ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆ ಕಾಯ್ : ’ತಪ್ಪಲೆ ತಮ್ಮಾ..’

ಸೂತ್ರಧಾರ ರಾಮಯ್ಯ

ಭ್ರಷ್ಟತೆ ಅನ್ನೋ ಕೊಳಕನ್ನು ಕನ್ಟೇನ್ ಮಾಡಬೇಕಾದ ಕನ್ಟೇನರ್, ಐ ಮೀನ್ ‘ತಪ್ಪಲೆ ಅಶುದ್ಧ’ ವಾಗಿದ್ರು ಪರವಾಗಿಲ್ಲ, ಆದರೆ ಅದರಿಂದ ತುಂಬಿಕೊಂಡು ಕುಡಿಯೋ ಲೋಟ ಮತ್ತು ಚೊಂಬು ಮಾತ್ರ ಶುದ್ಧವಿರಬೇಕು ಅನ್ನೋದು ‘ಶುದ್ಧ ತಪ್ಪಲೆ’ ತಮ್ಮಾ?

ಸಾದೃಶ್ಯ ಒಂದು: ಒಂದುಕಡೆ RTI ( ಮಾಹಿತಿ ಹಕ್ಕು) ಜಾರಿ’ಗೆ ತಂದು ಸಾರ್ವಜನಿಕರ ಕೈ ಬಲಪಡಿಸುವುದು. ಇನ್ನೊಂದು ಕಡೆ, ತಮ್ಮ ಬುಡಕ್ಕೆ ಬಂದಾಗ ತಿದ್ದುಪಡಿ ತಂದು, ರಾಜಕೀಯ ಪಕ್ಷಗಳ ಕೈ ಬಲಪಡಿಸಿ ಬಾಯ್ತುಂಬ ‘ಮುಕ್ತ ಮುಕ್ತಾ’ ಇರಿ, ನೀವು ಯಾರಿಗೂ ಮಾಹಿತಿ ನೀಡಬೇಕಿಲ್ಲ ಅಂತ ‘ಜಾರಿ’ಕೊಂಡದ್ದು!
ಲಾ ಮೇಕರ್ಸ್ ಬಿವೇರ್ ಲಾ ಮೇ ಕರ್ಸ್?
ಅಪರಾಧಿಗಳು ಆಜ್ಞೆ ಮಾಡೋ ಐ ಗೋಳು, ಜೀ ಹುಜೂರ್ ಎಂಬುವರು ಪಿರ್ಯಾದಿಗಳು. ಎಂಥಾ vip ಪರಿಹಾಸ?
ಸಾದೃಶ್ಯ ಎರಡು: ಘೋಷಿತ ಅಪರಾಧಿ ಎನಿಸಿದರೂ, ಅಪೀಲ್ ಫೈಲ್ ಮಾಡಿದ ಮಾತ್ರಕ್ಕೆ ಅಬಾಧಿತರಾಗಿ, ಶಾಸನ ಮಾಡಿ ಕಾನೂನು ಜಳಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಸಾಮಾನ್ಯ ಜನರಿಗೆ ಅಪ್ಲೈ ಆಗೋದು ಬೇರೆ, ಇವರಿಗೆ ಸಪ್ಲೈ ಆಗೋದು ಬೇರೆ? ಮೋರ್ ಈಕ್ವಲ್ ಮಂದಿಯನ್ನು ಯಾವ ‘ಗೇಟೂ’ ತಡೆವನ್ತಿಲ್ಲಾ. ಕಾರಣ ಸುಪ್ರೀಂ ಆದೇಶವನ್ನೇ ನೆ ಗೇಟ್
ಮಾಡುವಂತ BILL ವಿದ್ಯಾ ಪ್ರಾವೀಣ್ಯತೆ!
ವಾಹ್ ಸನ್ !
‘ಪ್ಲೀಸ್ SIT’ ಅಂತಾ ಮೇಯಪ್ಪನಿಗೆ ಪಣವತ್ತಾದ s eat ಕೊಟ್ಟರು. ಅವನು ಅದನ್ನೇ (eat) ವಿಪರೀತ ಮಾಡಿ ಸಿಕ್ಕಿಕೊಂಡಮೇಲೆ ಈಗ ಮತ್ತೆ ‘SIT’ ಮಾಡಿ( ಸ್ಪೆಷಲ್ ಇನ್ವೆಸ್ಟಿಗೆಟಿಂಗ್ ಟೀಮ್ ) ಮೇದದ್ದನ್ನು ಕಕ್ಕಿಸಿ ಅನ್ನುತ್ತಿದ್ದಾರಂತೆ?
error-t-error?
ಇತ್ತಲಾಗಿ ‘s word ‘ ಹಿಡಿದು ಎದುರು ಬದರು ಯುದ್ಧಕ್ಕೆ ನಿಲ್ಲುವಂತಾ ಧೈರ್ಯವಂತರೂ ಅಲ್ಲ. ಅತ್ತಲಾಗಿ words ಹಿಡಿದು ಅರ್ಥಾತ್ ಮಾತು ಕತೆ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳೋ ವಿವೇಕಿಗಳೂ ಅಲ್ಲ. ಬದಲಿಗೆ ಅಮಾಯಕರ ಜೀವ ತೆಗೆವ ಬಾಂಬ್ಗೆ ಬತ್ತಿ ಇಟ್ಟು ಕೊಲ್ಲುವ ಕ- ವರ್ಡ್ಸ್ ಅಂದರೆ ಮನೋರೋಗಿಷ್ಟ, ಹಾದಿ ತಪ್ಪಿದ ಜೀ ಹಾದಿಗಳೇ. ಇವರನ್ನು ಹೇಯೋತ್ಪಾದಕರು ಅಂತಾ ಕರೆಯೋದೇ ಸರಿಯಾದ ವರ್ಡ್?
END ಗುಟುಕು
ಎಲೆಕ್ಷನ್ ಗಳಲ್ಲಿ ಗೆಲ್ಲಬೇಕೆ? ಕೂಡಲೇ ಧನಂ-ಜಯ ಅಂತ ಹೆಸರಿಟ್ಟುಕೊಂಡು ‘ಪರ್ಸ್’ ನಾಲ್ಟಿ ಡೆವೆಲಪ್ ಮಾಡಿಕೊಳ್ತಾ ಹೋಗಿ..
 
 

‍ಲೇಖಕರು avadhi

24 September, 2013

2 Comments

  1. Prabhakar Nimbargi

    Whatever is impossible in civilized countries is possible here and the irony is that we are compelled to bear with it.

  2. malathi S

    :-)ಎಂಜಾಯ್ಡ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading