ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೋಪಿ ತೊಟ್ಟ ಮಗು ನಡುಗುತ್ತಾ ನೋಡುತ್ತಿತ್ತು…

ಪ್ರಸನ್ನ ಚಲಂ

ಪಶ್ಚಿಮಘಟ್ಟಗಳ ನಡುವೆ ಬಸ್ಸೊಂದು ತಂಪು ಗಾಳಿಯನ್ನು ಸೀಳಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿತ್ತು.ಬಸ್ಸಿನೊಳಗಿದ್ದ ಕೆಲವರು ಆರಾಮಾಗಿ ನಿದ್ರಿಸುತ್ತಿದ್ದರು.ಕೆಲವರು ಪುಸ್ತಕಗಳನ್ನು ಓದುತ್ತಿದ್ದರು.ಇನ್ನು ಕೆಲವರು ಕಿಟಕಿಯಾಚೆಗಿನ ಸೌಂದರ್ಯವನ್ನು ಸವಿಯುತ್ತಿದ್ದರು.ಇವ್ಯಾವು ಗೋಜಿಗೆ ಸಿಲುಕದೇ ಬಸ್ ಡ್ರೈವರ್ ಬಸ್ ಚಾಲನೆ ಮಾಡುತ್ತಿದ್ದ.

ಇದ್ದಕ್ಕಿದ್ದಂತೆ ಕೆಲವು ದಂಡುಕೋರರು ಬಸ್ಸಿನೊಳಗೆ ನುಗ್ಗಿ ಹುಡುಕಿ ಹುಡುಕಿ ಕೊಚ್ಚಿಹಾಕುತ್ತಿದ್ದರು. ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಒಬ್ಬ ಪಕ್ಕದಲ್ಲೇ ಇದ್ದ ಮಗುವಿಗೆ ತನ್ನ ಬಿಳಿ ಟೋಪಿಯನ್ನು ಹಾಕಿ ಕುಳಿತ. ಬಂದ ದಂಡುಕೋರರು ಈತನನ್ನು ಕೊಚ್ಚಿಹಾಕಿದರು. ಟೋಪಿ ತೊಟ್ಟ ಮಗು ನಡುಗುತ್ತಾ ನೋಡುತ್ತಿತ್ತು.

 

‍ಲೇಖಕರು avadhi

15 March, 2013

1 Comment

  1. suvarna.c

    ಓ ಚಲಂ ನಿಮ್ಮ ಕಥೆ ತುಂಬಾ . . . . .! ಚನ್ನಾಗಿದೆ ಇದೇ ರೀತಿ ಕಥೆಗಾರಮಂಜಣ್ಣನಾಗಿ ದಾಖಲೆ ಮಾಡಿ. ಆಗ ನಮ್ಮನ್ನು ಮರೆಯಬೇಡಿ.
    ಚಲಂ ನನಗೆ ಒಂದು ಅನುಮಾನ ಕಾಡುತಿದೆ ನಿಮ್ಮ ಪಶ್ವಿಮಘಟ್ಟದ ರಸ್ತೆ ಚನ್ನಾಗಿದೆಯಾ ? ಕಥೆ ಕಟ್ಟಬೇಕು ಚಲಂ ಅದು ನಂಬುವ ರೀತಿ ಇರಬೇಕು. ಹೋಗಲಿ ಬಿಡಿ ಯೋಚನೆ ಮಾಡಬೇಡಿ ಮುಂದೆ ಿನ್ನೂಂದು ಜಲಪಾತದ ಬಗ್ಗ ಬರೆಯಿರಿ ಓಕೆ
    suvarna.c
    hassan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading