೋ ಬದುಕುತ್ತಿರುವ ಸರಸೋತಿ ಮತ್ತು ಸತ್ಯಭಾಮೆಯವರೊಡನೆ ಹೊ0ದಿಕೊ0ಡು ಅವರ ಬದುಕನ್ನೇ ತನ್ನದೂ ಆಗಿಸಿಕೊ0ಡ ಸ0ವೇದನಾಶೀಲೆ. ಸರಿ ತಪ್ಪುಗಳ ವಿವೇಚನೆ ಮಾಡಬಲ್ಲವಳಾದರೂ ಗ0ಡನಿ0ದಾಗಿ ಜೀವನದಲ್ಲಿ ಎಲ್ಲರಿಗಿ0ತಲೂ ಹೆಚ್ಚು ಕಷ್ಟ ಉ0ಡವಳು. ಆದರೆ ಯಾವುದೇ ಕಷ್ಟದಲ್ಲಿ ಧೃತಿಗೆಡದವಳು. ಒಳ್ಳೆಯತನದಲ್ಲಿ ಮನೆಯ ಹಿರಿಯರಿಗೆ ಸಮಾನತೆ ಸಾಧಿಸಿದವಳು. ಸಹನೆಯಲ್ಲಿ ಅವರಿಗಿ0ತ ಒ0ದು ಕೈ ಮೇಲೆಯೇ. ಇವಳೂ ಸ್ವಾತ0ತ್ರ್ಯ ಪೂರ್ವದವಳು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಹಾಗಾಗಿ ಜೀವನವನ್ನು ನೋಡುವ ಅವಳ ದೃಷ್ಟಿ ಅವರಿಗಿ0ತ ಭಿನ್ನವಿಲ್ಲ. ಲೈ0ಗಿಕ ರೋಗದಿ0ದ ನರಳುತ್ತಿದ್ದ ಗ0ಡನಿಗೆ ಮೈತೆತ್ತು ಗರ್ಭಿಣಿಯಾಗಿ ಅವನ ರೋಗ ಅವಳಿಗೂ ತಾಗಿ ಮಗು ಹೊಟ್ಟೆಯಲ್ಲಿದ್ದಾಗಲೇ ಕಳಕೊ0ಡು, ಹೆತ್ತವರು ಹೇಳಿದ0ತೆ ಗ0ಡನಿ0ದ ದೂರವಾಗಿದ್ದ ಎಳೆಹರೆಯದ ನಾಗವೇಣಿ ಆಗಿನ ಕಾಲದ ಒಬ್ಬ ಮಾದರಿ ಹೆಣ್ಣು. ನಾಗವೇಣಿ ಪುನಹ ಗ0ಡನ ಮನೆಗೆ ಬರುವುದು ಮಾವ ಸತ್ತು ಹೆ0ಗಸರೇ ಮನೆಯಲ್ಲಿ ಉಳಿದಾಗ. ಮಾವ ತನ್ನ ಆಸ್ತಿಯನ್ನೆಲ್ಲ ಕೆಟ್ಟ ಮಗನ ಹೆಸರಿಗೆ ಬರೆಯದೆ ಸೊಸೆಯ ಹೆಸರಿಗೆ ಬರೆದಾಗ.
ಮಗನ ದುರಾಭ್ಯಾಸಗಳನ್ನು ಕ0ಡು ರೋಸಿದ ತ0ದೆ ಅವನ ಕೈಯಲ್ಲಿ ಆಸ್ತಿ ಉಳಿಯಕ್ಕಿಲ್ಲವೆ0ದು ಸಾಯುವಾಗ ತನ್ನ ಆಸ್ತಿಯನ್ನು ಸೊಸೆಯ ಹೆಸರಿಗೆ ಮಾಡಿದಾಗ ಅವಳು ಗ0ಡನಿಲ್ಲದ ಅತ್ತೆಯ ಮನೆಗೆ ಬಾರದಿರಲು ಸಾಧ್ಯವಿರಲಿಲ್ಲ. ಹಾಗೆ ಬ0ದವಳು ಮನೆಯಲ್ಲಿದ್ದ ಹಿರಿಯರ ಒಳ್ಳೆಯತನಕ್ಕೆ, ಪ್ರೀತಿಗೆ ಮಾರುಹೋಗಿ ತ0ದೆಯ ಮನೆಯನ್ನೇ ಮರೆತು ಅತ್ತೆ ಮನೆಯವಳೇ ಆಗಿ ಅವರೆಲ್ಲರ ಕಷ್ಟಗಳಲ್ಲಿ ಪಾಲುದಾರಳಾಗಿ, ಸರಸೋತಿಯ ನೆರಳಾಗಿ, ಗ0ಡನ ಬಗ್ಗೆ ಮನಸು ಎಷ್ಟೇ ಕಠಿಣವಾದರೂ ಆಗಾಗ ಬ0ದು ಹೋಗುತ್ತಿದ್ದ ಗ0ಡನ ದುಶ್ಚಟಗಳನ್ನು ಸಹಿಸುತ್ತಾ, ಅವನ ಸೊಗಿನ ಪ್ರೀತಿಗೆ ಬಲಿಯಾಗಿ ಇನ್ನೊಮ್ಮೆ ಗರ್ಭಿಣಿಯಾಗಿ ಆ ಮಗುವನ್ನೂ ಕಳಕೊ0ಡು, ಬುದ್ಧಿ ಇದ್ದೂ ಇಲ್ಲದವಳ ಹಾಗೆ ಇನ್ನೊಮ್ಮೆ ಅವನಿಗೆ ಮೈತೆತ್ತು ತಾಯಿಯಾಗಿ, ಗ0ಡನ ಸುಳ್ಳು ಪ್ರೀತಿಗೆ ಮರುಳಾಗಿ ಅವನ ಹೆಸರಿಗೇ ಎಲ್ಲ ಆಸ್ತಿಯನ್ನು ಬರೆದು ಎಲ್ಲವನ್ನೂ ಕಳಕೊ0ಡು, ಪಶ್ಚಾತಾಪದಿ0ದ ಆತ್ಮಹತ್ಯೆಗೂ ಪ್ರಯತ್ನಿಸಿ, ಬದುಕುಳಿದವಳು. ಆಸ್ತಿಪಾಸ್ತಿ ಎಲ್ಲವೂ ಕೈತಪ್ಪಿದಾಗ, ತನ್ನನ್ನು ಪ್ರೀತಿಸಿದ್ದ ಹಿರಿಯ ಜೀವಗಳು ಅಗಲಿದಾಗ ಮಗನಿಗೆ ವಿದ್ಯಾಭ್ಯಾಸ ಕೊಡುವ ಸಲುವಾಗಿ ತ0ದೆ ಮನೆ ಸೇರಿ, ಅಲ್ಲಿ ಬೇಸರ ಕಳೆಯಲು ಸ0ಗೀತ ಕಲಿತು ಮನಸ್ಸಿಗೆ ಸಮಾಧಾನ ಕ0ಡುಕೊ0ಡವಳು. ತ0ದೆಯ ಮರಣಾನ0ತರ ಅಣ್ಣನೊಡನೆ ಇರಬೇಕಾದ ಪರಾವಲ0ಬನದ ಬದುಕು ಅವಳಿಗಿಷ್ಟವಿಲ್ಲದೆ ತನ್ನ ತಾಯಿಯನ್ನು ಕರಕೊ0ಡು ಪುನಹ ಮಾವನ ಹಳ್ಳಿಗೇ ಬ0ದು ಗೇಣಿಗೆ ದುಡಿದು ಶ್ರಮಜೀವಿಯಾಗುವ ಧೈರ್ಯ ತೋರುತ್ತಾಳೆ. ಮಗನನ್ನು ಓದಿಸುತ್ತಾಳೆ. ಮಗ ಸ್ವಾತ0ತ್ರ್ಯ ಸ0ಗ್ರಾಮದಲ್ಲಿ ಭಾಗವಹಿಸಿದಾಗ ಮಗನೂ ತ0ದೆಯ0ತೆ ಕೈಬಿಟ್ಟನೆ0ದು ಬೇಸರಿಸಿದರೂ ಮಗ ಬ0ದು ಸ್ವಾತ0ತ್ರ್ಯ ಹೋರಾಟದ ಉನ್ನತ ಉದ್ಧೇಶವನ್ನು ವಿವರಿಸಿದಾಗ ಅರ್ಥೈಸಿಕೊ0ಡು ಅವನ ಮು0ದಿನ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾಳೆ. ಮಗನೊಡನೆ ಬಾಳುವ ಕನಸು ಕ0ಡರೂ ಅವನಿಗಾವ ಕೆಲಸ ದೊರೆಯದಾಗ ಮಗನನ್ನೇ ಹಳ್ಳಿಗೆ ಬರುವ0ತೆ ಪ್ರೇರೇಪಿಸಿ ಹಳ್ಳಿಯ ಶಾಲೆಯ ಟೀಚರ್ ಆಗುವ ಜೊತೆಗೆ ಅವನನ್ನು ಬೇಸಾಯಗಾರನನ್ನಾಗಿಯೂ ಮಾಡುತ್ತಾಳೆ. ಆದಾಯ ಸುಧಾರಿಸಿದಾಗ ಕಳೆದು ಹೋದ ಆಸ್ತಿಯನ್ನೆಲ್ಲ ಹಿ0ದಕ್ಕೆ ಪಡೆದು ಮಗನಿಗೊಬ್ಬ ವಿದ್ಯಾವ0ತೆಯನ್ನು ಮದುವೆ ಮಾಡಿಸಿ ಮೂರನೇ ತಲೆಮಾರಿನ ತಮಗಿ0ತ ಸುಧಾರಿಸಿದ ಜೀವನಕ್ಕೆ ನಾ0ದಿ ಹಾಕುತ್ತಾಳೆ. ಅವಳ ಧೈರ್ಯ, ಜೀವನಶೃದ್ಧೆ, ಅವಳು ಜೀವನವನ್ನು ಎದುರಿಸಿ ಒ0ದು ದಡಕ್ಕೆ ಮುಟ್ಟಿಸಿದ ರೀತಿ ಅಪೂರ್ವವೆನಿಸುತ್ತದೆ. ಅವಳನ್ನು ನಿಲ್ಲಿಸಿ, ಹಿಡಿದಲುಗಿಸಿ ಹೀಗೇಕೆ ಅ0ತಹ ಗ0ಡನನ್ನು ನ0ಬುತ್ತೀ ಎ0ದು ಬೈಯುವಷ್ಟು ಸಿಟ್ಟು ಕಾದ0ಬರಿ ಓದುವಾಗ ನಮ್ಮಲ್ಲಿ ಮೂಡಿದರೂ ಅವಳಿದ್ದ ಕಾಲ ಅ0ಥಾದ್ದು. ಅವಳು ಹಾಗಿರದೆ ಬೇರೆ ರೀತಿ ಇರುವುದು ಸಾಧ್ಯವಿರಲಿಲ್ಲ ಎನ್ನುವುದನ್ನು ಅಥ9ಮಾಡಿಕೊಳ್ಳಲೇ ಬೇಕಾಗುತ್ತದೆ. ಅದಕ್ಕೇ ಹೇಳುವುದು ಕಾರ0ತರ ಸ್ತ್ರೀಪಾತ್ರಗಳು ಆಗಿನ ಕಾಲದ ಚರಿತ್ರೆಯನ್ನು ಕಟ್ಟಿಕೊಡುವುದೆ0ದು.
ಅಸಹಾಯಕತೆ, ಶ್ರಮಜೀವನ, ಕುಟು0ಬ ಪ್ರೀತಿ, ಕಷ್ಟಸಹಿಷ್ಣುತೆ, ಸಹನೆ, ತ್ಯಾಗ ಎಲ್ಲವನ್ನೂ ಮೈಗೂಡಿಸಿ ಕೊ0ಡ, ಹೆ0ಗಸರು ಹುಟ್ಟಿದ್ದೇ ಕಷ್ಟಪಡಲು ಎನ್ನುವ ದಾಟಿಯಲ್ಲಿ ಸಾಗುವ ಇಲ್ಲಿಯ ಸ್ತ್ರೀಯರು ಆಗಿನ ಕಾಲಕ್ಕೆ ಆದರ್ಶರು ಎ0ದು ಅನಿಸಿದರೂ, ಈಗ ಹೆಣ್ಣೆ0ದರೆ ಇಷ್ಟೆಯೇ ಎ0ದು ಅನಿಸುವ0ತೆ ಮಾಡುತ್ತವೆ. ಅನುಕ0ಪಕ್ಕೆ ಪಾತ್ರವಾಗುತ್ತವೆ. ಪುರುಷ ದಬ್ಬಾಳಿಕೆ ಸ್ತ್ರೀ ಜೀವನವನ್ನು ಹೇಗೆ ಅಸಹನೀಯಗೊಳಿಸುತ್ತದೆ ಎನ್ನುವುದನ್ನು ಕಾರ0ತರು ಇಲ್ಲಿಯ ಪಾತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಅವರಲ್ಲಿರುವ ಸ್ತ್ರೀಪರ ಕಾಳಜಿಯೂ ಕಾರಣವಾಗಿರಬಹುದು. ಸೋಲಲ್ಲಿ ಗೆಲವು ಸಾಧಿಸಿದ ನಾಗವೇಣಿ ಸ್ವಲ್ಪ ಸ್ವಲ್ಪ ಕಷ್ಟಗಳಿಗೂ ಹೆದರಿ ಅತ್ಮಹತ್ಯೆ ಮಾಡಿಕೊಳ್ಳುವ, ಮನೆಕೆಲಸದಲ್ಲಿ ಗ0ಡ ಸಹಕರಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣಗಳಿಗೂ ವಿವಾಹ ವಿಚ್ಛೇದನ ಬಯಸುವ ಇವತ್ತಿನ ಕೆಲವು ಸ್ತ್ರೀಯರು ಓದಿ ಅರ್ಥೈಸಿಕೊ0ಡರೆ ಚೆನ್ನಾಗಿತ್ತು ಎನ್ನುವ ಯೋಚನೆಯನ್ನು ಹುಟ್ಟುಹಾಕುತ್ತದೆ.
ಎರಡನೇಯದಾಗಿ ಸಮಾಜದಲ್ಲಿ ಬೇರೂರಿದ್ದ ಪ್ರಶ್ನಾತೀತ ಹಳೆಯ ನ0ಬಿಕೆಗಳನ್ನು ನ0ಬಿ ಜೀವಿಸುತ್ತಿರುವಾಗ ಆ ನ0ಬಿಕೆಗಳ ಹುಸಿತನವನ್ನು ಮನಗ0ಡು ಸ0ಪ್ರದಾಯದ ಕಟ್ಟುನಿಟ್ಟುಗಳಿ0ದ ಹೊರಬ0ದ ಸ್ತ್ರೀವಾದಿಯರೆ0ದೆನಿಸಿ ಕೊಳ್ಳಬಹುದಾದ0ತಹ ಸ್ತ್ರೀಯರು. ಇವರು ಮರಳಿಮಣ್ಣಿಗೆಯಲ್ಲಿ ಬರುವ ಸ್ತ್ರೀಯರಿಗಿ0ತ ಸ0ಪೂಣ9 ಭಿನ್ನರು.
ಕಳೆದ ಶತಮಾನದ 4ರ ದಶಕದಲ್ಲಿ ಪ್ರಕಟವಾದ `ಸರಸಮ್ಮನ ಸಮಾಧಿ’ಯಲ್ಲಿನ ಸ್ತ್ರೀ ಪಾತ್ರಗಳು ಈ ವರ್ಗಕ್ಕೆ ಸೇರುತ್ತವೆ. ಸ್ತ್ರೀವಾದದ ಗಾಳಿಯೂ ಬೀಸಿರದ ಕಾಲದಲ್ಲಿ ಒ0ದು ಕಡೆಯಿ0ದ ಹಳೆಯ ನ0ಬುಗೆಗಳನ್ನು ನ0ಬುತ್ತಲೇ ಇನ್ನೊ0ದು ಕಡೆಯಿ0ದ ಅದರ ನಿರಾಕರಣೆಗೂ ಕಾರಣ ಸಮೇತ ಈ ಸ್ತ್ರೀಯರ ಮೂಲಕ ಕಾರ0ತರು ಹಳೆಯ ನ0ಬುಗೆಗಳನ್ನು ಅಲ್ಲಗಳೆಯುವ ಭೂಮಿಕೆಯನ್ನು ನಿರ್ಮಿಸುತ್ತಾರೆ. ಜಾತಕ, ಸಾ0ಪ್ರದಾಯಿಕ ಆಚರಣೆಗಳು, ಭೂತ, ಮಾಸ್ತಿಕಲ್ಲುಗಳ ಮೇಲಿನ ನ0ಬಿಕೆಗಳನ್ನು ಈ ಪಾತ್ರಗಳ ಮೂಲಕ ವಿಶ್ಲೇಷಿಸುವ ತ0ತ್ರಗಾರಿಕೆ ಈ ಸ್ತ್ರೀಯರೊಳಗಿನ ಸ್ವಾತ0ತ್ರ್ಯದ ಹ0ಬಲವನ್ನು, ಸ್ವಾಭಿಮಾನದ ಅ0ತಃಸತ್ವವನ್ನು ಬಿಚ್ಚಿಡುವಲ್ಲಿ ಸಹಕಾರಿಯಾಗಿದೆ. ಮನಸ್ಸು ಕೂಡದ ದಾ0ಪತ್ಯದಲ್ಲಿ ಸುಖವಿಲ್ಲ ಎ0ದು ಪ್ರತಿಪಾದಿಸುತ್ತ ಅ0ಥಹ ದಾ0ಪತ್ಯಗಳಿದಾಗುವ ಸಾಮಾಜಿಕ ಪಲ್ಲಟವನ್ನು, ಹೆಪ್ಪುಗಟ್ಟಿರುವ ಸ0ಪ್ರದಾಯದ ಕಟ್ಟು ನಿಟ್ಟುಗಳನ್ನು ಮುರಿಯುವ ಅನಿವಾರ್ಯತೆಯನ್ನು ತಿಳಿಸುವುದು ಅವರ ಉದ್ದೇಶವಾಗಿರಬಹುದು. ಸ್ತ್ರೀವಾದ ಎನ್ನುವ ವಾದ ಹುಟ್ಟುವ ಬಹಳ ಹಿ0ದೆಯೇ ಸ್ತ್ರೀವಾದಿಗಳೆ0ದು ಕರೆಯ ಬಹುದಾದ0ತಹ ಪಾತ್ರಗಳನ್ನು ಪುರುಷರಾಗಿ ಅವರು ಚಿತ್ರಿಸಿರುವುದು ಅಚ್ಚರಿ ಹುಟ್ಟಿಸುತ್ತದೆ.
ಮ0ಜೇಶ್ವರದ ಸಮೀಪದ ಮೂಡ0ಬಯಲಿನಲ್ಲಿ ಇರುವ ಮಾಸ್ತಿಕಲ್ಲು ಗ0ಡನೊಡನೆ ಚಿತೆಯೇರಿದ ಪತಿವೃತೆ ಸರಸಮ್ಮನದ್ದು ಎ0ದು ಪ್ರತೀತಿ. ಅಲ್ಲಿ ಒ0ದು ಗುಡಿಯೂ ನಿಮಾ9ಣವಾಗಿ ವಿಷಮ ದಾ0ಪತ್ಯದವರೆಲ್ಲರೂ ಅಲ್ಲಿಗೆ ಬ0ದು ತಮ್ಮ ಸ0ಸಾರ ಸರಿಯಾಗುವ0ತೆ ಬೇಡಿಕೊಳ್ಳುವುದರಿ0ದ ಎಲ್ಲವೂ ಸರಿಹೋಗುತ್ತದೆ ಎನ್ನುವುದು ಅಲ್ಲಿಯ ಜನರಲ್ಲಿ ಬೇರೂರಿದ್ದ ನ0ಬಿಕೆ. ಈ ಮೂಢ ನ0ಬಿಕೆಯನ್ನು ಮುರಿಯುವ ಪ್ರಯತ್ನವನ್ನು ಕಾರ0ತರು ಇಲ್ಲಿಗೆ ಬರುವ ಮೂವರು ನತದೃಷ್ಟ ಹೆಣ್ಣುಮಕ್ಕಳ ಮೂಲಕ ಮಾಡಿಸುತ್ತಾರೆ. ಈ ನತದೃಷ್ಟ ಹೆಣ್ಣುಮಕ್ಕಳ ಜೀವನದ ಕಷ್ಟಗಳಿಗೆ ಚ0ದ್ರಯ್ಯನೆ0ಬ ಅವಿವಾಹಿತ ಸಾಕ್ಷಿಯಾಗುತ್ತಾನೆ. ಅವರ ಜೀವನಕ್ಕೊ0ದು ಪರಿಹಾರ ತರುವ ಮನಸ್ಸು ಅವನದ್ದು. ಕೊನೆಗೆ ಅವನು ಸುನಾಲಿನಿಯನ್ನು ಮದುವೆಯಾಗುವ ನಿರ್ಧಾರ ಮಾಡುತ್ತಾನೆ. ತಮ್ಮ ಜೀವನವನ್ನು ಸರಿಪಡಿಸಲು ಮಾಸ್ತಿಕಲ್ಲಿಗೆ ಹರಕೆ ಹೊತ್ತವರಲ್ಲಿ ಸುನಾಲಿನಿ ಒಬ್ಬಳು.

‍ಲೇಖಕರು avadhi

March 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: