ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ..

ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)ಯಿಂದ ಕನ್ನಡ ಕಾವ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ರಾಜ್ಯ ಪ್ರಶಸ್ತಿಗಾಗಿ 2021 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಯು ರೂ 10000/-(ರೂ ಹತ್ತು ಸಾವಿರ ರೂಪಾಯಿ) ನಗದು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ವಯಸ್ಸಿನ ಯಾವುದೇ ನಿರ್ಬಂಧವಿಲ್ಲ, ಹೊರನಾಡಿನ ಕನ್ನಡ ಕವಿಗಳು ಕೂಡ ಭಾಗವಹಿಸಬಹುದು. ಕವಿ ಕರ್ಕಿಯವರ ಜನ್ಮದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಸಕ್ತ ಕವಿಗಳು ತಮ್ಮ ಸ್ವರಚಿತ 2021 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ನಾಲ್ಕು ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ.

ಅಧ್ಯಕ್ಷರು
ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)
ಚಂದ್ರನಂದಾ # 2712 ಸೆಕ್ಟರ್ ನಂ 12
ಮಹಾಂತೇಶ ನಗರ
ಬೆಳಗಾವಿ-590017

ದಿನಾಂಕ 12 ನವೆಂಬರ್ 2022 ರ ಒಳಗಾಗಿ ಕಳುಹಿಸಲು ಕೋರಲಾಗಿದೆ ಹೆಚ್ಚಿನ ವಿವರಗಳಿಗಾಗಿ 8453500025, 9901251436 ಸಂಪರ್ಕಿಸುವುದು.

‍ಲೇಖಕರು Admin

28 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading