ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆ ಕಾಯ್ : ಟಿವಿ ಕಿವಿಮಾತು

ಗಾದೆ (ಕಿವಿ) ಮಾತು

– ಸೂತ್ರಧಾರ ರಾಮಯ್ಯ.

ಕಾವೀಲಿ ಬಂದಮಾನ; ಟೀವೀಲಿ ಹೋಯಿತಂತೆ.

ಕಸ ಎತ್ತದೆ ಬೀದಿಗಳು ನಾರ್ತಿರೋದು ಸಾಲದೆ, ಕ. ಸ ಗಳ ಸುದ್ದಿತಂದು (ಕಪಟ ಸನ್ಯಾಸಿಗಳ) ಮನೆಮನೆಗೂ ಸುರಿದ್ರಂತೆ?

ಕಾವಿ ಇಲ್ಲದೆ ಟೀವಿ ಇಲ್ಲಾ, ಆರತಿ ಎತ್ತದೆ ನಿತ್ಯೋತ್ಸವವಿಲ್ಲ.

ಹೋದೆಯಾ ಮೂಢಆತ್ಮಾ ಅಂದ್ರೆ, ಬಂದೇ ಟೀವಿ ಪರದೇಲಿಳಿದು ಆಂಧರಂತೆ.

ಗುಂಡೋ ಪಾಕ್ಯಾನ

ತೂರಾಡಿಸ್ಕೊಂಡಿರೋದ್ ಬಿಟ್ಟು, ಹಾರಾಡ್ಸೋಕೋಗಿ ಕೆಟ್ರಂತೆ!

ಗುಂಡು ಹಾಕಿದವಾ ಮಾನ ಕಳಕೊಂಡ್ರೆ ; ಗುಂಡು ನೀಡಿ ದವಾ ವಿ-ಮಾನ ಕಳಕೊಂಡ್ನನ್ತೆ.

‘ಯಾರಲ್ಲಿ, put him behind bar ‘ ಅಂದ್ರೆ, ನಾ ಹುಟ್ ಬೆಳದದ್ದೇ ಬಾರಲ್ಲಿ ಅಂದನಂತೆ.

ಅಪ್ಪನ flight-plight never end! ಅಂದುಕೊಂಡ್ಮಗ, ರೆವರೆಂಡ್ ಆದನಂತೆ.

ರಾಜಕೀಯ ಗೀಜಕೀಯಾ?

ಒಳ್ಳೆಯವರ್ಮಾನ ದಿಳ್ಳೀಲಿ ಹೋಯಿತಂತೆ !

ಕೈ ಕೆಸರ್ಯ್ಯಾಕೆ ಅಂತಾ ಆಳೋರ್ನ ಕೆಳ್ತಾ, ಅಳೋರ ಕಾಲ್ ಕೆಳಗೂ ಕೆಸರಂತೆ?

ಲಾಗಾಯ್ತಿಂದ ಲೀಡರ್ಸ್ ಧರ್ಮರಾಯರು ಒಕ್ಕಿದ್ದನ್ನ; ಡೀಲರ್ಸ್ ದುರ್ಯೋ ಧನರು ಮುಕ್ಕಿದ್ರಂತೆ.

ಯಾರಿಗ್ ಕೊಟ್ಟೋ ಕೋಡಂಗಿ ಅಂದ್ರೆ, ಈಸ್ಕಂಡವನು ಈರಭದ್ರು ಅಲ್ಲಾ; steal ಮಂತ್ರಿ ಅಂದನಂತೆ.

ವಾರ್ ಪವರ್ ದರ್ಬಾರಲ್ಲಿ ಪೂರ್ತಿ ನೀ ತಿನ್ನು; pressಣೆ ಮಾಡಿದರೆ ನಾನಲ್ಲ ಗಾನ್ ದಾರಿ (IRB) ಅನ್ನು.

(ರಿ)ಪಬ್ಲಿಕ್ ಬನಾನ ತೋಟದಲಿ ಮದ ಕರಿಗಳ ವಿಲಾಸವೋ ವಿಲಾಸ!

ಇರದ ಕಂಪನಿಯ ಇಲ್ಲದ ನಿರ್ದೇಶಕರ (ವಿಧಿ) ವಿಳಾಸ ?

ವೋಟ್ ಭಜನೆ ಅಥವಾ V ಭಜನೆ?

ವಿಶ್ವ ಕನ್ನಡ ಮೆರವಣಿಗೆಯಲಿ ಕತ್ತಿ ಹಂಚತಾರ ಕನ್ನಡ ಕಸ್ತೂರಿ;

ಅಧಿಕಾರಕ್ಕೀಗ ಮತ್ತ (ಮತ ?) ಮಸೀತಾರಾ ಕತ್ತಿ, ಕಣ್ಣಿಗೆ ಕಸತೂರಿ?

 

‍ಲೇಖಕರು G

28 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading